
ಪಿರಿಯಾಪಟ್ಟಣ : ಅಂಬೇಡ್ಕರ್ ವಿವಿದೊದ್ದೇಶ ಸಹಕಾರ ಸಂಘದಿಂದ ಮಾದಿಗ ಸಮುದಾಯದ ಷೇರುದಾರರನ್ನು ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಹೊರ ಹಾಕುವ ತಂತ್ರ ಮಾಡುತ್ತಿದ್ದಾರೆ ಎಂದು ತಾಲೂಕು ಮಾದಿಗ ಸಮುದಾಯದ ಮುಖಂಡರಾದ ಸೀಗೂರು ವಿಜಯ್ ಕುಮಾರ್ ಆರೋಪಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಕೇಂದ್ರ ಭಾಗದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ (ಎವಿ ಎಸ್ ಎಸ್)ನಿ ನಡೆಸಲಾಗುತ್ತಿದ್ದು ಈ ಸಹಕಾರ ಸಂಘದಲ್ಲಿ ಹೊಲೆಯ ಮತ್ತು ಮಾದಿಗ ಸೇರಿದಂತೆ ಎಲ್ಲಾ ಸಮುದಾಯದ ಜನರು ಷೇರುದಾರ ರಾಗಿದ್ದಾರೆ 2020 ನೇ ಸಾಲಿನ ಜೂನ್ 10 ರಂದು ಆರಂಭಗೊಂಡ ಈ ಸಹಕಾರ ಸಂಘದಲ್ಲಿ ರಾಜ್ಯದ್ಯಕ್ಷ ತುಂಬಲ ರಾಮಣ್ಣ ಮತ್ತು ತಾಲೂಕು ಹಂಗಾಮಿ ಕಾರ್ಯದರ್ಶಿಯಾಗಿ ಸಿ ತಮ್ಮಣ್ಣಯ್ಯ ನಿರ್ದೇಶಕರಾಗಿ ಎಸ್ ರಾಮು ಐಲಾಪುರ ಹಾಗೂ ಇತರರ ನೇತೃತ್ವದಲ್ಲಿ ಸಂಘದ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಡೆಸಲಾಗುತ್ತಿದೆ.
ಸಾಲ ಸೌಲಭ್ಯ ಕೊಡುವ ವಿಷಯವಾಗಿ ನಮ್ಮ ಸಮಾಜದ ಷೇರುದಾರರಿಗೆ ಒಂದಲ್ಲ ಒಂದು ಸಲ್ಲದ ಕಾರಣ ಹೇಳಿ ದೂರ ಇಟ್ಟಿದ್ದು ಉದ್ದೇಶಪೂರ್ವಕವಾಗಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಹಕಾರ ಸಂಘದ ನಿಯಮದ ಪ್ರಕಾರ ಪ್ರತಿ ವರ್ಷದ ವಾರ್ಷಿಕ ಮಹಾಸಭೆ ಆಯಾಯ ತಾಲೂಕಿಗೆ ಸಂಬಂಧಿಸಿದಂತೆ ಇರುವ ವ್ಯವಹಾರ ಹಾಗೂ ಪ್ರಗತಿಯ ಬಗ್ಗೆ ಚರ್ಚಿಸಿ ಎಲ್ಲಾ ಷೇರುದಾರ ರಿಂದ ಸಹಿ ಸಂಗ್ರಹಿಸುವ ಪದ್ಧತಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮತ್ತು ಹಂಗಾಮಿ ಕಾರ್ಯದರ್ಶಿ ಸಿ ತಮ್ಮಣ್ಣಯ್ಯ ಹಾಗೂ ನಿರ್ದೇಶಕ ಎಸ್ ರಾಮ ಐಲಾಪುರ ಸೇರಿದಂತೆ ಆಡಳಿತ ಮಂಡಳಿ ಇದೇ ತಿಂಗಳು 25 ರ ಶುಕ್ರವಾರ ಮೈಸೂರಿನ ಕಲಾಮಂದಿರದಲ್ಲಿ ನಡೆದ ಎವಿಎಸ್ಎಸ್ ವಾರ್ಷಿಕ ಮಹಾಸಭೆಗೆ ಮಾದಿಗ ಸಮುದಾಯದ ಷೇರುದಾರರನ್ನು ಸೇರಿಸಬಾರದು ಎಂಬ ದುರುದ್ದೇಶದಿಂದ ಹಲವು ಷರತ್ತಿನ ಮೇರೆಗೆ ಆಹ್ವಾನ ಪತ್ರಿಕೆ ಕೈ ತಲುಪದಂತೆ ತಂತ್ರಗಾರಿಕೆ ಬಳಸಿ ಸಹಕಾರ ಸಂಘದಿಂದ ಹೊರಗೆ ಇಡಲು ಮುಂದಾಗಿದ್ದರೆ ಎಂದು ದೂರಿದ್ದಾರೆ. ಸಹಕಾರ ಸಂಘದ ನಿಯಮವನ್ನು ಗಾಳಿಗೆ ತೂರಿ ತಮ್ಮ ಇಚ್ಚಿಯ ಪ್ರಕಾರ ನಡೆಸಿಕೊಳ್ಳುತ್ತಿರುವ ಇವರುಗಳ ವಿರುದ್ಧ ಸಹಕಾರ ಸಂಘದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜವರಪ್ಪ, ಹೊನ್ನೇನಹಳ್ಳಿ ಲೋಕೇಶ್, ದೇಪೂರ ಕುಮಾರ್ ಉಪಸ್ಥಿತರಿದ್ದರು.