Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಂದಿನಿ ಹಾಲಿನ ದರ ಹೆಚ್ಚಳದ ನಿರ್ಧಾರ ಕೈ ಬಿಡಲು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹ


ಮೈಸೂರು; ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾವನೆವನ್ನು ಕೂಡಲೇ ಕೈಬಿಡಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಈಗಾಗಲೇ ಅನೇಕ ದಿನಸಿ ಪದಾರ್ಥಗಳ ದರಗಳು ಗಗನಕ್ಕೇರಿದ್ದು, ಜನಸಾಮಾನ್ಯರು ಮತ್ತು ನಮ್ಮಂತಹ ಸಣ್ಣ ಹೋಟೆಲ್ ಉದ್ಯಮಿಗಳು ಜೀವನ ಮತ್ತು ಉದ್ಯಮ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಕಳೆದ ವರ್ಷ ಹಾಲಿನ ಬೆಲೆ ಪರಿಷ್ಕರಿಸಲಾಗಿದ್ದು,ಕಳೆದ ತಿಂಗಳು ಎರಡು ಸಲ ನಂದಿನಿ ತುಪ್ಪ ಶೇ೧೦% ರಷ್ಟು ಹೆಚ್ಚಿಸಲಾಗಿದೆ, ಈಗ ಮತ್ತೆ ದರ ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ೧೦ ತಿಂಗಳಲ್ಲಿ ದವಸ-ಧಾನ್ಯಗಳು, ಅಡುಗೆ ಎಣ್ಣೆ, ಬೇಳೆ-ಕಾಳುಗಳು, ಪನ್ನೀರ್, ಸಾಂಬಾರು ಪದಾರ್ಥಗಳು, ಮಸಾಲೆ ಪದಾರ್ಥಗಳು, ಈರುಳ್ಳಿ, ೪೦%,,ಆಲೂಗಡ್ಡೆ, ಬೆಳ್ಳುಳ್ಳಿ ಸೇರಿದಂತೆ ಎಲ್ಲವೂ ಶೇ.೧೫% ರಿಂದ ೨೦% ರಷ್ಟು ಹೆಚ್ಚಾಗಿವೆ. ಪೆಟ್ರೋಲ್, ಡೀಸೆಲ್ ಹೆಚ್ಚಿಸಲಾಗಿದೆ,ಮತ್ತು ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ರೂ.೪೦ ರಷ್ಟು ಹೆಚ್ಚಾಗಿದೆ. ಕಾಫಿ ಪುಡಿ ಪ್ರತಿ ಕೆ.ಜಿ.ಗೆ ರೂ.ಶೇ೨೦೦%ರಷ್ಟು ಹೆಚ್ಚಾಗಿದೆ. ಹೋಟೆಲ್‌ಗಳಲ್ಲಿ ನೌಕರರ ತೀವ್ರ ಕೊರತೆ ಮತ್ತು ಸಂಬಳ ಹೆಚ್ಚಳದಿಂದ ಉದ್ಯಮ ನಡೆಸುವುದು ಬಹಳ ಕಷ್ಟಕರವಾಗಿದೆ. ವಿದ್ಯುತ್ ಶುಲ್ಕ, ನೀರಿನ ಶುಲ್ಕ, ವಾಣಿಜ್ಯ ಅಡಿಗೆ ಅನಿಲ ಶೇ೯೦% ರಷ್ಟು ಹೆಚ್ಚಿಸಿ, ೦೭ತಿಂಗಳಾಗಿದೆ ಇವೆಲ್ಲರದ ನಡುವೆ ಹಾಲಿನ ದರ ಹೆಚ್ಚಿಸಿದರೆ, ಮಧ್ಯಮ ವರ್ಗದವರು ಜೀವನ ನಿರ್ವಹಣೆ ನಡೆಸುವುದು ತುಂಬಾ ದುಬಾರಿಯಾಗುತ್ತದೆ. ಆದ್ದರಿಂದ ಹಾಲು ಮೊಸರು ದರಗಳನ್ನು ಹೆಚ್ಚಿಸಲೇ ಬಾರದು. ಜನಸಾಮಾನ್ಯರ ಮತ್ತು ಸಾವಿರಾರು ಹೋಟೆಲ್ ಕಾರ್ಮಿಕರ ಹಿತದೃಷ್ಟಿಯಿಂದ, ಹಾಲಿನ ದರ ಹೆಚ್ಚಳದ ಪ್ರಸ್ತಾವನೆಯನ್ನು ಹಿಂಪಡೆಯಬೇಕಾಗಿ, ದರ ಏರಿಕೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.