
೨೦೨೮ಕ್ಕೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕೆಲವು ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಅದು ಹಗಲು ಕನಸು
ಚಾಮರಾಜನಗರ : ೨೦೨೮ ಕ್ಕೂ ನಮ್ಮ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಎಲ್ಲ ಗ್ಯಾರಂಟಿಗಳು ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕೊಳ್ಳೇಗಾಲ-ಹನೂರು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ಕೆಲವು ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಅದು ಹಗಲುಕನಸು ಎಂದು ಲೇವಡಿ ಮಾಡಿದರು. ಭಾರತ್ ಜೋಡೋ ಯಾತ್ರೆ ನಡೆದಲ್ಲೆಲ್ಲಾ ಕಾಂಗ್ರೆಸ್ ಗೆ ಗೆಲುವು ಆಗಿದೆ. ರಾಹುಲ್ ಗಾಂಧಿಯವರು ತಮಿಳುನಾಡಿನಿಂದ ಈ ಜಿಲ್ಲೆಗೆ ಬಂದು ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಅವರು ನಡೆದಲ್ಲೆಲ್ಲಾ, ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಜನರು ಇತಿಹಾಸ ನಿರ್ಮಿಸಿದರು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಜೀವನಮಟ್ಟ ಸುಧಾರಿಸಿದೆ. ಪ್ರತಿ ಜಿಲ್ಲೆಯಲ್ಲಿಯೂ ೫೦ ಸಾವಿರ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ'' ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಭಿವೃದ್ಧಿ ತಲುಪಿದಾಗ ಮಾತ್ರ ಅವರ ಜೀವನದಲ್ಲಿ ಆಶಾ ಕಿರಣ ಮೂಡುತ್ತದೆ. ಸೇವೆಯೇ ನಮ್ಮ ಧರ್ಮ. ಅಭಿವೃದ್ಧಿಯೇ ನಮ್ಮ ಗುರಿ. ಜನರ ಸಂಕಟಕ್ಕೆ ನೆರೆವಾಗುವುದೇ ನಮ್ಮ ಧ್ಯೇಯ. ಮಾತಿನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಶ್ರಮ ಶಿಸ್ತು ಗಳಿಂದ ಬೆವರು ಸುರಿಸಿದಾಗ ಮಾತ್ರ, ಬದುಕಿಗೆ ಹೊಸ ರೂಪ ಬರುತ್ತದೆ. ಅಭಿವೃದ್ಧಿಯಲ್ಲಿ ಪವಾಡ ಮಾಡಲು ಸಾಧ್ಯವಿಲ್ಲ. ಪ್ರತಿದಿನವೂ ಶ್ರಮಿಸಬೇಕು. ಯಾರ ಅಧಿಕಾರವೂ ಶಾಶ್ವತವಲ್ಲ. ಆದರೆ ನಾವು ಮಾಡುವ ಸೇವೆ, ಅಭಿವೃದ್ಧಿಯನ್ನು ಜನರು ನೆನೆಸಿಕೊಂಡಾಗ ಮಾತ್ರ ಅದು ಶಾಶ್ವತ” ಎಂದರು.
`ಚಾಮರಾಜನಗರ ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ತೊಟ್ಟಿದೆ”. “ಇಡೀ ಸರ್ಕಾರ ಚಾಮರಾಜನಗರ ಜನತೆಯ ಜೊತೆಗಿದೆ. ಈ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಜಿಲ್ಲೆಗೆ ೩ ಸಾವಿರ ಕೋಟಿ ರೂ.ಗಳ ಕಾಮಗಾರಿಯನ್ನು ನೀಡಿ, ಜಿಲ್ಲೆಯ ಜನರನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ಯುಲಾಗಿತ್ತು. ಜನರಿಂದ ಅಧಿಕಾರಕ್ಕೆ ಬಂದ ನಮ್ಮ ಗ್ಯಾರಂಟಿ ಸರ್ಕಾರ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದೆ. ನಮ್ಮ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಇಡೀ ಸರ್ಕಾರ ನಿಮ್ಮೊಂದಿಗಿದೆ. ಟೀಕೆ ಎದುರಿಸಿ ಗೆದ್ದರೆ ನಾಯಕನಾಗುತ್ತಾನೆ. ಸೋತರೆ ಮಾರ್ಗದರ್ಶಕನಾಗುತ್ತಾನೆ. ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ನಿಮಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬಲು ಸೇವೆ ಮಾಡುತ್ತಿದ್ದಾರೆ” ಎಂದರು.
ಕೊಳ್ಳೇಗಾಲಕ್ಕೆ ಒಳ್ಳೆಯ ಕಾಲ ಬಂದಿದೆ;
“ಶಿವನು ಗಂಗೆಗೆ ತನ್ನ ತಲೆಯ ಮೇಲೆ ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸರಕಾರ ಜನರ ಹೃದಯಗಳಲ್ಲಿ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ ೭ ಜನ ಸಂಸದರನ್ನು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದಾರೆ. ಕೊಳ್ಳೆಗಾಲಕ್ಕೆ ಒಳ್ಳೆಯ ಕಾಲ ಬಂದಿದೆ. ಕೊಳ್ಳೇಗಾಲಕ್ಕೆ ಅಭಿವೃದ್ಧಿ ಕಾಲಿಟ್ಟಿದೆ. ಹನೂರಿಗೆ ಅಭಿವೃದ್ಧಿ ಹರಿಯುತ್ತಿದೆ. ಕೊಳ್ಳೆಗಾಲದಲ್ಲಿ ರೇಷ್ಮೆ ಪಾರಂಪರಿಕ ವೃತ್ತಿಯಾಗಿದೆ. ನಾನು ಕೂಡ ರೇಷ್ಮೆ ನಾಡಿನಿಂದ ಬಂದವನು. ಕನಕಪುರ, ರಾಮನಗರ, ಮಾಗಡಿ, ಕೊಳ್ಳೆಗಾಲ, ಮಳವಳ್ಳಿ, ಹನೂರು, ಶಿಡ್ಲಘಟ್ಟ ಗಳಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತಿದೆ. ಮೈಸೂರು ಸಿಲ್ಕ್ ಪ್ರಸಿದ್ಧ ಬ್ರಾಂಡ್. ಟಿಪುö್ಪಸುಲ್ತಾನ್ ಅವರು ನಾಡಿಗೆ ರೇಷ್ಮೆ ಪರಿಚಯಿಸಿದರು. ಪ್ರಸ್ತುತ ಬಳ್ಳಾರಿ, ಹಾವೇರಿ, ಗದಗ ಸೇರಿದಂತೆ ವಿವಿದೆಡೆ ರೇಷ್ಮೆ ಬೆಳೆಯಲಾಗುತ್ತಿದೆ. ಚೈನಾದಿಂದ ರೇಷ್ಮೆ ಆಮದು ನಿಂತ ಮೇಲೆ, ನಮ್ಮ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದನ್ನು ಶಾಶ್ವತವಾಗಿ ಉಳಿಸಲು ಮಂಗಳೂರಿನ ಸಂಪುಟ ಸಭೆಯಲ್ಲಿ ಕೈಮಗ್ಗ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ನಿಮ್ಮೆಲ್ಲರ ಬದುಕಿಗೆ ಹೊಸ ರೂಪ ನೀಡುವ ನಿರ್ಧಾರ ಮಾಡಿದೆ” ಎಂದರು.
ನುಡಿದAತೆ ನಡೆಯುವ ಇತಿಹಾಸ ನಮ್ಮ ಸರ್ಕಾರಕ್ಕಿದೆ ;
“ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನನ್ನನ್ನೂ ಒಳಗೊಂಡAತೆ ಜಿಲ್ಲೆಯ ನಾಯಕರು, ಕರೋನಾದಿಂದ ಮರಣ ಹೊಂದಿದ ೩೩ ಜನರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದೆವು. ಮೈಸೂರು ಮಹಾರಾಜರು ನಿಮ್ಮ ಭೂಮಿಗೆ ಶಕ್ತಿ, ಇತಿಹಾಸ ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಚಾಮರಾಜೇಶ್ವರ ದೇವಸ್ಥಾನವಿದೆ. ಅವರು ಆಳಿದ ಪ್ರದೇಶವಿದು. ಅವರ ನೆನಪಿನಲ್ಲಿ ಚಾಮರಾಜನಗರವೆಂದು ಜಿಲ್ಲೆಗೆ ಹೆಸರಿಡಲಾಗಿದೆ. ಈ ಜಿಲ್ಲೆ ದಟ್ಟವಾದ ಅರಣ್ಯ, ವನ್ಯಮೃಗಗಳ ಧಾಮ ಮತ್ತು ಸಂಸ್ಕöÈತಿಯ ತಾಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಾಸಕರನ್ನು ನೀಡಿರುವ ಜಿಲ್ಲೆಯಿದು” ಎಂದರು.
ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ;
“ಸುಮಾರು ೨೫ ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ ನೀಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ನಾನು ಸಿಎಂ ಆದ ನಂತರ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದೇನೆ. ಪ್ರಜಾಸೇವೆ ಇಲಾಖೆಯಿಂದ ಶಾಸಕರು, ಸಚಿವರು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯತಿಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ಭೇಟಿ ನೀಡಲು ಸೂಚನೆ ನೀಡಿದ್ದೇನೆ” ಎಂದರು.
“ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಬೇಡಿಕೆಯಿದ್ದು, ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ನೀರಾವರಿ ಇಲಾಖೆಯ ಮೂಲಕ ಅನೇಕ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಕೃಷಿ ಯೋಗ್ಯ ಭೂಮಿ ಮಾಡಲು ಕೋಟ್ಯಾಂತರ ಹಣ ಬಿಡುಡೆ ಮಾಡುತ್ತಾ ಬಂದಿದೆ” ಎಂದರು
ಇAದು ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ೧೨೦ ಕೋಟಿ ಕಾಮಗಾರಿಗೆ ಕಾರ್ಯದೇಶ ನೀಡಲಾಗಿದೆ. ಹನೂರಿನಲ್ಲಿ ಅಂತರ್ಜಲ ಅಭಿವೃಧ್ಧಿಗೆ ಸೂಕ್ತ ಅನುದಾನ ನೀಡಲಾಗಿದೆ. ಚಾಮರಾಜನಗರದ ಬಳಿ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿಗೆ ೪೫೦ ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೧೦೦೦ ಕೋಟಿ ರೂ.ಗಳ ನೀರಾವರಿ ಕಾಮಗಾರಿಗಳನ್ನು ನೀಡಲಾಗಿದ್ದು, ನನ್ನ ಅವಧಿಯಲ್ಲಿ ಇಷ್ಟು ದೊಡ್ಡ ಅಭಿವೃದ್ಧಿಯನ್ನು ಜಿಲ್ಲೆ ಕಾಣುತ್ತಿದೆ. ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರ ಆಹಾರ ಕಿಟ್ ಗಳ ಬೇಡಿಕೆಗಳನ್ನು ಪರಿಗಣಿಸಲು ನನ್ನ ಸರ್ಕಾರ ಬದ್ಧವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಸಿ.ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಆರ್.ನರೇಂದ್ರ, ಸಂಸದ ಸುನೀಲ್ ಬೋಸ್ ಮತ್ತಿತರರು ಉಪಸ್ಥಿತರಿದ್ದರು.
