
ಮೈಸೂರು: ನಿವೇಶನರಹಿತರು ಅರ್ಜಿಗಳನ್ನು ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು. ಅದಿಲ್ಲದಿದ್ದರೆ ಖಾಸಗಿ ಜಮೀನು ಅಥವಾ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿ ಎಂದು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಸೂರು ಕೊಡಬೇಕೆಂದು ೫ ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ ಮಾಡಲಾಗಿದೆ'' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶನಿವಾರ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಸೇವೆ ಇಲಾಖೆಯ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಇಡೀ ಸರ್ಕಾರ ನಿಮ್ಮ ಮುಂದಿದೆ. ನ್ಯಾಯಾಲಯಗಳಿಗೆ ಸಂಬAಧಿಸಿದ ಸಮಸ್ಯೆಗಳಿಗೆ ಉಚಿತ ಸೇವೆ ಒದಗಿಸಲು ಪ್ರಜಾಸೇವೆ ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ” ಎಂದು ತಿಳಿಸಿದರು.
ಈಗಾಗಲೇ ೬೨೦ ಕಡೆ ಪ್ರಜಾಸೇವೆ ಅಭಿಯಾನ ಆಯೋಜಿಸಲಾಗಿದೆ. ೧ ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಗೆ ಸಂಬAಧಿಸಿದAತೆ ಹೆಚ್ಚು ಅರ್ಜಿಗಳು ಬರುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ನ್ಯಾಯಾಲಯದಲ್ಲಿ ಕಾನೂನು ನೆರವು ನೀಡುವ ವಿಭಾಗವಿದ್ದು, ಅವರನ್ನು ಕರೆಸಿ ಈ ಕಾರ್ಯಕ್ರಮದಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಗೆ ಕಾನೂನಿನಲ್ಲಿ ತೊಡಕು ಇದ್ದರೆ ಉಚಿತವಾಗಿ ಸಹಾಯ ಮಾಡಲಾಗುವುದು. ಪ್ರಜಾಸೇವೆ ಇಲಾಖೆ ನಡೆಯುವಾಗ ಈ ವಿಭಾಗದವರು ಅಧಿಕಾರಿಗಳೊಂದಿಗೆ ಕೂತಿರುತ್ತಾರೆ. ಇಡೀ ದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದರು.
ಜನರ ನೋವು ಬಗೆ ಹರಿದರೆ ನಮಗೆ ಆತ್ಮತೃಪ್ತಿ;
“ರಸ್ತೆ, ಪೋಡಿ, ಪಿಂಚಣಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಅರಣ್ಯ, ಆರೋಗ್ಯ, ಪೊಲೀಸ್, ಕಾರ್ಮಿಕ, ಕೃಷಿ, ತೋಟಗಾರಿಕೆ ಸೇರಿದಂತೆ ಇಲಾಖೆವಾರು ಅಹವಾಲುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಆಲಿಸಿ ಪರಿಹಾರ ಒದಗಿಸಲು ಪ್ರಜಾ ಸೇವಕನಾಗಿ ಇಡೀ ಸರ್ಕಾರ ನಿಮ್ಮ ಮುಂದೆ ಇದೆ. ನೀವು ಚೆನ್ನಾಗಿದ್ದರೆ, ನಾವು ಚೆನ್ನಾಗಿದ್ದಂತೆ. ನಿಮ್ಮ ನೋವುಗಳನ್ನು ಬಗೆಹರಿಸಿದರೆ, ನಮಗೆ ಆತ್ಮತೃಪ್ತಿ ಸಿಗುತ್ತದೆ. ಪ್ರತಿ ತಿಂಗಳು ವಾರಕ್ಕೆ ೨ ದಿನ, ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು, ತಾಲ್ಲೂಕು ಮಟ್ಟದಲ್ಲಿ ಈ ಸಭೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಮುಗಿದ ಬಳಿಕ ಪಂಚಾಯ್ತಿ ಮಟ್ಟದಲ್ಲಿ ಈ ಕಾರ್ಯಕ್ರಮ ಮಾಡಬೇಕು. ಶಾಸಕರು ಹೋಗಿದ್ದರೆ, ಅಧಿಕಾರಿಗಳೇ ಹೋಗಿ ಜನರ ಸಮಸ್ಯೆ ಆಲಿಸಬೇಕು” ಎಂದರು.
೧೨ ಲಕ್ಷ ಪಿಂಚಣಿದಾರರಿಗೆ ಪ್ರಯೋಜನ;ಯಾರು ಯಾವ ಅರ್ಜಿ ಕೊಟ್ಟಿದ್ದಾರೆ ಅವರಿಗೆ ನನ್ನ ಪರವಾಗಿ ಉತ್ತರ ಬರುತ್ತದೆ. ಪ್ರತಿ ಇಲಾಖೆ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಪ್ರತಿ ಇಲಾಖೆಯಲ್ಲಿ ಎಷ್ಟು ಅರ್ಜಿ ವಿಲೇವಾರಿ ಆಗಿದೆ ಎಂದು ನಾನು ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ಅರ್ಜಿ ವಿಲೇವಾರಿ ಆಗದೇ ಇದ್ದರೆ, ಯಾಕೆ ಆಗಲಿಲ್ಲ ಎಂದು ವಿವರಣೆ ನೀಡಿ, ಅದಕ್ಕೆ ಪರಿಹಾರ ತಿಳಿಸಲಾಗುವುದು. ನನಗೆ ಆರಂಭದಲ್ಲಿ ಪಿಂಚಣಿ ವಿಚಾರವಾಗಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದವು. ೩೨,೦೦೦ ಆದಾಯ ಮಿತಿಯನ್ನು ನಿಗದಿ ಮಾಡಿದ್ದು, ಪಿಂಚಣಿ ನಿಂತಿದೆ ಎಂದಾಗ, ಅದಕ್ಕೆ ೧.೨೦ ಲಕ್ಷದವರೆಗೆ ಆದಾಯ ಮಿತಿಯನ್ನು ನಿಗದಿ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸರ್ಕಾರದ ಒಂದು ತೀರ್ಮಾನದಿಂದ ೧೨ ಲಕ್ಷ ಜನರಿಗೆ ಪ್ರಯೋಜನವಾಗಿದೆ'' ಎಂದರು. "ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ೨೧೭ ತಾಲ್ಲೂಕುಗಳು ಬರಗಾಲ ಪೀಡಿತವಾಗಿವೆ. ಟ್ರಾ÷್ಯಕ್ಟರ್ ಗಳಿಗೆ ಸಹಾಯಧನ, ನೇಗಿಲಯೋಗಿ ಯೋಜನೆಗೆ ೨ ತಾಲ್ಲೂಕು ಆಯ್ಕೆ ಮಾಡಿ ಹೊಲ ಉಳುಮೆ ಮಾಡಿಕೊಡಲು ಕೃಷಿ ಸಚಿವ ನರೇಂದ್ರಸ್ವಾಮಿಯವರಿಗೆ ಸೂಚನೆ ನೀಡಿರುವುದಾಗಿ" ತಿಳಿಸಿದರು. "ನಮ್ಮ ದೇಶದ ಯುವಕರು ಸಹಬಾಳ್ವೆಯಿಂದಿರಲು ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯುವಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಪ್ರತಿ ಸಂಘಕ್ಕೆ ವಾರ್ಷಿಕ ೧೦ ಲಕ್ಷ ಅನುದಾನ ನೀಡಲಾಗುತ್ತಿದೆ. ೧೬-೩೫ ವರ್ಷದೊಳಗಿನ ಯುವಕರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಇವರಿಗೆ ಒಬ್ಬ ಮಾರ್ಗದರ್ಶಕರೊಬ್ಬರನ್ನು ನೇಮಿಸಲಾಗುವುದು. ಇಂದು ಬೆಳಿಗ್ಗೆಯಷ್ಟೇ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮ ಅವರನ್ನು ಅಭಿನಂದಿಸಿದ್ದೇನೆ. ರಾಜ್ಯದ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು" ಎಂದರು ಗೃಹಜ್ಯೋತಿ, ಗೃಹಲಕ್ಷಿ÷್ಮ ಯೋಜನೆಗಳು ದುರುಪಯೋಗವಾಗುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮರುಪರಿಶೀಲನೆ ಕೈಗೊಳ್ಳಲಾಯಿತು ಎಂದರು.
ಸ್ಮಶಾನಗಳ ಅಭಿವೃದ್ಧಿಗೆ ಮುಕ್ತಿ ಧಾಮ;
“ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರಿಗೆ ನೆರವಾಗಲು ಹೊರಟಿದ್ದೇವೆ. ಗ್ರಾಮಗಳಲ್ಲಿ ಮುಕ್ತಿಧಾಮ ಎಂಬ ಯೋಜನೆಯಡಿ ಸ್ಮಶಾನಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು
ಜನರಿಗೆ ಶಕ್ತಿ ತುಂಬಲು ಸರ್ಕಾರ ಅವಕಾಶಗಳನ್ನು ಕಲ್ಪಿಸಿದೆಆರನೇ ಗ್ಯಾರಂಟಿಯಾದ ಭೂಮಿ ಗ್ಯಾರಂಟಿಯಡಿ ಇ ಸ್ವತ್ತು, ಪೋಡಿ ಮುಂತಾದ ದಾಖಲೆಗಳನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಹಿಂದೆ ಇದ್ದ ಕೇಂದ್ರ ಸರ್ಕಾರ ೯೦% ಹಾಗೂ ರಾಜ್ಯ ಸರ್ಕಾರ ೧೦% ಅನುದಾನದ ಪಾಲು ಹಂಚಿಕೆಯನ್ನು ೬೦:೪೦ ಮಾಡಿದ್ದಾರೆ. ಆದರೂ ಜನರಿಗೆ ಶಕ್ತಿ ತುಂಬಲು ಸರ್ಕಾರ ಅವಕಾಶಗಳನ್ನು ಕಲ್ಪಿಸಿದೆ'' ಎಂದು ತಿಳಿಸಿದರು. ಅರಣ್ಯ ಇಲಾಖೆಯ ಸಮಸ್ಯೆಗಳು ಹೆಚ್ಚಿವೆ ಎಂದು ತಿಳಿಸಿದ್ದು, ಜನರು ಒತ್ತುವರಿ ಮಾಡಬಾರದು. ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ ಒಂದರೊಳಗೆ ವಶಕ್ಕೆ ನೀಡಬೇಕು. ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿ ಅದನ್ನು ಪಡೆಯಬೇಕು. ಬಗರ್ ಹುಕುಂ ಮುಂತಾದ ಕಾನೂನುಬದ್ಧ ಅರ್ಜಿಗಳ ವಿಲೇವಾರಿಗೆ ಮಾರ್ಗದರ್ಶನ ಮಾಡಲಾಗುವುದು. ಯಾರನ್ನೂ ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಸಚಿವರುಗಳಾದ ಈಶ್ವರ ಖಚಿಡ್ರೆ, ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರುಗಳಾದ ಕೆ.ವೆಂಕಟೇಶ್, ಡಿ.ರವಿಶಂಕರ್, ಜಿಲ್ಲಾಧಿಕಾರಿ ಲಕ್ಷಿö್ಮಕಾಂತ ಜಿ.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.