ವಿ.ಶ್ರೀನಿವಾಸ ಪ್ರಸಾದ್ ವ್ಯಕ್ತಿಯಾಗಿರದೇ ಸಾಮಾಜಿಕ ಕಳಕಳಿಯ ಸಮಾಜದ ಶಕ್ತಿಯಾದವರು; ಛಲವಾದಿ ನಾರಾಯಣಸ್ವಾಮಿ
ನಂಜನಗೂಡು; ವಿ.ಶ್ರೀನಿವಾಸ ಪ್ರಸಾದ್ ರವರು ವ್ಯಕ್ತಿಯಾಗಿರದೇ ಸಾಮಾಜಿಕ ಕಳಕಳಿಯ ಸಮಾಜದ ಶಕ್ತಿಯಾದವರು, ಬಿ.ಬಸವಲಿಂಗಪ್ಪ, ವಿ ಶ್ರೀನಿವಾಸ ಪ್ರಸಾದ್ ಇಬ್ಬರು ದಲಿತ ಸಮುದಾಯದ ಹುಲಿಗಳು, ಬೇರೆ ಎಲ್ಲಾ ನಾಯಕರು ಸ್ವಾರ್ಥ ತುಂಬಿದ ಚಮಚಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ವಿ ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ವಿ ಶ್ರೀನಿವಾಸ ಪ್ರಸಾದ್ ರವರ 79ನೇ ಜನ್ಮ ದಿನಾಚರಣೆ ಹಾಗೂ ಸ್ವಾಭಿಮಾನಿಯ ಧೀಮಂತ ಹೆಜ್ಜೆಗಳು…