
ಮೈಸೂರು : ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷ, ಯುವ ಸಾಹಿತಿ ಹಾಗೂ ನಾಟಕಕಾರ ಎಸ್. ಶಿಶಿರಂಜನ್ ಅವರಿಗೆ ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ನೀಡಲಾಗುವ ೨೦೨೬ನೆಯ ಸಾಲಿನ ರಾಜ್ಯ ಮಟ್ಟದ ‘ಹೊಯ್ಸಳ ಸಾಹಿತ್ಯ ಪ್ರಶಸ್ತಿ’ ದೊರೆತಿದೆ ಎಂದು ಪ್ರಕಾಶನದ ಸಂಸ್ಥಾಪಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯದ ಕಾವ್ಯ ಮತ್ತು ನಾಟಕ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಎಸ್. ಶಿಶಿರಂಜನ್ ಅವರು ಸಂವೇದನೆ, ಅವ್ವ, ಲಂಕೇಶನ ತಲೆಗಳು, ಋಣ ಸಂದಾಯವಾಗಲಿ ಒಂದಿಷ್ಟು, ನವಭಾರತ ಜನನಿಯ ತನುಜಾತೆ ಕವನ ಸಂಕಲನಗಳನ್ನು ಪ್ತಕಟಿಸಿದ್ದಾರೆ. ಇದೆಂಥಾ ದೇಶಪ್ರೇಮ ರೀ…? ಹಾಗೂ ಧರ್ಮ ಎಂಬ ನಾಟಕಗಳನ್ನು ರಚಿಸಿಸಿದ್ದಾರೆ. ‘ಮರಳಿ ಬಾ ಮನಸೇ’ ಎಂಬ ಭಾವಗೀತೆಗಳ ಧ್ವನಿಸುರುಳಿಯನ್ನೂ ಹೊರತಂದಿದ್ದಾರೆ.
ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಎಸ್. ಶಿಶರಂಜನ್ ಅವರು, ಹಲವಾರು ನಾಟಕಗಳನ್ನು ನಿರ್ದೇಶಿಸುವ ಜೊತೆಗೆ ಅಭಿನಯವನ್ನೂ ಮಾಡಿ ಗಮನಸೆಳೆದಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಕೇಸರಿ ಹರವು, ವಿ. ನಾಗೇಂದ್ರ ಪ್ರಸಾದ್ ಅವರ ಬಳಿ ಕೆಲಕಾಲ ಶಿಷ್ಯರಾಗಿದ್ದರು.
ಹಾಸನದ ಸಂಸ್ಕöÈತ ಭವನದಲ್ಲಿ ಅ. ೧೧ ರಂದು ಬೆಳಗ್ಗೆ ೧೦ ಗಂಟೆಗೆ ಕವಯತ್ರಿ ಹಾಗೂ ಸಂಶೋಧಕಿ ಡಾ.ಹೆಚ್.ಕೆ. ಹಸೀನಾ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಮಾಣಿಕ್ಯ ಕವಿ-ಕಾವ್ಯ ಸಂಭ್ರಮ’ದಲ್ಲಿ ಕವಿ ಎಸ್. ಶಿಶಿರಂಜನ್ ಅವರಿಗೆ ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಯಚೂರಿನ ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಸಮಾರಂಭ ಉದ್ಘಾಟನೆ ನೆರವೇರಿಸುವರು.