
ನಂಜನಗೂಡು; ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಂಚನಹಳ್ಳಿಯ ಸ್ವಾಮಿವಿವೇಕಾನಂದಯೂತ್ ಮೂಮೆಂಟ್, ಎಸ್‌ಬಿಐ ಹಾಗೂ ನಯಾರ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರು ಜಿಲ್ಲೆಯ ವಿಶೇಷ ಚೇತನರಿಗೆದಿನಾಂಕ ಸೆ.೨೮ ರಿಂದ ೪ ದಿನಗಳಕೃಷಿ ಆಧಾರಿತ ತರಬೇತಿಯನ್ನು ಹಾಗೂ ವಿಶ್ವರೇಬಿಸ್ ದಿನಾಚರಣೆಯನ್ನು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಾಮಿವಿವೇಕಾನಚಿದ ಯೂತ್ ಮೂಮೆಂಟ್‌ನ ನಿರ್ದೇಶಕ ಕೆ.ಅರ್. ಶಂಕರ್ ಮಾತನಾಡಿ, ಸಾಮಾನ್ಯವಾಗಿ ಗಾಮೀಣ ಜನರಿಗೆ ಪಶು ಸಂಗೋಪನೆ, ಕೋಳಿ-ಕುರಿ ಸಾಕಾಣಿಕೆ ಪರಿಚಯವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಶು ಸಂಗೋಪನೆ ಹಾಗೂ ಇನ್ನಿತರೆ ಕೃಷಿ ವಲಯದಲ್ಲಿ ಆಗಿರುವ ಆವಿಷ್ಕಾರಗಳನ್ನು ಪರಿಚಯ ಮಾಡಿಕೊಳ್ಳುವುದಕ್ಕೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯನ್ನು ಪಡೆದವರುತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟೆಕ್ನೋಏಜೆಂಟ್‌ಗಾಗಿಕಾರ್ಯನಿರ್ವಹಿಸಬೇಕೆAದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ. ರಮೇಶ್ ಮಾತನಾಡಿ, ವಿಶೇಷ ಚೇತನರು ಯಾವುದಾದರೂ ಸಾಧನೆಯನ್ನು ಮಾಡಬೇಕು ಎಂಬ ಛಲದಿಂದ ಕೆಲವನ್ನು ಕೈಗೊಂಡರೆ, ನೂರಾರು ದಾರಿಗಳು ಕಾಣಸಿಗುತ್ತದೆ. ಕೃಷಿ, ಪಶು ಸಂಗೋಪನೆ ಜೊತೆಗೆ ಮೌಲ್ಯವರ್ಧನೆಯನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡರೆ, ಹೆಚ್ಚಿನ ಲಾಭ ಗಳಿಸಬಹುದೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಹಸು, ಕೋಳಿ-ಕುರಿ ಸಾಕಾಣಿಕೆ ಒಂದು ರೀತಿ ಎಟಿಎಂ ಮಿಷಿನ್ ಇದ್ದಂತೆ, ನಿಯಮಿತವಾಗಿ ಆದಾಯ ಬರುತ್ತಿರುತ್ತದೆ. ಇದರ ಜೊತೆಗೆ ದೇಸಿ ಹಸುವಿನ ಬೆಣ್ಣೆ, ತುಪ್ಪ, ಪನ್ನೀರ್‌ಗಳನ್ನು ತಯಾರಿಸಿ ಮಾರಾಟ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದೆಂದು ಸಲಹೆ ನೀಡಿದರು. ಕೆವಿಕೆಯ ತಜ್ಞರ ಸಲಹೆ ಮೇರೆಗೆ ಪಶು ಸಂಗೋಪನೆ ಮಾಡಿದರೆ, ವೆಚ್ಚ ಕಡಿಮೆ ಮಾಡಿಕೊಳ್ಳಬಹುದುಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ್ಲೆ ಪಶು ಇಲಾಖೆಯಹಿರಿಯ ಪಶುವೈದ್ಯಾಧಿಕಾರಿ ಡಾ. ವಿಜೇತ್‌ರವರು ವಿಶ್ವರೇಬಿಸ್ ದಿನಾಚರಣೆ ಅಂಗವಾಗಿ ಮಾತನಾಡಿ, ರೇಬಿಸ್ ರೋಗದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತುಹಾಗೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎನ್. ಮಹೇಂದ್ರ, ಎಂ.ಜಿ. ರಮೇಶ್, ಎಂ.ಪಿ. ರಮೇಶ್, ಕವಿತಾ, ಡಾ. ಅಕ್ಷತಾ, ಡಾ. ಯು.ಎಂ. ರಕ್ಷಿತ್‌ರಾಜ್ ಉಪಸ್ಥಿತರಿದ್ದರು.