Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಉದ್ದೇಶಪೂರ್ವಕವಾಗಿ ನನ್ನ ವಿರುದ್ದ ಇಲ್ಲಸಲ್ಲದ ಅಪಪ್ರಚಾರ; ಶಾಸಕ ಅನಿಲ್ ಚಿಕ್ಕಮಾದು 

ಎಚ್ .ಡಿ. ಕೋಟೆ : ಕೆಲ ಮಾಧ್ಯಮಗಳು ನನ್ನ ವಿರುದ್ದ ಇಲ್ಲಸಲ್ಲದ ಅಪಪ್ರಚಾರ ಮಾಡಿ,  ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹೆಚ್ ಡಿ ಕೋಟೆಯಲ್ಲಿ ಏನೇ ಘಟನೆ ಸಂಭವಿಸಿದರೂ  ನನ್ನ ಭಾವಚಿತ್ರ ಜೊತೆಗೆ ಮೈಸೂರು ಜಿಲ್ಲಾಧಿಕಾರಿ ಫೋಟೋ ಇರುತ್ತೆ. ಯಾವನೋ ಒಬ್ಬ ಅವಿವೇಕಿ ಅಧಿಕಾರಿ ಮರಣ ಪ್ರಮಾಣ ಪತ್ರ ಕೊಡಲು ಎರಡು ಸಾವಿರ ರೂಪಾಯಿ ಲಂಚ ತೆಗೆದುಕೊಂಡರೆ ನಾನು ಹೇಗೆ ಹೊಣೆ ಆಗುತ್ತೇನೆ. ಅವನು ಲಂಚ  ತೆಗೆದುಕೊಂಡಿರುವುದು ನನಗೆ ಕನಸಿನಲ್ಲಿ ಬಂದಿರುತ್ತಾ? ಅಥವಾ ನಾನು ಅವನಿಗೆ ಲಂಚ ತೆಗೆದುಕೊಂಡು ಸರ್ಟಿಫಿಕೇಟ್  ಕೊಡು ಎಂದು ಹೇಳಿದ್ದೀನಾ? ಕೆಲ ಅಧಿಕಾರಿಗಳು ಮಾಡುವ ಕೆಲಸಕ್ಕೆ ಶಾಸಕರನ್ನು ಹೊಣೆ ಮಾಡುವುದು ಎಷ್ಟು ಸರಿ ಎಂದು ಶಾಸಕ ಅನಿಲ್ ಚಿಕ್ಕಮಾದು ಪ್ರಶ್ನೆ ಮಾಡಿದರು. 

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ  ಪ್ರಜಾಪ್ರಭುತ್ವದ ಭಾರತದಲ್ಲಿ ಸಾಂವಿಧಾನಿಕ ಮೌಲ್ಯಗಳು, ಯುವಜನತೆ ಹಾಗೂ ಸಂಘಟನೆಗಳ ಪಾತ್ರ ಕುರಿತು ವಿಚಾರ ಸಂಕಿರಣ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಎಚ್.ಡಿ.ಕೋಟೆ ತಾಲ್ಲೂಕು ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇವತ್ತು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾ ರಂಗ ಒಟ್ಟಾಗಿ ಕೆಲಸ ಮಾಡಿದರೆ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು. ಅದನ್ನು ಬಿಟ್ಟು ಉದ್ದೇಶಪೂರ್ವಕವಾಗಿ ಸುಳ್ಳು ಸುಳ್ಳು ಆರೋಪ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಿಲ್ಲ. ಪ್ರಶ್ನೆ ಮಾಡಬೇಡಿ ಎಂದು ಹೇಳುತ್ತಿಲ್ಲ. ನನ್ನ ತಪ್ಪು ಮಾಡಿದರೆ, ನನ್ನನ್ನ ಬಂಧಿಸಲಿ. ನನ್ನ ಒಬ್ಬನೇ ಭಾವಚಿತ್ರ ಯಾಕೆ  ಹಾಕ್ತಿರಾ, ಪ್ರಧಾನಿ ಮೋದಿ, ಆ ಇಲಾಖೆಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಫೋಟೋ ಹಾಕಿ ಪ್ರಶ್ನೆ ಮಾಡಿ ಎಂದು ಖಾರವಾಗಿಯೇ ಹೇಳಿದರು. 

ಮೋದಿ ಪ್ರಶ್ನೆ ಮಾಡಿ: 

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 15 ವರ್ಷ ಆಗುತ್ತಿದೆ. ಆರಂಭದಲ್ಲಿ ಎರಡು ಕೋಟಿ ಉದ್ಯೋಗ ಕೊಡುತ್ತೀನಿ ಎಂದು ಭರವಸೆ ನೀಡಿದ್ದರು. ಇವತ್ತು ಎಷ್ಟು ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆ. ಅದನ್ನು ಪ್ರಶ್ನೆ ಮಾಡಿ. ಕೇವಲ ಶಾಸಕರನ್ನ ಮಾತ್ರವಲ್ಲ, ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಿಮಂತ್ರಿಗಳನ್ನು ಪ್ರಶ್ನೆ ಮಾಡಿ, ನನ್ನ ಒಬ್ಬನೇ ಯಾಕೆ ಟಾರ್ಗೆಟ್ ಮಾಡ್ತೀರಾ ಎಂದು ಶಾಸಕ ಅನಿಲ್ ಚಿಕ್ಕಮಾದು ಪ್ರಶ್ನೆ ಮಾಡಿದರು. 

ಕೋಟೆಯಲ್ಲಿ ಉದ್ಯೋಗ ಸೃಷ್ಟಿ ಕಷ್ಟ:  

ಹೆಚ್ ಡಿ ಕೋಟೆ ತಾಲೂಕು  ಪರಿಸರ ಸೂಕ್ಷ್ಮ ವಲಯ ಆಗಿರುವುದರಿಂದ ಗಾರ್ಮೆಂಟ್ಸ್, ಫ್ಯಾಕ್ಟರಿ ಓಪನ್ ಮಾಡುವುದು ಕಷ್ಟ. ಕಾರ್ಖಾನೆಗಳನ್ನು ಓಪನ್ ಮಾಡಿದ್ರೆ, ಅದರಿಂದ ಬರುವ ಹೊಗೆ ಪರಿಸರಕ್ಕೆ ಸೇರುತ್ತೆ ಎಂಬ ನಿಟ್ಟಿನಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಪ್ರೊ. ಇಂದಿರಾ ಕೃಷ್ಣಪ್ಪ, ಕೆ.ಎನ್. ಮಹದೇವಸ್ವಾಮಿ, ಸಿದ್ದರಾಜು, ದೊಡ್ಡಿಂದುವಾಡಿ, ಟಿ.ಎಚ್. ಹಾಲೇಶಪ್ಪ, ಈರೇಶ್ ಹಿರೇಹಳ್ಳಿ, ಮಲ್ಲಹಳ್ಳಿನಾರಾಯಣ್, ದೊಡ್ಡಸಿದು, ಚಾ.ನಂಜುಂಡ ಮೂರ್ತಿ, ಕರಡಿಪುರಕುಮಾರ್, ಬೊಮ್ಮನಹಳ್ಳಿ ಕುಮಾರ್, ದೇವರಸನಹಳ್ಳಿ ಬಸವರಾಜ್‌, ಸೋಮಯ್ಯ, ಸಾಲಿಗ್ರಾಮ, ಸಿದ್ದರಾಜು, ಶಂಕರಪುರ, ಮಹದೇವಮ್ಮ, ಕಟ್ಟೆಮಳಲವಾಡಿ, ಮಹೇಶ್ ಮಟಕೆರೆ, ಮಧು ಹೊರಳಹಳ್ಳಿ, ಹೆಚ್.ಡಿ. ಶಿವರಾಜ್, ಪರಶಿವಮೂರ್ತಿ, ನಾಗರಾಜು, ಉಡನಾಗರಾಜು,   ಐಡಿಯಾ ವೆಂಕಟೇಶ, ಜೀವಿಕ ಬಸವರಾಜು, ಎಚ್ ಸಿ ನರಸಿಂಹಮೂರ್ತಿ, ಡಾ ಎಸ್ ಮರಿದೇವಯ್ಯ, ಅಕ್ಬರ್ ಪಾಷ, ಪಿ ನಾಗರಾಜ್, ಪ್ರಕಾಶ್ ಬುದ್ದ, ಗುರು, ಕಾಳಪ್ಪಾಜಿ, ಅನಿಲ್ ಸಿಂಗ್, ಅನಿಲ್ ಕುಮಾರ್, ಗೋವಿಂದ್ ರಾಜ್, ಸಿದ್ದರಾಜು, ಗುರು, ಮುಂತಾದವರು ಹಾಜರಿದ್ದರು.