
ಪಿರಿಯಾಪಟ್ಟಣ : ಮಹಿಳೆ ಅಬಲೆಯಲ್ಲ ಸಬಲೇ ಈ ಮಾತು ಸಾಕಾರವಾಗಬೇಕಾದರೆ ಆಕೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ರವಿ ತಿಳಿಸಿದರು.
ತಾಲೂಕಿನ ಕೆ. ಹರಳಹಳ್ಳಿ ಗ್ರಾಮದಲ್ಲಿ ಮಾದೇಶ್ವರ ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಕೆಲ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಅವರು ನಮ್ಮ ಸಂಸ್ಥೆಯ ಜ್ಞಾನವಿಕಾಸ ಕೇಂದ್ರದ ಸದಸ್ಯರಾದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರ ಜ್ಞಾನ ವೃದ್ಧಿಯಾಗಿ ಬುದ್ಧಿವಂತಿಕೆ ಹೆಚ್ಚುತ್ತದೆ.
ಪ್ರಚಲಿತ ವಿದ್ಯಮಾನಗಳ ಅರಿವು ಅವರಲ್ಲಿ ಮೂಡುತ್ತದೆ. ಜೊತೆಗೆ ಶಿಕ್ಷಣ, ಸರ್ಕಾರಿ ಯೋಜನೆ, ಮಹಿಳೆಯ ಹಕ್ಕು ಮತ್ತು ಕಾನೂನು ಕುರಿತು ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನಿಸಾ ಬೇಗಂ, ಗ್ರಾಮಲೆಕ್ಕಿಗ ರಘುವೀರ್, ಚಂದ್ರಹಾಸ್, ಮಾಜಿ ಅಧ್ಯಕ್ಷ ನಟರಾಜ್, ಒಕ್ಕೂಟದ ಅಧ್ಯಕ್ಷೆ ಇಂದು, ಹೇಮಾವತಿ, ತಾ.ಸಮನ್ವಯಾಧಿಕಾರಿ ಸರಿತಾ, ವಲಯ ಮೇಲ್ವಿಚಾರಕ ಶಿವಕುಮಾರ್, ಸುಮಿತ್ರ ರೋಜಾ, ಸವಿತಾ ಸೇರಿದಂತೆ ಸೇವಾ ಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.