
ಎಚ್ . ಡಿ.ಕೋಟೆ : ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಡೆಯಲು ಕಾಡಂಚಿನ ಭಾಗದ ರೈತರು ಹಾಗೂ ರೈತ ಮುಖಂಡರ ಸಹಕಾರ ಬಹಳ ಮುಖ್ಯ ಎಂದು ಮೈಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಕೆ ಹೇಳಿದರು.
ತಾಲೂಕಿನ ಹ್ಯಾಂಡ್ ಪೋಸ್ಟ್ ಫಾರೆಸ್ಟ್ ಡಿಪೋ ಆವರಣದಲ್ಲಿ 72ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಅವಳಿ ತಾಲೂಕಿನಲ್ಲಿ ಮೂರು ಜಲಾಶಯಗಳು ಇರೋದಕ್ಕೆ ಮುಖ್ಯ ಕಾರಣ ಅರಣ್ಯ. ಹೀಗಾಗಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಸಹಬಾಳ್ವೆಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು. ವಿಭಿನ್ನ ಪ್ರಯೋಗಗಳೂ ನಡೆಯುತ್ತಿದ್ದರೂ ಸರಗೂರು, ಮೊಳೆಯೂರು ಅರಣ್ಯ ಭಾಗದಲ್ಲಿ ಕಾಡುಪ್ರಾಣಿಗಳು ನಾಡಿನೊಳಗೆ ಬರುತ್ತವೆ. ಇದನ್ನು ತಡೆಯಲು
ರೈಲ್ವೆ ಬ್ಯಾರಿಕೇಡ್ ಹಾಗೂ ತಂತಿ ಬೇಲಿ ಅಲ್ಲಲ್ಲಿ ಹಾಕಲಾಗುತ್ತಿದೆ. ಇನ್ನು ಬೆಳೆ ಪರಿಹಾರವನ್ನು ರೈತರಿಗೆ ಶೀಘ್ರವಾಗಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು. ಬಾಕಿ ಉಳಿದಿರುವ ಬೆಳೆ ಪರಿಹಾರ ಬಿಡುಗಡೆಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪರಮೇಶ್ ಕೆ ಹೇಳಿದರು.
ಹೆಚ್ ಡಿ ಕೋಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರಾ ಎಸ್ ಮಾತನಾಡಿ, ಅರಣ್ಯ ಸಂರಕ್ಷಣೆಯಲ್ಲಿ ಯುವಕರು ಸ್ವಯಂಪ್ರೇರಿವಾಗಿ ಪಾಲ್ಗೊಂಳುವಂತೆ ಮಾಡಲು ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯದಲ್ಲಿ ಗೆಲ್ಲಬೇಕಾದರೆ ತಂಡದಲ್ಲಿರುವ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯವಾಗುತ್ತೆ. ಒಗ್ಗಟಾಗಿ ಸವಾಲುಗಳನ್ನು ಎದುರಿಸಿದಾಗ ಮಾತ್ರ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತೆ. ಅದರಂತೆ ಹೆಚ್ಚುತ್ತಿರುವ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷವನ್ನು ಕೊಂಚ ಮಟ್ಟಿಗೆ ತಡೆಯಲು ಪ್ರತಿಯೊಬ್ಬರ ಸಹಕಾರ. ಸಹಬಾಳ್ವೆ ಬೇಕಾಗುತ್ತದೆ. ಕಾಡುಪ್ರಾಣಿಗಳಿಂದ ತೊಂದರೆ ಆದಾಗ ಪರಿಸ್ಥಿತಿ ನಿಯಂತ್ರಿಸಲು, ಅರಣ್ಯಧಿಕಾರಿಗಳ ಜೊತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಧಿಕಾರಿಗಳಾದ ರಾಮಾನುಂಜೇಯಲು, ಮುತ್ತು ಗೋಳಬಾವಿ, ಹನುಮಂತು ಕಂಬ್ಳೆ,, ಉಪ ವಲಯ ಅರಣ್ಯಧಿಕಾರಿಗಳಾದ ರವಿಕುಮಾರ್, ಸ್ನೇಹ, ಪುರಸಭೆ ಮುಖ್ಯಧಿಕಾರಿ ಸುರೇಶ್, ಪುರಸಭೆ ಮಾಜಿ ಸದಸ್ಯ ಪ್ರೇಮ್ ಸಾಗರ್, ಉಪನ್ಯಾಸಕರಾದ ಪ್ರಕಾಶ್, ರೈತ ಮುಖಂಡರಾದ ಪಳನಿಸ್ವಾಮಿ, ಗಂಗಾಧರಯ್ಯ, ಮಲ್ಲೇಶ್ ಗೌಡ ಚಾಮಹಳ್ಳಿ, ಮಹದೇವ್, ಶಶಿಕುಮಾರ್, ಶಿವಕುಮಾರ್ ನೇರಳೆ, ಮಹೇಶ್ ಗೌಡ, ಸತೀಶ್, ರಾಜೇಶ್, ರುದ್ರಸ್ವಾಮಿ ಸೇರದಂತೆ ಅರಣ್ಯ ಸಿಬ್ಬಂದಿ, ಕ್ರೀಡಾಸ್ಪರ್ಧಿಗಳು ಉಪಸ್ಥಿತರಿದ್ದರು.