
ಮೈಸೂರು; ನಗರದ ಅಂಬಾವಿಲಾಸ ಅರಮನೆ ಆವರಣದ ದಸರಾ ಗಜಪಡೆಗಳ ಕ್ಯಾಂಪ್ ನಲ್ಲಿ ಸೋಮವಾರ
ಗಜಪಡೆಯ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರಿಗೆ ಟೀ ಶರ್ಟ್, ದಿನ ಬಳಕೆಯ ವಸ್ತುಗಳು, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಆಟದ ವಸ್ತುಗಳನ್ನು ವಿತರಿಸಲಾಯಿತು.
ಜಂಗಲ್ ಲಾಡ್ಜಸ್ ಅಧ್ಯಕ್ಷ, ಶಾಸಕ ಅನಿಲ್ ಚಿಕ್ಕಮಾದು ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ವಸ್ತುಗಳನ್ನು ವಿತರಿಸಿದರು. ಮಾವುತರು ಮತ್ತು ಕಾವಾಡಿಗಳ ಕುಟುಂಬಗಳ ಜೊತೆ ಅವರು ಬೆರೆತು ಸಂತಸದ ಕ್ಷಣಗಳನ್ನು ಕಳೆದರು. ಇದರ ಜೊತೆಗೆ ಲಲಿತ್ ಮಹಲ್ ಅರಮನೆಯಲ್ಲಿ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಭೋಜನ ವ್ಯವಸ್ಥೆ ಮಾಡಿದ್ದರು.
ಕಾಡಿನ ಮಕ್ಕಳ ಜೊತೆ ಅನಿಲ್ ಚಿಕ್ಕಮಾದು, ಪ್ರಭಾಕರ್ ಮತ್ತವರ ಕುಟುಂಬ ಸದಸ್ಯರು, ಗೆಳೆಯರ ಬಳಗ ಎಲ್ಲರೂ ಬೆರೆತು ಇಡೀ ದಿನ ಕಳೆದದ್ದು ಇನ್ನೊಂದು ವಿಶೇಷವಾಗಿತ್ತು.
ಮಂಜುನಾಥ್, ಆನಂದ್ , ರಘು, ಬೈಪಾಸ್ ಮಂಜು, ಗಡಿ ಎಕ್ಸ್ಪ್ರೆಸ್ ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾದರು.