Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನ ಪರಂಪರೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಚಿತ್ರ ನಟ ಬಿ. ಸುರೇಶ್


ಮೈಸೂರು: ಮೈಸೂರು ಎಂದರೆ ಕೇವಲ ಅರಮನೆಗಳ ನಗರವಲ್ಲ, ಬದಲಿಗೆ ಪರಂಪರೆಯನ್ನು ತೆರೆದಿಡುವಂತಹ ಸುಂದರ ಊರು. ಸಾಂಪ್ರದಾಯಿಕ ಕಟ್ಟಡಗಳು ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಖ್ಯಾತ ನಟ ಹಾಗೂ ನಿರ್ದೇಶಕ ಬಿ. ಸುರೇಶ್ ಹೇಳಿದರು.
ಗುರುವಾರ ನಗರದ ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಲಾಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ಧ ದಸರಾ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ಭಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,
ಆರ್.ಕೆ. ನಾರಾಯಣ್, ಕುವೆಂಪು ಹಾಗೂ ತಾರಾಸು ಅವರಂತಹ ಹಿರಿಯ ಸಾಹಿತಿಗಳು ಮತ್ತು ಕಲಾವಿದರ ಮನೆಗಳನ್ನು ಹಾಗೂ ಪಾರಂಪರಿಕ ಕಟ್ಟಡಗಳನ್ನು ಜೆಸಿಬಿಗಳ ಕಣ್ಣು ಬೀಳದಂತೆ ಮತ್ತು ರಿಯಲ್ ಎಸ್ಟೇಟ್ ಕಣ್ಣು ಬೀಳದಂತೆ ಎಚ್ಚರಿಕೆ ವಹಿಸಬೇಕು. ಕೇವಲ ಪ್ರವಾಸೋದ್ಯಮವನ್ನು ಬೆಳೆಸುವುದು ಮಾತ್ರವಲ್ಲದೆ, ನಮ್ಮ ಪರಂಪರೆಯನ್ನು ಕಾಪಾಡುವುದು ಮುಖ್ಯ. ದಸರಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪಾರಂಪರಿಕ ನಡಿಗೆಯು ಕೇವಲ ಮೈಸೂರಿನ ಪರಂಪರೆ ಮಾತ್ರವಲ್ಲ, ಕರ್ನಾಟಕದ ಇತಿಹಾಸವನ್ನು ಬಿಚ್ಚಿಡುವ ದೊಡ್ಡ ಕೆಲಸವಾಗಬೇಕು ಎಂದು ಹೇಳಿದರು.
ಮೈಸೂರು ನಗರದಲ್ಲಿ ಸುಮಾರು 129 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇದ್ದು, ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಶೈಲಿಯನ್ನು ತಿಳಿದುಕೊಂಡು ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.ಕೇವಲ ದೊಡ್ಡ ಗಾತ್ರದ ಕಟ್ಟಡಗಳಷ್ಟೇ ಅಲ್ಲದೆ, ಪ್ರತಿಯೊಂದು ಕಟ್ಟಡದ ಹಿಂದೆ ಅದರದೇ ಆದ ಇತಿಹಾಸ, ಕಾಲಘಟ್ಟ ಮತ್ತು ಸಾಂಸ್ಕöÈತಿಕ ಹಿನ್ನೆಲೆ ಅಡಗಿದೆ. ನಮ್ಮ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪಾರAಪರಿಕ ಇಲಾಖೆಯ ಆಯುಕ್ತರಾದ ದೇವರಾಜು ಮಾತನಾಡಿ, ಮೈಸೂರಿನಲ್ಲಿ ಈಗಾಗಲೇ ಸುಮಾರು 129 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಕೆಲವು ಆಯ್ದ ಕಟ್ಟಡಗಳ ಬಗ್ಗೆ ಬ್ರೋಷರ್ ಮೂಲಕ ಮಾಹಿತಿ ನೀಡಲಾಗಿದೆ. ಎಂದರು.
ಕರ್ನಾಟಕ ರಾಜ್ಯ ವಿಶ್ವ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥ ಪಿಳೈ ಅಯ್ಯಂಗಾರ್ ಮಾತನಾಡಿ, ಚಾಲುಕ್ಯ, ಗುಪ್ತ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ಕಟ್ಟಡಗಳು ಇಂದಿಗೂ ಗಟ್ಟಿಯಾಗಿವೆ. ಆದರೆ ಸರಿಯಾದ ನಿರ್ವಹಣೆಯ ಕೊರತೆಯಿಂದ ಕೆಲವು ಐತಿಹಾಸಿಕ ಕಟ್ಟಡಗಳು ಕುಸಿದುಬೀಳುತ್ತಿದ್ದು, ನಿರ್ವಹಣೆಯ ಲೋಪವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮೈಸೂರಿನ ಸಿಲ್ವರ್ ಜುಬಿಲಿ ಕ್ಲಾಕ್ ಟವರ್, ಡಫರಿನ್ ಕ್ಲಾಕ್ ಟವರ್ ಹಾಗೂ ಮಾನಸಗಂಗೋತ್ರಿಯಲ್ಲಿರುವ ಮತ್ತೊಂದು ಗಡಿಯಾರ ಗೋಪುರವು ಮೈಸೂರಿನ ಐಡೆಂಟಿಟಿಯಾಗಿದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯ 25ನೇ ವರ್ಷದಲ್ಲಿ ಕಾರ್ಮಿಕರೇ ಸ್ವಂತ ಹಣದಿಂದ ನಿರ್ಮಿಸಿದ ಸಿಲ್ವರ್ ಜುಬಿಲಿ ಗಡಿಯಾರ ಗೋಪುರವು ಅತ್ಯುತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ನಮ್ಮ ಹೆರಿಟೇಜ್ ಕಟ್ಟಡಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಮನೆಮನೆಯಲ್ಲಿ ಬೊಂಬೆ ಪ್ರದರ್ಶನ ಹಾಗೂ ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್ ಫೋಟೋ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು . ಬೊಂಬೆ ಪ್ರದರ್ಶನ ಸ್ಪರ್ಧೆಯಲ್ಲಿ ಗಜಲಕ್ಷಿ÷್ಮ ನಾಗರಾಜ್ ಪ್ರಥಮ ಬಹುಮಾನ, ಗೀತಾ ಶ್ರೀಹರಿ ದ್ವಿತೀಯ ಬಹುಮಾನ ಮತ್ತು ಸರಸ್ವತಿ ಕಿರಣ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಹಾಗೆಯೇ, ಸೆಲ್ಫಿ ಸ್ಪರ್ಧೆಯಲ್ಲಿ ಮೀನಾ ಕೃಷ್ಣ ಕುಮಾರ್ ಪ್ರಥಮ ಬಹುಮಾನ, ಅನುದಿತ ದ್ವಿತೀಯ ಬಹುಮಾನ ಮತ್ತು ಪುರುಷೋತ್ತಮ್ ಚಕ್ರವರ್ತಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಸಿ ಎನ್ ಮಂಜುಳಾ, ಪುರಾತತ್ವ ಸಂರಕ್ಷಣಾ ಇಂಜಿನಿಯರ್‌ಗಳಾದ ಟಿ ತಾರಕೇಶ್ ಕೆ.ಪಿ ಗುರುಮಲ್ಲಪ್ಪ, ನಿವೃತ್ತ ಪ್ರಾಧ್ಯಾಪಕ ರಂಗರಾಜು, ಉಪನ್ಯಾಸಕ ಲ.ನ ಸ್ವಾಮಿ ಹಾಗೂ ಟೆರಿಷಿಯನ್ ಜೆಎಸ್‌ಎಸ್ ಮಹಿಳಾ ಕಾಲೇಜು, ಮಹಾಜನ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.