
ಮೈಸೂರು: ನಗರದ ವಿಶ್ವಪ್ರಸಿದ್ಧ ಅಂಬಾ ವಿಲಾಸ ಅರಮನೆಯಲ್ಲಿ ದಸರಾದ ನವರಾತ್ರಿ ಸಂದರ್ಭದಲ್ಲಿ ರಾಜವಂಶಸ್ಥರು ನಡೆದ ಖಾಸಗಿ ದರ್ಬಾರ್‌ಗೆ ಸೋಮವಾರ ರತ್ನಖಚಿತ ಸಿಂಹಾಸನ ಸಿದ್ಧವಾಯಿತು.
ರಾಜವಂಶಸ್ಥರ ಖಾಸಗಿ ನವರಾತ್ರಿಯ ಖಾಸಗಿ ದರ್ಬಾರ್, ದಸರಾಗೆ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕ ಚಟುವಟಿಕೆಗಳು ಗರಿಗೆದರಿವೆ. ಅರಮನೆ ಆವರಣದಲ್ಲಿ ಇಂದು ರಾಜಮಾತೆ ಪ್ರಮೋದಾದೇವಿ ಅವರ ಸಮ್ಮುಖದಲ್ಲಿ ಶಾಸ್ತೊçÃಕ್ತವಾಗಿ ಸಿಂಹಾಸನ ಜೋಡಣಾ ಕಾರ್ಯಕ್ರಮ ಖಾಸಗಿಯಾಗಿ ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮವನ್ನು ನಡೆಸಲಾಯಿತು. ಬೆಳಗ್ಗೆ ೭.೩೦ಕ್ಕೆ ನವಗ್ರಹ ಹೋಮ ಮಾಡಿ ಸ್ಥಳ ಶುದ್ಧೀಕರಣ ನಡೆಸಲಾಯಿತು. ನಂತರ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಯನ್ನು ಗೋಶಾಲೆಗೆ ಮಂಗಳವಾದ್ಯದೊAದಿಗೆ ಕರೆತಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ ಅರಮನೆಯ ಭದ್ರತಾ ಕೊಠಡಿಯಿಂದ ರತ್ನಖಚಿತ ಸಿಂಹಾಸನದ ಬಿಡಿಭಾಗಗಳು ದರ್ಬಾರ್ ಹಾಲ್‌ಗೆ ತರಲಾಯಿತು. ಬೆಳಗ್ಗೆ ೧೦.೨೦ಕ್ಕೆ ಸಲ್ಲುವ ಶುಭ ಗಳಿಗೆಯಲ್ಲಿ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿ ಭದ್ರಾಸನ ಜೋಡಣಾ ಕಾರ್ಯ ಆರಂಭವಾಯಿತು.
ಒಟ್ಟು ೧೩ ಬಿಡಿಭಾಗಗಳನ್ನ ಜೋಡಿಸಿ ಸಿಂಹಾಸನ ಸಿದ್ಧಗೊಳಿಸಲಾಯಿತು.
ಮಧ್ಯಾಹ್ನ ೧೨ ಗಂಟೆಯೊಳಗೆ ಸಿಂಹಾಸನ ಹಾಗೂ ಭದ್ರಾಸನ ಜೋಡಣೆ ಪೂರ್ಣಗೊಳಿಸಿದ ಬಳಿಕ ಸಿಂಹಾಸನದ ಮೇಲೆ ಪರದೆ ಬಿಡಲಾಯಿತು.
ಸಿಂಹಾಸನ ಜೋಡಣಾ ಕಾರ್ಯಕ್ರಮ ಹಿನ್ನಲೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ರತ್ನಖಚಿತ ಸಿಂಹಾಸನ : ವರ್ಷದಲ್ಲಿ ನವರಾತ್ರಿ ಸಂದರ್ಭದಲ್ಲಿ ಮಾತ್ರ ರತ್ನಖಚಿತ ಸಿಂಹಾಸನ ನೋಡಲು ಸಿಗುತ್ತದೆ. ನವರಾತ್ರಿಯ ೯ ದಿನಗಳು ಮಹಾರಾಜರು ಖಾಸಗಿಯಾಗಿ ದರ್ಬಾರ್ ನಡೆಸುವ ಈ ಸಿಂಹಾಸನ ಒಟ್ಟು ೧೩ ಬಿಡಿ ಭಾಗಗಳಿಂದ ಕೂಡಿದೆ. ಅರಮನೆಯ ನೆಲಮಾಳಿಗೆಯ ರಹಸ್ಯ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರುವ ಈ ರತ್ನಖಚಿತ ಸಿಂಹಾಸನ ರಾಜಮನೆತನಕ್ಕೆ ಸೇರಿದ್ದು. ನವರಾತ್ರಿ ಸಂದರ್ಭದಲ್ಲಿ ಈ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಬಳಿಕ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ವಿಜಯದಶಮಿಯ ನಂತರ ನವೆಂಬರ್ ೧೯ರಂದು ಸಿಂಹಾಸನವನ್ನು ದರ್ಬಾರ್ ಹಾಲ್‌ನಿಂದ ವಿಸರ್ಜನೆ ಮಾಡಿ ಪುನಃ ಸ್ಟಾçಂಗ್ ರೂಂನಲ್ಲಿಟ್ಟು ಸೀಲ್ ಮಾಡಲಾಗುತ್ತದೆ.
ಅ. ೧೧ರ ದಸರಾ ಮೊದಲ ದಿನ ಬೆಳಗ್ಗೆ ೬ ರಿಂದ ೭.೧೨ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಮುಖವಾಡ ಜೋಡಣೆಯಾಗುತ್ತದೆ. ಅಂದು ಬೆಳಗ್ಗೆ ೮.೩೫ ರಿಂದ ೯.೦೫ ಕಂಕಣ ಧಾರಣೆ ಬಳಿಕ ೧೧.೪೫ ರಿಂದ ೧೨.೦೫ ರೊಳಗೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಿಂಹಾಸನಾರೋಹಣ ನೆರವೇರುವುದು.
ಆಯುಧಪೂಜೆ ಬಳಿಕ ಸಿಂಹದ ಮುಖವಾಡ ವಿಸರ್ಜನೆಯಾಗಲಿದ್ದು, ನವೆಂಬರ್ ೧೯ರಂದು ರತ್ನಖಚಿತ ಸಿಂಹಾಸನವನ್ನು ಸ್ವಸ್ಥಾನದಲ್ಲೇ ಇರಿಸಲಾಗುತ್ತದೆ.