ಚುಂಚನಕಟ್ಟೆ ಗ್ರಾಮದಲ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಶೀಘ್ರದಲ್ಲಿ ಮನೆ ಹಕ್ಕುಪತ್ರ ; ಶಾಸಕ ಡಿ.ರವಿಶಂಕರ್
ಕೆ.ಆರ್ ನಗರ; ಕೆ.ಆರ್. ನಗರ ಶಾಸಕರಾದ ಡಿ. ರವಿಶಂಕರ್ ಮತ್ತು ಮೈಸೂರು ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ ರವರ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದಸಂಸದ ಮುಖಂಡರುಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೆ.ಆರ್ ನಗರ ಶಾಸಕರಾದ ಡಿ. ರವಿಶಂಕರ್ ರವರು ಮಾತನಾಡಿ ಹಲವಾರು ವರ್ಷಗಳಿಂದ ಅಲೆಮಾರಿ ಸಮುದಾಯಕ್ಕೆ ಸೇರಿದ ಹಲವಾರು ಕುಟುಂಬಗಳು ಮತ್ತು ಇತರೆ ಸಮುದಾಯಕ್ಕೆ ಸೇರಿದ ಬಡ ಕುಟುಂಬಗಳು ಕುಪ್ಪೆ ಸರ್ವೆ ನಂಬರ್ 69 ರ 2-00 ಎಕರೆ ಸರ್ಕಾರಿ ಜಾಗದಲ್ಲಿ ಮನೆಗಳನ್ನು…