
ಮೈಸೂರು: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದು ವಿಜಯ ಪತಾಕೆ ಹಾರಿಸಿ ಹೊಸ ಇತಿಹಾಸ ನಿರ್ಮಿಸಿರುವ ಗಾಲ್ಫರ್ ಪ್ರಣವಿ ಅರಸ್ ಅವರು ತಮ್ಮ ತವರೂರಾದ ಮೈಸೂರಿಗೆ ಬುಧವಾರ ಆಗಮಿಸಿದಾಗ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಯಿತು.
ಪದಕ ಗೆದ್ದ ಬಳಿಕ ಮೈಸೂರಿಗೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ತೆರೆದ ಜೀಪಿನಲ್ಲಿ ಅವರನ್ನು ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರಣವಿ ಅರಸ್ ಅವರನ್ನು ಕ್ರೀಡಾಭಿಮಾನಿಗಳು ಹಾಗೂ ಕುಟುಂಬಸ್ಥರು ಸಂಭ್ರಮದಿAದ ಬರಮಾಡಿಕೊಂಡರು. ಸಂಸದ ಯದುವೀರ್ ಒಡೆಯರ್ ಅವರು ಸಾಧಕಿಗೆ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.
ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ತಂಡವಾಗಿ ಗೆದ್ದ ಬೆಳ್ಳಿ ಪದಕಗಳನ್ನು ಅಲ್ಲಿ ಸೇರಿದ್ದ ನೂರಾರು ಕ್ರೀಡಾಭಿಮಾನಿಗಳ ತೋರಿಸಿದ ಪ್ರಣವಿ ಅರಸ್, ಅಭಿಮಾನಿಗಳು ನೀಡಿದ ಭವ್ಯ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, ಚಿನ್ನದ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ. ಆದರೆ, ಈ ಸಾಧನೆ ಅಷ್ಟು ಸುಲಭವಾಗಿರಲಿಲ್ಲ. ದೇಶಕ್ಕೆ ಪದಕ ಗೆದ್ದು ಕೊಡುವುದು ಹೆಮ್ಮೆಯ ಸಂಗತಿ. ಚಿನ್ನ ಗೆದ್ದಿರುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ. ಆದರೆ, ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ನಿತ್ಯ ೫ ರಿಂದ ೬ ಗಂಟೆಗಳ ಅಭ್ಯಾಸ ಮಾಡುತ್ತಿದ್ದೆ. ಪ್ರತಿ ದಿನವೂ ಸವಾಲಿನದ್ದಾಗಿತ್ತು. ಮನೆಯವರ ಪ್ರೋತ್ಸಾಹವಿಲ್ಲದೇ ನಾನಿಂದು ಈ ಸ್ಥಾನದಲ್ಲಿ ನಿಲ್ಲಲಾಗುತ್ತಿರಲಿಲ್ಲ ಎಂದು ಕುಟುಂಬದ ಸಹಕಾರ ಸ್ಮರಿಸಿದರು.
ತಮ್ಮ ಮುಂದಿನ ಗುರಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವುದು ನನ್ನ ಮುಂದಿನ ಗುರಿಯಾಗಿದೆ. ಆ ಪ್ರಯತ್ನ ಈಗಿನಿಂದಲೇ ಶುರುವಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಎಲ್ಲರೂ ಗಾಲ್ಫ್ ಎಂದರೆ ಅದು ಕೇವಲ ಉಳ್ಳವರಿಗೆ ಮಾತ್ರವೇ ಸೀಮಿತವಾಗಿರುವ ಕ್ರೀಡೆ ಅಂತ ಭಾವಿಸುತ್ತಾರೆ. ಆದರೆ, ಆ ಭಾವನೆ ತಪುö್ಪ. ಗಾಲ್ಫ್ ಅನ್ನು ಎಲ್ಲರೂ ಆಡಬಹುದು. ಒಂದು ಬಾರಿ ನೀವು ಆಡಲು ಪ್ರಾರಂಭಿಸಿದರೆ ಪ್ರೋತ್ಸಾಹ ಸೇರಿದಂತೆ ಎಲ್ಲವೂ ಸಿಗಲಿದೆ ಎಂದು ಯುವ ಕ್ರೀಡಾಭಿಮಾನಿಗಳಿಗೆ ಕೆಲವು ಸಲಹೆ ನೀಡಿದರು.