Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾದ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಿದ ಚಿಗುರು ಕವಿಗಳು


ಮೈಸೂರು : ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 5 ನೇ ದಿನವಾದ ಗುರುವಾರ ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಚಿಗುರು ಕವಿಗೋಷ್ಠಿಯಲ್ಲಿ ಬಾಲಕರು, ಬಾಲಕಿಯರು ಕವಿತೆಗಳನ್ನು ವಾಚಿಸಿದರು.
ದಾವಣಗೆರೆಯ ಎ.ಟಿ.ಅದ್ವಿಕ ಕಾವ್ಯ “ಕನ್ನಡಕ್ಕೆ ನನ್ನ ಜೈಂಕಾರ” ಶಿರ್ಷಿಕೆಯಡಿ ಕವಿತೆ ವಾಚಿಸಿ ಕನ್ನಡಪ್ರೇಮ ಮೆರೆದರೆ, ಲಾವಣ್ಯ ಅವರು ‘ಮನುಷ್ಯ ಮತ್ತು ಯಂತ್ರ’ ಎಂಬ ಶಿರ್ಷೆಕಯಡಿ ಕವಿತೆ ವಾಚಿಸಿ ಯಂತ್ರವು ಮನುಷ್ಯರ ಉದ್ಯೋಗವಬ್ನು ಕಸಿದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಂಜನಗೂಡಿನ ಕೃತಿಕಾ ‘ನಮ್ಮ ಮೈಸೂರು ದಸರಾ’ ಕವುತೆ ವಾಚಿಸಿ ಸಾಂಸ್ಕöÈತಿಕ ನಗರಿ ಮೈಸೂರು ಹಾಗೂ ನಾಡಹಬ್ಬ ದಸರಾ ವೈಭವವನ್ನು ವರ್ಣಿಸಿದರು.
ಮೈಸೂರಿನ ಎಚ್.ದಕ್ಷ ‘ಅಂದಿನAತಿಹುದೆ ನಮ್ಮ ಮೈಸೂರು’ ಎಂಬ ಶೀರ್ಷಿಕೆಯಲ್ಲಿ ಅಂದಿನ ಮೈಸೂರಿಗೆ, ಇಂದಿನ ಮೈಸೂರನ್ನು ಹೋಲಿಕೆ ಮಾಡಿ ಬಣ್ಣಿಸಿದರು. ತಕ್ಷ ಚಾಣಕ್ಯ ರೇಬಾಂತ ಅವರು ಗಾಂಧಾರ ಕಲೆಯ ಮೂಲಕ ಕನ್ನಡ ಜೈಮಿನಿ ಭಾರತವನ್ನು ವಾಚಿಸಿದರು.
ಇದೇ ವೇಳೆ ವಿದೇಶದಲ್ಲಿ ನೆಲೆಸಿರುವ ಕನ್ನಡ ಕವಿಗಳು ವಿಡಿಯೋ ರೇಕಾರ್ಡಿಂಗ್ ಮೂಲಕ ಕವಿತೆ ವಾಚನ ಮಾಡಿದರು.
ಈ ವೇಳೆ ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಮಾತನಾಡಿ, ಅನ್ಯಾಯದ ವಿರುಧ್ದ ಧ್ವನಿ ಎತ್ತುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಕವಿಗಳು ಮಾಡುತ್ತಿದ್ದಾರೆ. ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಹಾಗೂ ಸಿದ್ದಲಿಂಗಯ್ಯ ಅವರು ಸ್ವಾಭಿಮಾನದಿಂದ ಕೂಡಿದ ಕವಿತೆಗಳ ರಚಿಸಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು.
ದಸರಾದಲ್ಲಿ ಎಲ್ಲಾ ರಂಗದ ಪ್ರತಿಭೆಯನ್ನು ಹೊರತರುವ ಕೆಲಸ ಮಾಡಲಾಗುತ್ತದೆ. ಕವಿಗೆ ಚಿಕ್ಕವರು, ದೊಡ್ಡವರು ಎಂಬ ಬೇದವಿಲ್ಲ. ಪ್ರತಿಯೊಬ್ಬರೂ ಪುಸ್ತಕವನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಗುರು ಕವಿಗೋಷ್ಠಿ ಉದ್ಘಾಟಿಸಿದ ಮಕ್ಕಳ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಕವಿತೆ ಬರೆಯುವುದು ಸುಳ್ಳಿನ ವಿರುದ್ಧ ಹೋರಾಟ ಮಾಡಿದಂತೆ. ಮನುಷ್ಯರನ್ನು ವಿಭಜನೆ ಮಾಡುತ್ತಿದ್ದ ಬಗ್ಗೆ ಪಂಪ, ಕುಮಾರವ್ಯಾಸ ಎಚ್ಚರಿಸಿದರು. ಪ್ರಭುತ್ವದ ಲೋಪವನ್ನು ಕಾವ್ಯ ಹೇಳುತ್ತದೆ. ಅದಕ್ಕೆ ಬಸವಣ್ಣ ಮತ್ತು ಕುವೆಂಪು ಅವರೆ ಸಾಕ್ಷಿ ಎಂದರು.
ಮನುಷ್ಯ ಸತ್ತರೆ ಮಣ್ಣಿಗೆ ಹೂಳಲಾಗುತ್ತದೆ. ಆದರೆ ಮಣ್ಣು ಸತ್ತರೆ ಎಲ್ಲಿಗೆ ಹೂಳುವುದು ಎಂದು ಪ್ರಶ್ನಿಸಿದ ಅವರು, ತಾರತಮ್ಯದ ಸಮಾಜದಲ್ಲಿ ಒಳ್ಳೆಯ ಕವಿತೆ ಹುಟ್ಟಲ್ಲ, ಹುಟ್ಟಿದರೂ ಅದು ವಿಷಪೂರಿತವಾಗಿರುತ್ತದೆ. ಸಾಹಿತಿಗಳು ಹೆಚ್ಚಾಗಿ ಸಾಹಿತಿಗಳು ಮಕ್ಕಳಿಗಾಗಿ ನಾಟಕ ಬರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲೇಖಕಿ ಡಾ.ಕವಿತಾ ಕುಸುಗಲ್ , ಚಿಗುರು ಅತಿಥಿ ಎನ್.ತಾನೀಶ್ , ದಸಾ ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಧ್ಯಕ್ಷ ಪ್ರೊ.ಎಂ.ನAಜಯ್ಯ ಹೊಂಗನೂರು, ಕಾರ್ಯದರ್ಶಿ ಎಂ.ಬಿ.ಆನAದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು