
ಮೈಸೂರು; ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಬುಧವಾರ ನಗರದ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ ನಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮೈಸೂರು ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ಹಾಸನ ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯಗಳ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.
ಮೈಸೂರಿನಿAದ ವಿಶ್ವವಿದ್ಯಾಲಯಗಳು ಬೇರ್ಪಟ್ಟ ನಂತರ ಚಾಮರಾಜನಗರ, ಮಂಡ್ಯ, ಹಾಸನ ವಿಶ್ವವಿದ್ಯಾಲಯಗಳು ಆಯಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ಥಳ ವಿಸ್ತೀರ್ಣ, ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಾರ್ಯನಿರ್ವಹಿಸುತ್ತಿರುವ ಖಾಯಂ ಉಪನ್ಯಾಸಕರು, ಖಾಲಿ ಇರುವ ಹುದ್ದೆ, ಅತಿಥಿ ಉಪನ್ಯಸಕರು, ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವವರ ವಿವರಗಳನ್ನು ಪಡೆದುಕೊಂಡರು.
ವಿಶ್ವವಿದ್ಯಾಲಯದ ಕೋಸ್ ೯ ಗಳು, ಯು.ಜಿ ಹಾಗೂ ಪಿ.ಜಿ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ, ಸಂಗ್ರಹವಾಗುತ್ತಿರುವ ಮತ್ತು ವೆಚ್ಚವಾಗುತ್ತಿರುವ ಹಣಕಾಸು, ಆಯವ್ಯಯದ ವಿವರ ಪಡೆದುಕೊಂಡರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಹಾಸನ, ಮಂಡ್ಯ ಚಾಮರಾಜನಗರ ವಿಶ್ವವಿದ್ಯಾಲಯ ಬೇರ್ಪಡೆಯಾದ ನಂತರ ಪಿಂಚಣಿ ಪಾವತಿ ಕುರಿತು ಸಮಸ್ಯೆ ಉಂಟಾಗಿದೆ.ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಖಾಯA ಉಪನ್ಯಾಸಕರು ಇಲ್ಲದ ಕಾರಣ ಅತಿಥಿ ಉಪನ್ಯಸಕರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸಂಬಳವನ್ನು ವಿಶ್ವವಿದ್ಯಾಲಯದ ಸ್ವಂತ ಆದಾಯದಿಂದ ಸಂಬಳ ನೀಡುವುದು ಕಷ್ಟಕರವಾಗಿರುತ್ತದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವಂತೆ ಹಾಗೂ ತಾವು ಖುದ್ದು ಸರ್ಕಾರದ ಹಂತದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಉಪಾಧ್ಯಕ್ಷ ಪ್ರೊ ಎಸ್.ಆರ್.ನಿರಂಜನ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ ಎನ್.ಕೆ ಲೋಕನಾಥ ಹಾಸನ ವಿಶ್ವವಿದ್ಯಾಲಯ ಕುಲಪತಿ ತಾರಾನಾಥ್, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಶಿವಚಿತ್ತಪ್ಪ ಸಚಿವರ ಆಪ್ತ ಕಾರ್ಯದರ್ಶಿ ಚಿದಂಬರ್ ಪಿ.ಎಂ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.