Month: September 2026
ಎಸ್‌ಐಆರ್: ಚಾಮುಂಡಿಬೆಟ್ಟದಲ್ಲಿ ಸ್ವೀಪ್ ಚಟುವಟಿಕೆಗೆ ಚಾಲನೆ
ಮೈಸೂರು; ತಾಲ್ಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ನೇತೃತ್ವದಲ್ಲಿ ಸ್ವೀಪ್ ಚಟುವಟಿಕೆ ಜರುಗಿತು.ಎಸ್ ಐಆರ್ ಭಾಗವಾಗಿ ನಾಗರಿಕರು ತಮ್ಮ ಮತದಾರರ ಗುರುತಿನ ಚೀಟಿಗೆ ಸಂಬAಧಿಸಿದ ಆಕ್ಷೇಪಣೆ ಹಾಗೂ ತಿದ್ದುಪಡಿ ಮಾಡಿಸಲು ಸೆ.19 ಮತ್ತು 20 ರಂದು ನಡೆಯುವ “ಸಾರ್ವಜನಿಕ ವಿಶೇಷ ಅಭಿಯಾನ” ಸಂಬAಧಿಸಿದ ಭಿತ್ತಿಪತ್ರ ಬಿಡುಗಡೆಗೊಳಿಸಿದ ಅವರು,…
ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್ ಸಂಸ್ಥೆಗಳ ಕೊಡುಗೆ ಅನನ್ಯ ; ಸಚಿವ ಎಸ್. ಮಧುಬಂಗಾರಪ್ಪ
ಮೈಸೂರು; ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್ ಸಂಸ್ಥೆಗಳ ಕೊಡುಗೆಅನನ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ಹೇಳಿದರು.ಮೈಸೂರಿನ ಹೂಟಗಳ್ಳಿಯಲ್ಲಿ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜು ಹಾಗೂ ಸಭಾಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸರ್ಕಾರವೇ ಎಲ್ಲರಿಗೂ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ವ್ಮಠ ಮಾನ್ಯಗಳು ಮಾಡುತ್ತಾ ಬರುತ್ತಿವೆ.ಜೆಎಸ್‌ಎಸ್ ಸಂಸ್ಥೆ ಕರ್ನಾಟಕವಲ್ಲದೇ, ತಮಿಳುನಾಡು, ನೋಯಿಡಾ, ದೆಹಲಿ, ಜಮ್ಮು ರಾಜ್ಯಗಳಲ್ಲಿ,ಅಲ್ಲದೆ ಮಾರಿಷಸ್, ಅಮೆರಿಕ, ದುಬೈಗಳಲ್ಲೂ ಸಂಸ್ಥೆಗಳನ್ನು ಸ್ಥಾಪಿಸಿ, ವಿಶ್ವದಾದ್ಯಂತ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಸಾಮಾಜಿಕ…
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಶೀರ್ವಾದದ ದೀಪ ಬೆಳಗಿಸಿದ ಬಿಜೆಪಿ
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ’ ಕಾರ್ಯಕ್ರಮದ ಭಾಗವಾಗಿ, ಪ್ರತಿ ಮನೆಯಲ್ಲಿ ಆಶೀರ್ವಾದದ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ಮೈಸೂರಿನ ರಾಷ್ಟçಕವಿ ಕುವೆಂಪು ಅವರ ಮನೆ ಉದಯರವಿ’ಯಲ್ಲಿ ನಡೆಸಲಾಯಿತು.ಮೈಸೂರು ವಿಭಾಗದ ಬಿಜೆಪಿಯ ಸಹಪ್ರಭಾರಿ ಡಾ. ಈ.ಸಿ. ನಿಂಗರಾಜ್‌ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 176 ದೀಪಗಳನ್ನು ಬೆಳಗಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶಕ್ಕೆ ಇನ್ನಷ್ಟು ಉತ್ತಮ ನಾಯಕತ್ವ ನೀಡುವ…
ಚಿತ್ರ ನಟ ಡಾ.ವಿಷ್ಣುವರ್ಧನ್ ಜನ್ಮ ದಿನಾಚರಣೆ
ಮೈಸೂರು: ತಾಲೂಕಿನ ಉದ್ಬೂರು ಗೇಟ್ ಸಮೀಪ ಇರುವ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ ಚಿತ್ರ ನಟ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಅಭಿಮಾನಿಗಳು ಸಂಭ್ರಮದಿAದ ಆಚರಿಸಿದರು.ಈ ಸಂದರ್ಭದಲ್ಲಿ ಸ್ಮಾರಕಕ್ಕೆ ಆಗಮಿಸಿದ ನೂರಾರು ಅಭಿಮಾನಿಗಳಿಗೆ ಹಿರಿಯ ಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಅವರು ಅನ್ನದಾನ ಮಾಡುವ ಮೂಲಕ ಜನ್ಮದಿನೋತ್ಸವಕ್ಕೆ ವಿಶೇಷ ಮೆರುಗು ತಂದರು. ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತು ಶುಭಾಶಯಗಳನ್ನು ಸ್ವೀಕರಿಸಿದ ಅವರು, ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಸ್ಮರಿಸಿದರು.ಅನ್ನದಾನ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ…
ಜಯದೇವ ದೇಶದಲ್ಲಿಯೇ ಮಾದರಿ ಆಸ್ಪತ್ರೆ : ಎಂ. ರಾಮಯ್ಯ
ಮೈಸೂರು: ಮೈಸೂರಿನ ಜಯದೇವ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದಎಲ್ಲಾ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾಜಿ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ತಿಳಿಸಿದರು.ಮೈಸೂರುಜಯದೇವಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯರವರು 2013 ರಿಂದ 18 ವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದರು. ಆಗ ನಾನು ಸಹ ಆಗಾಗ್ಗೆ ಕಾಮಗಾರಿ ಪರಿಶೀಲಿಸಲು ಬರುತ್ತಿದ್ದೆ. ಸಿದ್ದರಾಮಯ್ಯರವರ ವಿಶೇಷ ಕಾಳಜಿಯಿಂದ ಮೈಸೂರಿನಲ್ಲಿ ಹಲವಾರು ಆಸ್ಪತ್ರೆಗಳು ನಿರ್ಮಾಣವಾಗಿ ಬಡಜನರಿಗೆತುಂಬಾ ಅನುಕೂಲವಾಗಿದೆ ಎಂದರು.ಜಯದೇವ…
ಬಿಜೆಪಿಯವರು ರಣಹದ್ದುಗಳಿದ್ದಂತೆ ಎಂದ ಸಚಿವ ಯತೀಂದ್ರ ಹೇಳಿಕೆ ಖಂಡನೀಯ; ತೋಟದಪ್ಪ ಬಸವರಾಜು
ಮೈಸೂರು; ಬಿಜೆಪಿಯವರು ರಣಹದ್ದುಗಳಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನು ವರುಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ಮುಡಾ ಸೈಟುಗಳನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಕಕ್ಕಿದ್ದಾರೆ. ಅವರ ಪುತ್ರ ಯತೀಂದ್ರ ಭಾರಿ ಡೇಂಜರ್ ವಿಷಪೂರಿತ ಕೊಳಕು ಮಂಡಲ ಹಾವು ಇದ್ದಂತೆ ಎಂದು ತಿರುಗೇಟು ನೀಡಿದ್ದಾರೆ.ದಲಿತರಿಗೆ ಸಿಗಬೇಕಿದ್ದ ಮುಖ್ಯಮಂತ್ರಿ ಗಾದಿಯನ್ನು ಎರಡು ಬಾರಿ ಧಕ್ಕಿಸಿಕೊಂಡು ಸಿದ್ದರಾಮಯ್ಯನವರು ವಂಚಿಸಿದ್ದಾರೆ….
ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ; ವೆಂಕಟೇಶ್
ಚಾಮರಾಜನಗರ; ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿದರೆ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದು ಜಿಲ್ಲಾ ನಗರ ಅಭಿವೃದ್ಧಿ ಕೋಶ ನಿರ್ದೇಶಕ ವೆಂಕಟೇಶ್ ತಿಳಿಸಿದರುನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರಸಭೆ ವತಿಯಿಂದ ಏರ್ಪಡಿಸಿದ ಸ್ವಚ್ಛತೆ ಅಭಿಯಾನ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಶಾಲಾ-ಕಾಲೇಜುಗಳು ಹಾಗೂ ತಮ್ಮ ಮನೆ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಬೇಕು ಹವಾಗ ಉತ್ತಮ ಪರಿಸರದಲ್ಲಿ ತಮ್ಮ ಜ್ಞಾನ ಅಭಿವೃದ್ಧಿ ಆಗುತ್ತದೆ ಇದರಿಂದ ವಿದ್ಯಾಭ್ಯಾಸ…
ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕ ಸಲಹಾ ಸಭೆ
ಪಿರಿಯಾಪಟ್ಟಣ : ಅರಣ್ಯ ಸಂರಕ್ಷಣೆಯ ಉಪ ವಿಭಾಗ ಅಧಿಕಾರಿ ಕಿರಣ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೋಕಿನ ತಾತನಹಳ್ಳಿ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿರುವ ವಿವಿಧ ಜಾತಿಯ ಮರಗಳನ್ನು ಹರಾಜು ಮಾಡುವ ಪ್ರಕ್ರಿಯೆಗೆ ಸಾರ್ವಜನಿಕ ಸಲಹಾ ಸಭೆಯನ್ನು ಕರೆಯಲಾಗಿತ್ತು. ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಮಾತನಾಡಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿನ ಮರಗಳ ತೆರವಿಗೆ ಕಡ್ಡಾಯವಾಗಿ ಇಲಾಖೆ ಮತ್ತು ಸಾರ್ವಜನಿಕರ ಸಲಹಾ ಸಭೆ ನಡೆಸಬೇಕಾಗುತ್ತದೆ. ಈ ಸಭೆಯಲ್ಲಿ ಹರಾಜು ಪ್ರಕ್ರಿಯೆಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ತಾತನಹಳ್ಳಿ ಗ್ರಾಮದ ದೊಡ್ಡಕೆರೆ…
ಸೆ.19 ಮತ್ತು 20 ಎಸ್‌ಐಆರ್ ವಿಶೇಷ ಅಭಿಯಾನ*ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಲಭ್ಯ
ಹೆಚ್.ಡಿ.ಕೋಟೆ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) – 2026ರ ಅಂಗವಾಗಿ ಸೆಪ್ಟೆಂಬರ್ 19 ಮತ್ತು 20 ರಂದು ವಿಶೇಷ ಅಭಿಯಾನ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ನೋಡಲ್ ಅಧಿಕಾರಿ ರವಿಚಂದ್ರ.ಎಸ್ ತಿಳಿಸಿದರು.ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸAತೆ ಹೋಬಳಿ ವ್ಯಾಪ್ತೀಯ ಅಂತರಸAತೆಯಲ್ಲಿ ಗುರುವಾರ ತಾಲ್ಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಹಯೋಗದೊಂದಿಗೆಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆ-2026ರ ವಿಶೇಷ ಅಭಿಯಾನದ ಪ್ರಚಾರ ಕುರಿತ ಸ್ವೀಪ್ ಚಟುವಟಿಕೆ…