Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ


ಮೈಸೂರು : ಜಿಲ್ಲೆಯ ಬರಪರಿಸ್ಥಿತಿಯ ಕುರಿತು ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಜಿಲ್ಲೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿತು.
ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತ ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟಿçÃಯ ಬೆಳೆ ಮುನ್ಸೂಚನೆ ಕೇಂದ್ರ (ಒಓಅಈಅ)ದ ಉಪನಿರ್ದೇಶಕ ಕರಣ್ ಚೌಧರಿ ಅವರು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮೈಸೂರು ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ್ ರೆಡ್ಡಿ ಜಿ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರತರ ಬರ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿರುತ್ತದೆ ಹಾಗೂ ಶೇ ೫೯ ರಷ್ಟು ಮಳೆ ಕೊರತೆಯಾಗಿರುತ್ತದೆ ಎಂದು ತಿಳಿಸಿದರು.
ಕೆ.ಆರ್.ಎಸ್, ಕಬಿನಿ ಹಾಗೂ ಹಾರಂಗಿ ಮುಖ್ಯವಾಗಿ ೩ ಜಲಾಶಯಗಳಿದ್ದು ಕೆ.ಆರ್.ಎಸ್ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ ೧೭.೮೬ ಟಿಎಂಸಿ ಇದ್ದು, ಕಳೆದ ಬಾರಿ ೨೧.೮೩ ಟಿಎಂಸಿ ಇರುತ್ತದೆ. ೫ ಟಿಎಂಸಿ ಕೊರತೆಯಾಗಿರುತ್ತದೆ. ಇದೇ ರೀತಿ ಕಬಿನಿ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ ೧.೩೧ ಟಿಎಂಸಿ ಇದ್ದು, ಕಳೆದ ಬಾರಿ ೮.೭೧ ಟಿಎಂಸಿ ಇರುತ್ತದೆ. ೭ ಟಿಎಂಸಿ ಕೊರತೆಯಾಗಿರುತ್ತದೆ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗಾಗಿ ಹಾಗೂ ಕೆರೆ ತುಂಬಿಸಲು ಮಾತ್ರ ಬಳಸಲಾಗುತ್ತಿದೆ.ಮಳೆಯ ಅಭಾವ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿಗೂ ಸಹ ತೀವ್ರ ತೊಂದರೆ ಎದುರಾಗುವ ಪರಿಸ್ಥಿತಿ ಇರುತ್ತದೆ ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕಕೆ.ಹೆಚ್ ರವಿ ಮಾತನಾಡಿ, ಜಿಲ್ಲೆಯಲ್ಲಿ ಬರದಿಂದ ಸುಮಾರು ೧೪೩೩೦೮ ನಷ್ಟು ಬೆಳೆ ನಾಶವಾಗಿದ್ದು, ಎಸ್.ಡಿ.ಆರ್ ಎಫ್ ನಿಯಮದ ಪ್ರಕಾರ ಸುಮಾರು ೧೨೨.೩೪ ಕೋಟಿ ರೂ ಹಣ ನಷ್ಠವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯಾ ಆರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.