Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಂಬಾ ವಿಲಾಸ ಅರಮನೆಯಲ್ಲಿ ರಾಜಮನೆತನದವರ ಖಾಸಗಿ ದರ್ಬಾರ್ ಆರಂಭಕ್ಕೆ ಸಿದ್ಧತೆ


ಮೈಸೂರು: ವಿಶ್ವ ಪ್ರಸಿದ್ಧ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಅ.11 ರಿಂದ ರಾಜ ವಂಶಸ್ಥರು ನವರಾತ್ರಿ ಆಚರಣೆ, ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಆ ಮೂಲಕ ಖಾಸಗಿಯಾಗಿ ದಸರಾ ಆಚರಣೆ ಮಾಡಲಿದ್ದಾರೆ.
ಚಾಮುಂಡಿಬೆಟ್ಟದ ಸಂಪ್ರದಾಯದAತೆ ರಾಜ ಮನೆತನದವರು ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಿದ್ದಾರೆ.
ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಅಕ್ಟೋಬರ್ 5ರಂದು ಜೋಡಣೆಯಾದ ರತ್ನಖಚಿತ ಸಿಂಹಾಸನಕ್ಕೆ ಅಕ್ಟೋಬರ್ 11ರ ಬೆಳಗ್ಗೆ 6 ಗಂಟೆಯಿAದ 7:12 ನಿಮಿಷದ ನಡುವೆ ಸಿಂಹ ಜೋಡಣೆ ಮಾಡಲಾಗುತ್ತದೆ. ನಂತರ ರತ್ನಖಚಿತ ಪೀಠವು ಸಿಂಹಾಸನ ಸಿದ್ಧವಾಗುತ್ತದೆ. ಬಳಿಕ ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ 8:35ರಿಂದ 09:05ರ ನಡುವೆ ಕಂಕಣ ಧಾರಣೆ ಮಾಡಿ, ಬಳಿಕ ರಾಜಪೋಷಾಕಿನಲ್ಲಿ ರಾಜಪರಂಪರೆಯ ಧಾರ್ಮಿಕ ಕಾರ್ಯಕ್ರಮಗಳನ್ನು ದರ್ಬಾರ್ ಹಾಲ್?ನಲ್ಲಿ ನಡೆಸಲಿದ್ದಾರೆ. ಬಳಿಕ 11:45 ರಿಂದ 12:05ರ ಶುಭ ಲಗ್ನದಲ್ಲಿ ಸಿಂಹಾಸನಾರೋಹಣ ಮಾಡಿ, ನಂತರ ಎಲ್ಲಾ ದೇವಾಲಯಗಳಿಂದ ಬಂದ ತೀರ್ಥ ಪ್ರಸಾದಗಳನ್ನು ಪಡೆದು, 1:40 ರಿಂದ 02:05ರ ವರೆಗೆ ಚಾಮುಂಡಿ ತಾಯಿಯನ್ನು ಚಾಮುಂಡೇಶ್ವರಿ ತೊಟ್ಟಿಯಿಂದ ಕನಕ ತೊಟ್ಟಿಗೆ ತಂದು ನವರಾತ್ರಿಯ ವಿಜಯದಶಮಿಯವರೆಗೆ ಪೂಜೆ ಮಾಡಲಾಗುತ್ತದೆ.
ಪ್ರತಿನಿತ್ಯ ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಆನೆ ಹಾಗೂ ರಾಜಮನೆತನದ ಹೆಣ್ಣು ಆನೆಗಳನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಆನೆ ಬಾಗಿಲಿನ ಮೂಲಕ ಕಲ್ಯಾಣ ತೊಟ್ಟಿಗೆ ತಂದು, ಪೂಜೆ ಮಾಡಲಾಗುವುದು. ಅದೇ ರೀತಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಜವಂಶಸ್ಥರಿAದ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಹಾಗೂ ಖಾಸಗಿ ದರ್ಬಾರ್ ನಡೆಯಲಿದೆ.
ಇದಾದ ನಂತರ ನವರಾತ್ರಿಯ ಅ. 16ರಂದು ಸರಸ್ವತಿ ಪೂಜೆ, ಅ. 17ರಂದು ಕಾಳರಾತ್ರಿ ಪೂಜೆ ಹಾಗೂ ಅ. 20ರಂದು ಆಯುಧಪೂಜೆ ಹಾಗೂ 21ರಂದು ವಿಜಯದಶಮಿ ನಡೆಯಲಿದೆ. ವಿಜಯದಶಮಿ ದಿನದಂದು ರಾಜವಂಶಸ್ಥರ ಖಾಸಗಿ ದಸರಾ ಮುಕ್ತಾಯವಾಗಲಿದೆ.
ಅರಮನೆ ಪ್ರವೇಶ ನಿರ್ಬಂಧ: ರಾಜಮನೆತನದವರ ದಸರಾ ಆಚರಣೆ ಹಿನ್ನೆಲೆಯಲ್ಲಿ, ಈಗಾಗಲೇ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿರ್ದಿಷ್ಟ ದಿನಾಂಕಗಳAದು ಮೈಸೂರು ಅರಮನೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಖಾಸಗಿ ದರ್ಬಾರ್ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ಮತ್ತು ಅ.20ರಂದು ಕಲ್ಯಾಣ ಮಂಟಪದಲ್ಲಿ ಮಹಾನವಮಿ ಹಾಗೂ ಆಯುಧ ಪೂಜೆ ನಡೆಯುವುದರಿಂದ ಸಂಪೂರ್ಣ ದಿನ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅ.21ರಂದು ವಿಜಯದಶಮಿ ಹಬ್ಬದ ಪ್ರಯುಕ್ತ ಸಂಪೂರ್ಣ ದಿನ ಸಾರ್ವಜನಿಕರ ಸಾಮಾನ್ಯ ಪ್ರವೇಶವಿರುವುದಿಲ್ಲ. ಕೇವಲ ದಸರಾ ಪಾಸ್ ಹಾಗೂ ಜಂಬೂಸವಾರಿ ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶವಿರಲಿದೆ.
ಮೈಸೂರು ಅರಮನೆಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕ ರದ್ದು: ನಾಡಹಬ್ಬ ದಸರಾ ಮಹೋತ್ಸವ-2026ರ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ 7ರಿಂದ 8ರವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಅ. 5ರಿಂದಲೇ ನವೆಂಬರ್ 1ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.