Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮತ್ತೊಂದು ದಿನಕ್ಕೆ ವಿಸ್ತರಣೆಗೊಂಡ ಮೈಸೂರು ಚಿತ್ರ ಸಂತೆ


ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ದಸರಾ ಚಿತ್ರಸಂತೆ ಸಮಿತಿಯಿಂದ ಆಯೋಜಿಸಿದ್ದ ನಗರದ ಮಾನಸಗಂಗೋತ್ರಿಯಲ್ಲಿರುವ ಕ್ಲಾಕ್ ಟವರ್ ಮುಂಭಾಗದಿAದ ಕುವೆಂಪು ಪುತ್ಥಳಿ ಗೇಟ್ ಸಮೀಪದವರೆಗೆ ಆಯೋಜಿಸಲಾಗಿದ್ದ ಮೈಸೂರು ಚಿತ್ರ ಸಚಿತೆಯನ್ನು ಮತ್ತೊಂದು ದಿನಕ್ಕೆ ವಿಸ್ತರಿಸಲಾಗಿದೆ. ಎರಡು ದಿನಗಳ ಕಾಲ ಅಂದರೆ ಅ.೨ ಮತ್ತು ೩ ರಂದು ಆಯೋಜಿಸಲಾಗಿದ್ದ ಚಿತ್ರ ಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೊಂದು ದಿನಕ್ಕೆ ಅಂದರೆ ಅ.೪ರ ಭಾನುವಾರದ ತನಕ ವಿಸ್ತರಿಸಲಾಗಿದೆ. ಹಾಗಾಗಿ ರಜಾ ದಿನವಾದ ಭಾನುವಾರ ಚಿತ್ರ ಸಂತೆ ವೀಕ್ಷಣೆಗೆ ಜನಜಾತ್ರೆಯೇ ನೆರೆಯುವ ಸಾಧ್ಯತೆಗಳಿವೆ. ಒಟ್ಟು ೮೮ ಸ್ಟಾಲ್‌ಗಳಲ್ಲಿ ವರ್ಣಮಯ ಕಲೆಯ ನಾನಾ ಚಿತ್ರಕಲೆಗಳು ಜನರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿವೆ.