Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು; ಶಾಸಕ ಡಿ. ರವಿಶಂಕರ್


ಕೆ.ಆರ್.ನಗರ ; ಪೌರಕಾರ್ಮಿಕರು ಸ್ವಚ್ಚತೆಯೊಂದಿಗೆ ಇತರರ ಆರೋಗ್ಯದ ಬಗ್ಗೆ ಎಷ್ಟುಕಾಳಜಿ ವಹಿಸುತ್ತಿರೋ ಅಷ್ಟೆಕಾಳಜಿಯನ್ನು ತಮ್ಮಮಕ್ಕಳ ಶಿಕ್ಷಣದಬಗ್ಗೆ ಕಾಳಜಿವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಉತ್ತಮಬದುಕು ರೂಪಿಸುವಂತೆ ಶಾಸಕ ಡಿ. ರವಿಶಂಕರ್ ಹೇಳಿದರು.
ಪುರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಸ್ವಚ್ಚತೆಯ ಸೈನಿಕರಾದ ತಮ್ಮ ಶ್ರಮದಿಂದ ಪಟ್ಟಣ ಪುರಸಭೆಗೆ ಮೂರುಭಾರಿಯಿಂದ ಸ್ವಚ್ಚತಾ ಪ್ರಶಸ್ತಿಯಗರಿ ಬಂದಿದ್ದು ನಿಮ್ಮಶ್ರಮ ಮತ್ತು ಕೆಲಸಕ್ಕೆ ಬೆಲೆಕಟ್ಟಲಾಗದು ಎಂದರು.
ನಿಮ್ಮAತೆಯೆ ನಿಮ್ಮ ಮಕ್ಕಳನ್ನುಸಹ ಪೌರಕಾರ್ಮಿಕರ ಕೆಲಸಕ್ಕೆ ತಳ್ಳದೆ ಸರಕಾರದ ಯೋಜನೆಗಳ ಸದ್ಬಳಕೆಮಾಡಿಕೊಂಡು ಗುಣಮಟ್ಟದ ಶಿಕ್ಷಣಕೊಡಿಸಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿಸುವುದಲ್ಲದೆ ಉನ್ನತದರ್ಜೆ ಅಧಿಕಾರಿಗಳಾಗುವಂತೆ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.
ಪೌರಕಾರ್ಮಿಕರ ಸ್ಮಶಾನ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದಲ್ಲದೆ ಪೌರಕಾರ್ಮಿಕರ ಬಡಾವಣೆ ನಿರ್ಮಾಣಮಾಡಲು ನಿವೇಶನನೀಡಲು ಸರಕಾರಿ ಜಾಗವನ್ನು ಗುರುತಿಸುವಂತೆ ಈಗಾಗಲೆ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಸೀಲ್ದಾರರಿಗೆ ಸೂಚನೆ ನೀಡಿರುವುದಾಗಿ ಹೇಳಿದರು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ ಸಂಬAಧಪಟ್ಟ ಪೌರಾಡಳಿತ ಸಚಿವರ ಗಮನಕ್ಕೆ ತಂದು ಪೌರಕಾರ್ಮಿಕರ ಸಮಸ್ಯೆ ನೀಗಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪೌರಕಾರ್ಮಿಕರಿಗೆ ಈಗಾಗಲೆ ಸರಕಾರದಿಂದ ಸಾಕಷ್ಟು ಅನುಕೂಲ ಕಲ್ಪಿಸಲಾಗಿದ್ದು ಮಾಸಾಶನ ಭತ್ಯೆ ೩ರಿಂದ೫ಸಾವಿರ, ವಿಶೇಷಭತ್ಯೆ ೭ರಿಂದ೧೦ಸಾವಿರಕ್ಕೇ ಏರಿಕೆ ಮಾಡಲಾಗಿದ್ದು ನಗದುರಹಿತ ಆರೋಗ್ಯಕಾರ್ಡ್, ದೈನಂದಿನ ಉಪಾಹಾರಭತ್ಯೆ ಹೆಚ್ಚಿಸಲಾಗಿದೆ ಎಂದರು.
ರಾಜ್ಯ ಸಫಾಯಿಕರ್ಮಚಾರಿ ಆಯೋಗದ ಅಧ್ಯಕ್ಷ ರಾಜು, ಜಿಲ್ಲಾಸದಸ್ಯ ನಂಜಪ್ಪ ಮತ್ತಿತರರು ಮಾತನಾಡಿ ಪೌರಕಾರ್ಮಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಹೊರಗುತ್ತಿಗೆ ಮಾಡುವುದನ್ನು ಕೈಬಿಟ್ಟು ಖಾಯಂಕೆಲಸ ನೀಡಬೇಕು, ನೇರನೇಮಕಾತಿ, ಕನಿಷ್ಠವೇತನ ನೀಡಬೇಕು, ೫೦೦ಜನರಿಗೆ ಒಬ್ಬರಂತೆ ಪೌರಕಾರ್ಮಿಕರನ್ನು ನೇಮಕಮಾಡಬೇಕು, ಮಧುವನಹಳ್ಳಿ ಮತ್ತು ಕಂಠೇನಹಳ್ಳಿಯಲ್ಲಿರುವ ಸರಕಾರಿಜಾಗದಲ್ಲಿ ಪೌರಕಾರ್ಮಿಕರಿಗೆ ನಿವೇಶನ ನೀಡಿ ಬಡಾವಣೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಾತನಾಡಿದರು. ಬ್ಲಾಕ್ ಕಾಂಗ್ರೇಸ್‌ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯ್ಯದ್‌ಜಾಬೀರ್, ಪುರಸಭೆ ಮಾಜಿಸದಸ್ಯ ಕೋಳಿಪ್ರಕಾಶ್, ಮಿಕ್ಷರ್‌ಶಂಕರ್, ಶಂಕರ್‌ಸ್ವಾಮಿ, ಸಫಾಯಿಕರ್ಮಚಾರಿ ಜಾಗೃತಿ ಸಮಿತಿಸದಸ್ಯೆ ವಸಂತಕುಮಾರಿ, ದಿನೇಶ್‌ಕುಮಾರ್, ಪುರಸಭೆಸಿಬ್ಬಂದಿಗಳಾದ ರಾಜೇಂದ್ರಕುಮಾರ್, ಗಣೇಶ್, ವ್ಯಸರಘು, ಬಿ.ಎಸ್.ಮಧುಸೂಧನ್, ಸೌಮ್ಯ, ರಮೇಶ್, ಲಕ್ಷಿö್ಮÃ, ಸ್ವಪ್ನ, ಲೋಕೇಶ್, ಮಹದೇವ್, ಕುಮಾರ ಹಾಗೂ ಪೌರಕಾರ್ಮಿಕರು ಹಾಜರಿದ್ದರು. ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಟ್ಯಾಬ್‌ವಿತರಣೆ ಮಾಡಲಾಯಿತಲ್ಲದೆ ಎಲ್ಲಾ ಪೌರಕಾರ್ಮಿಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು