Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ: ಸಿಎಂ ಡಿ.ಕೆ.ಶಿವಕುಮಾರ್

ಚುನಾವಣಾ ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ

ಚಾಮರಾಜನಗರ ನನಗೆ ಪ್ರಿಯಾವಾದ ಸ್ಥಳ

ಚಾಮರಾಜನಗರ : ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.`ಯಡಿಯೂರಪ್ಪನವರು ಬಜೆಟ್ ಮೀರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸಿದ್ದರು. ಬಿಜೆಪಿ ಸರ್ಕಾರಗಳ ಇಂತಹ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್ ಬಿ ಹೆಲಿಪ್ಯಾಡ್ ಬಳಿ, ೩೦ ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
, ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆ'' ಎಂದರು. ಈಗಲೂ ಪರ್ಸೆಂಟೇಜ್ ಕಮಿಷನ್ ನೀಡಬೇಕು ಎಂಬ ಗುತ್ತಿಗೆದಾರರ ಸಂಘದ ಅದ್ಯಕ್ಷರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ, ಅವರು ಅಫಿಡವಿಟ್ ಸಲ್ಲಿಸಲಿ. ಈ ಬಗ್ಗೆ ತನಿಖೆ ಮಾಡಿಸಲಾಗುವುದು” ಎಂದರು.
೪೯೦ ಕೋಟಿ ಮೊತ್ತದ ನೀರಾವರಿ ಯೋಜನೆ ಶಂಕುಸ್ಥಾಪನೆಯ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಅನೇಕ ಸಮಿತಿಗಳಿದ್ದು, ಅಲ್ಲೂ ಚರ್ಚೆಯಾಗಬೇಕು. ನಂತರ ಮಂಡಳಿಗಳಲ್ಲಿ ಅನುಮತಿ ಪಡೆದು, ಸಚಿವ ಸಂಪುಟ ಅನುಮತಿ ಪಡೆದು ಟೆಂಡರ್ ಕರೆಯಬೇಕು. ಆ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಆದ ಪ್ರಕ್ರಿಯೆಗಳಿವೆ” ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ರದ್ದು ಮಾಡಬೇಕು ಎಂದು ಬಿ ಆರ್ ಪಾಟೀಲ್ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಈ ವಿಚಾರ ಪರಿಶೀಲನೆ ಮಾಡಲಾಗುವುದು'' ಎಂದು ತಿಳಿಸಿದರು. ಗೃಹಲಕ್ಷಿ÷್ಮ ಯೋಜನೆ ಫಲಾನುಭವಿಗಳ ಮರುಪರಿಶೀಲನೆ ವೇಳೆ ಜಾತಿ ಪ್ರಮಾಣಪತ್ರ ಕೇಳುತ್ತಿರುವ ಬಗ್ಗೆ ಕೇಳಿದಾಗ, ಹೊರ ರಾಜ್ಯದವರು ಇಲ್ಲಿ ಯೋಜನೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಹೊಸ ಅರ್ಜಿ ಸಿದ್ಧಪಡಿಸಿದ್ದೇವೆ. ಯಾರು ನಮ್ಮ ಮತದಾರರು, ಅರ್ಹರಿದ್ದಾರೆ ಅವರನ್ನು ಪರಿಗಣಿಸಲಾಗುವುದು. ಇನ್ನು ನಾವು ಮರುಪರಿಶೀಲನೆ ಅರ್ಜಿ ವಿತರಣೆ ಮಾಡಿಲ್ಲ” ಎಂದು ತಿಳಿಸಿದರು.
ಚುನಾವಣಾ ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಸಿಡ್ಬೂ÷್ಲ÷್ಯಸಿ ಸಭೆಯಲ್ಲಿ ಎಸ್‌ಐಆರ್ ರದ್ಧತಿಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದಾಗ, “ನಮ್ಮ ವಿರೋಧ ಒಂದು ಕಡೆ ಇರಲಿ, ಮೋದಿ ಸರ್ಕಾರ ನಿಯೋಜಿಸಿದ್ದ ಇನ್ನಿಬ್ಬರು ಆಯುಕ್ತರು ಕೆಲವು ನಿರ್ಧಾರಗಳ ಬಗ್ಗೆ ಅಪಸ್ವರ ಎತ್ತಿದ್ದರಲ್ಲ. ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ತಪುö್ಪಗಳು ಆಗಿವೆ ಎಂಬುದು ಗೊತ್ತಾಗಿದೆ. ಜನರ ಭಾವನೆ, ಬಡವರು, ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವ ಕೆಲಸವಾಗುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ತಿಳಿಸಿದರು.

ಚಾಮರಾಜನಗರ ನನಗೆ ಪ್ರಿಯಾವಾದ ಸ್ಥಳ:
ಚಾಮರಾಜನಗರ ನನ್ನ ಪ್ರಿಯಾವಾದ ಸ್ಥಳ. ನನ್ನ ಕ್ಷೇತ್ರ ಇದರ ಜೊತೆ ಗಡಿ ಹಂಚಿಕೊAಡಿದೆ. ಇದು ಹಸಿರಿನ ತಪ್ಪಲು, ಇಲ್ಲಿನ ಜನ ಶ್ರಮಜೀವಿಗಳು. ಕೃಷಿಯೇ ಅವರ ಬದುಕು. ಎಳ್ಲಾ ವರ್ಗದ ಜನರಿಗೆ ಆಶ್ರಯ ನೀಡಿರುವ ಪುಣ್ಯಭೂಮಿ. ಮಲೆ ಮಾದೇಶ್ವರನ ಇತಿಹಾಸದ ಭೂಮಿ. ಈ ಭಾಗಕ್ಕೆ ಸಂಸ್ಕಾರದ ಆಸ್ತಿ. ಈ ಭಾಗದ ಜನರ ನಂಬಿಕೆ. ನನ್ನ ಕ್ಷೇತ್ರದ ಮೂಲಕ ಸಾವಿರಾರು ಜನ ಪಾದಯಾತ್ರೆ ಮೂಲಕ ಕಾವೇರಿ ನದಿ ದಾಟಿ ಭಕ್ತಿಯಿಂದ ಈ ಧಾರ್ಮಿಕ ಕೇಂದ್ರಕ್ಕೆ ಬರುತ್ತಾರೆ'' ಎಂದರು. ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಸಿದ್ದಾಪ್ಪಾಜಿ ದೇವಾಲಯಗಳಿವೆ. ನಾನು ಸಿದ್ದಪ್ಪಾಜಿ ದೇವಾಲಯಕ್ಕೆ ನಡೆದುಕೊಂಡು ಬಂದಿರುವೆ. ಪ್ರತಿ ವರ್ಷ ಸಂಕ್ರಾAತಿ ಬಳಿಕ ಸಿದ್ದಪ್ಪಾಜಿಗೆ ಪೂಜೆ ಮಾಡುವುದು ನಮ್ಮ ಕುಟುಂಬದ ಪದ್ಧತಿ ಇದೆ. ಅಲ್ಲಿ ನಮ್ಮ ಆಸ್ತಿ ಇದ್ದು, ಅಲ್ಲಿ ಸಮುದಾಯ ಭವನ ಮಾಡುವ ಆಲೋಚನೆ ಇದೆ. ಇದು ಹಿಂದುಳಿದ ವರ್ಗದ ಪ್ರದೇಶ ಎಂಬ ಭಾವನೆ ಇದೆ. ಹೀಗಾಗಿ ಸಿದ್ದರಾಮಯ್ಯ ಅವರ ನಮ್ಮ ಸರ್ಕಾರ ಮಲೆ ಮಾದೇಶ್ವರನ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿ ಅನೇಕ ಘೋಷಣೆ ಮಾಡಲಾಗಿತ್ತು. ನೀರಾವರಿ ಅಭಿವೃದ್ಧಿಗೂ ಈ ವರ್ಷ ಎಲ್ಲಾ ಕ್ಷೇತ್ರಗಳಲ್ಲೂ ಕಾಮಗಾರಿ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕೆಲಸ ಆರಂಭಿಸಲು ಬಂದಿದ್ದೇನೆ” ಎಂದು ಹೇಳಿದರು.

ಶಿಕಾರಿಪುರದಿಂದ ಕಾಂಗ್ರೆಸ್ ಪಕ್ಷದ ಯಾತ್ರೆ ಬಗ್ಗೆ ಕೇಳಿದಾಗ, “ಹರಿಪ್ರಸಾದ್ ಅವರು ಪಕ್ಷದ ಸಂಘಟನೆಗೆ ಈ ಯಾತ್ರೆ ಮಾಡುತ್ತಿದ್ದಾರೆ. ಭಾರತ ಜೋಡೋ ಅದು ರಾಹುಲ್ ಗಾಂಧಿ ಅವರದ್ದು. ಅದರ ನೆನಪಿನಲ್ಲಿ ನಮ್ಮ ಅಧ್ಯಕ್ಷರು ಕಾರ್ಯಕ್ರಮ ರೂಪಿಸಿದ್ದಾರೆ” ಎಂದರು