Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶಾಲಾ ವಾಹನ ಹರಿದು ಸ್ಥಳದಲ್ಲೇ ಮಗು ಸಾವು

ಹುಣಸೂರು; ರಸ್ತೆ ಬದಿ ನಿಂತಿದ್ದ ಮಗುವಿನ ಮೇಲೆ ಶಾಲಾ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನಂಜಪುರ ಗ್ರಾಮದಲ್ಲಿ ಇಂದು ಸಝೆ ೩.೩೦ರಲ್ಲಿ ಸಂಬವಿಸಿದೆ.

ಗ್ರಾಮದ ಪುಟ್ಟಶೆಟ್ಟಿ ರವರ ಮಗ ಬಸವರಾಜು ಮತ್ತು ಕಾಂಚನ ದಂಪತಿಗಳ ಒಂದುವರೆವರ್ಷದ ಪುತ್ರಿ ಲತಿಕ್ಷಾ ಎಂಬ ನತದೃಷ್ಠ ಬಾಲಕಿಯೆ ಅಪಘಾತದಲ್ಲಿ ಮೃತಪಟ್ತ ನತದೃಷ್ಠ ಬಾಲಕಿಯಾಗಿದ್ದಾಳೆ.

  ಹುಣಸೂರು ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯ ಕೆ.ಎ-೪೫ ಎ-೨೫೦೯ ನಂಬರಿನ ಶಾಲಾ ವಾಹನವೇ ಅಪಘಾತವೆಸಗಿದ ವಾಹನವಾಗಿದ್ದು ಚಾಲಕ ಸಿದ್ದರಾಜು ನನ್ನು ಗ್ರಾಮಸ್ಥರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಬಸವರಾಜು ಮತ್ತು ಕಾಂಚನ ದಂಪತಿಗಳ ನಾಲ್ಕು ವರ್ಷದ ಮೊದಲನೆ ಮಗ ತಿಲಕ್ ಹುಣಸೂರಿನ ಶಾಸ್ತ್ರಿ ಶಾಲೆಯಲ್ಲಿ ಒದುತಿದ್ದು ಇಂದು ಮದ್ಯಾಹ್ನ ಶಾಲೆ ಮುಗಿಸಿ ಶಾಲಾ ವಾಹನದಲ್ಲಿ ಗ್ರಾಮಕ್ಕೆ ಬಂದಾಗ ತಾಯಿ ಕಾಂಚನ ಮಗನನ್ನು ಇಳಿಸಿಕೊಳ್ಳಲು ವಾಹನ ಹತ್ತಿರ ಬಂದು ಮಗನನ್ನು ಇಳಿಸಿಕೊಂಡು ಮನೆಗೆ ಹೋಗುವಾಗ ರಸ್ತೆ ಬದಿ ನಿಂತಿದ್ದ ಮೃತ ಹೆಣ್ಣು ಮಗು ಮೆಲೆ ಶಾಲಾ ವಾಹನ ಹಿಮ್ಮುಖವಾಗಿ ಚಲಿಸಿ ಮಗುವಿನ ತಲೆಯ ಮೇಲೆ ಚಕ್ರ ಹರಿದು ಮಗು ಸ್ಥಳದಲ್ಲೇ ಮೃತಪಟ್ಟಿದೆ

ತಕ್ಷಣ ಮೃತಪಟ್ತಿರುವ ಮಗುವನ್ನು ಹುಣಸೂರಿನ ಖಾಸಗಿ ಅಸ್ಪತ್ರೆಗೆ ಕರೆತಂದಿದ್ದು ಅಸ್ಪತ್ರೆಯ ಮುಂದೆ ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸಿದಾಗ ಅಸ್ಪತ್ರೆಯವರು ಮಗುವಿನ ಮೃತ ದೇಹವನ್ನು ಸರ್ಕಾರಿ ಅಸ್ಪತ್ರೆಗೆ ಸಾಗಿಸಲಾಯಿತು.

ಈ ಸಂಬಂದ ಬಿಳಿಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಚಾಲಕಸಿದ್ದರಾಜು ನನ್ನು ಬಂದಿಸಿ ಶಾಲಾ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.