Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನನ್ನ ಮೇಲೆ ಇದು 22ನೇ ಎಫ್ ಐಆರ್; ಕಾನೂನಿನ ಮೂಲಕವೇ ಉತ್ತರ ಕೊಡುತ್ತೀನಿ; ಮಾಜಿ ಸಂಸದ ಪ್ರತಾಪ್ ಸಿಂಹ


ಮೈಸೂರು; ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದ ಗಣೇಶ ಮೂರ್ತಿ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ನನ್ನ ಮೇಲೆ ಟಿ.ನರಸೀಪುರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನನ್ನ ಮೇಲೆ 21 ಎಫ್‌ಐಆರ್‌ಗಳನ್ನು ಹಾಕಿದ್ದಾರೆ. ಓ.ನರಸೀಪುರದ್ದು ಈಗ 22 ನೇಯದ್ದು ಆಗಿದೆ. ಟಿ.ನರಸೀಪುರದಲ್ಲಿ ಪ್ರಚೋದನೆ ಕೊಟ್ಟಿದ್ದು ಇನ್ಸ್ಪೆಕ್ಟರ್ ಧನಂಜಯ, ಆತನ ಮೇಲೆ ಎಫ್‌ಐಆರ್ ಹಾಕಿದ್ದರೆ, ಇಲ್ಲವೇ ವರ್ಗಾವಣೆ ಮಾಡಿದ್ದರೆ, ರಜೆ ಮೇಲೆ ಕಳುಹಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ
ಅದನ್ನು ಬಿಟ್ಟು ನನ್ನ ಮೇಲೆ ಎಫ್‌ಐಆರ್ ಹಾಕಿದ್ದಾರೆ ಅಂತ ತಿಳಿಯಿತು. ಐಜಿ ವಿಷ್ಣುವರ್ಧನ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಎಲ್ಲರೂ ಕೂಡ ಒಳ್ಳೆಯ ಅಧಿಕಾರಿಗಳು. ಅಂತಹವರ ನಡುವೆ ಇವನೊಬ್ಬ ತರ್ಲೆ ಇನ್ಸ್ಪೆಕ್ಟರ್ ಇದ್ದಾನೆ. ಮೊದಲೇ ಪ್ರಿಯಾಂಕಾ ಖರ್ಗೆ ಗೃಹ ಸಚಿವ ಅಲ್ವಾ, ಹೀಗಾಗಿ ಆ ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ ಎಂದರು.
ನಾನೇನು ಮುಡಾ ಸೈಟು ಹೊಡೆದು ಎಫ್‌ಐಆರ್ ಹಾಕಿಸಿಕೊಂಡಿಲ್ಲ. ಬುದ್ಧ, ಸಿದ್ಧಾರ್ಥ ಟ್ರಸ್ಟ್ ಹೆಸರಿನಲ್ಲಿ ಭೂಮಿ ಕೊಳ್ಳೆ ಹೊಡೆದು ಎಫ್‌ಐಆರ್‌ಹಾಕಿಸಿಕೊಂಡಿಲ್ಲ, ಅಪ್ಪನ ಹೆಸರಿನಲ್ಲಿ ರಾಜಕೀಯಕ್ಕೆ ಬಂದಿಲ್ಲ. ನಾನೊಬ್ಬ ಪತ್ರಕರ್ತ . ಕಾನೂನಿನ ಮೇಲೆ ಗೌರವವಿದೆ,
ಕಾನೂನು ಮೂಲಕವೇ ಉತ್ತರ ಕೊಡ್ತೀನಿ ಎಂದು ಗುಡುಗಿದರು.