Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

3,473 ಡ್ರೋನ್‌ಗಳಿಂದ ಆಗಸದಲ್ಲಿ ಅರಳಿನಿಂತ ನವಿಲು ಪಕ್ಷಿಯ ವಿನ್ಯಾಸಕ್ಕೆ ಗಿನ್ನಿಸ್ ದಾಖಲೆಯ ಗರಿ


*ಎರಡನೇ ದಿನವೂ ಜನಮನಗೆದ್ದ ಡ್ರೋಣ್ ಪ್ರದರ್ಶನ
ಮೈಸೂರು; ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ಭಾನುವಾರ ನಡೆಸಿದ ಡ್ರೋನ್ ಪ್ರದರ್ಶನ ಮತ್ತೊಮ್ಮೆ ಜಾಗತಿಕ ದಾಖಲೆ ನಿರ್ಮಿಸುವ ಮೂಲಕ ಗಮನ ಸೆಳೆದಿದೆ. ಕಳೆದ ವರ್ಷ ಡ್ರೋನ್‌ಗಳ ಮೂಲಕ ಹುಲಿಯ ಚಿತ್ರವನ್ನು ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದ ಸೆಸ್ಕ್, ಈ ಬಾರಿ 3,473 ಡ್ರೋನ್‌ಗಳ ಮೂಲಕ ಪಕ್ಷಿ(ನವಿಲು)ಯ ವಿನ್ಯಾಸ ಮೂಡಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆಯ ಗರಿಯನ್ನು ತನ್ನ ಮುಕುಟಕ್ಕೆ ಸೇರಿಸಿಕೊಂಡಿದೆ.
ಸೆಸ್ಕ್ಗೆ ಮತ್ತೊಂದು ದಾಖಲೆಯ ಗರಿ:
2025ರ ದಸರಾ ಅಂಗವಾಗಿ ನಡೆದ ಸೆಸ್ಕ್ನಿಂದ ನಡೆಸಲಾದ ಡ್ರೋನ್ ಪ್ರದರ್ಶನದಲ್ಲಿ ಹುಲಿಯ ಚಿತ್ರದ ವಿನ್ಯಾಸಕ್ಕೆ ಸೆಸ್ಕ್ ಗಿನ್ನಿಸ್ ದಾಖಲೆಯ ಹಿರಿಮೆ ಪಡೆದಿತ್ತು. ಒಟ್ಟು 2983 ಡ್ರೋನ್‌ಗಳನ್ನು ಬಳಸಿಕೊಂಡು, ರಾಷ್ಟಿçÃಯ ಪ್ರಾಣಿ ಹುಲಿಯ ವಿನ್ಯಾಸವನ್ನು ಆಗಸದಲ್ಲಿ ರಚಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಅದಕ್ಕಿಂತಲೂ ವಿಭಿನ್ನವಾದ ವಿನ್ಯಾಸದ ಮೂಲಕ ಮತ್ತೊಂದು ದಾಖಲೆಗೆ ಸೆಸ್ಕ್ ಪಾತ್ರವಾಗಿದೆ.
ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಡ್ರೋನ್ ಪ್ರದರ್ಶನದಲ್ಲಿ ಈ ನೂತನ ಸಾಧನೆ ದಾಖಲಾಗಿದೆ. ಸಾವಿರಾರು ಡ್ರೋನ್‌ಗಳು ಏಕಕಾಲದಲ್ಲಿ ಆಕಾಶದಲ್ಲಿ ವಿವಿಧ ಬಣ್ಣಗಳ ಬೆಳಕಿನೊಂದಿಗೆ ಸಂಯೋಜನೆಗೊAಡು ರಾಷ್ಟಿçÃಯ ಪಕ್ಷಿ ನವಿಲಿನ ವಿನ್ಯಾಸವನ್ನು ರಚಿಸಿದ್ದು, ಇಡೀ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಒಟ್ಟು 12 ವಿನ್ಯಾಸಗಳಲ್ಲಿ 3,473 ಡ್ರೋನ್‌ಗಳ ಮೂಲಕ ರಚಿಸಲಾದ ನವಿಲಿನ ವಿನ್ಯಾಸ, ಅತಿ ಹೆಚ್ಚು ಡ್ರೋನ್‌ಗಳನ್ನು ಬಳಸಿಕೊಂಡು ರಚಿಸಲಾದ ಪಕ್ಷಿಯ ವಿನ್ಯಾಸವೆಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್ ದಾಖಲೆಯ ಪುಟಸೇರಿತು.
ಡ್ರೋನ್ ಪ್ರದರ್ಶನದ ನಂತರದ ಲಂಡನ್‌ನಿAದ ಆಗಮಿಸಿದ್ದ ಗಿನ್ನಿಸ್ ಬುಕ್ ಆಫ್ ವರ್ಲ್್ಡ ರೆಕಾರ್ಡ್ ತಂಡದ ಸದಸ್ಯರು, ಸೆಸ್ಕ್ ವತಿಯಿಂದ ನಿರ್ಮಿಸಲಾದ ನೂತನ ಗಿನ್ನಿಸ್ ದಾಖಲೆಯನ್ನು ಅಧಿಕೃತವಾಗಿ ಘೋಷಿಸುವುದರೊಂದಿಗೆ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್ ಹಾಗೂ ಇತರೆ ಅಧಿಕಾರಿಗಳಿಗೆ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರವನ್ನು ವಿತರಿಸಿದರು.
ಮತ್ತೆ ಜನಮನ ಸೋರೆಗೊಂಡ ಡ್ರೋಣ್ ಶೋ:
ಎರಡನೇ ದಿನದಂದು ನಡೆದ ಡ್ರೋಣ್ ಪ್ರದರ್ಶನವೂ ಪ್ರೇಕ್ಷಕರನ್ನು ರಂಜಿಸಿತು. ಕಿಕ್ಕಿರಿದ್ದು ತುಂಬಿದ್ದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪ್ರದರ್ಶನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಕಾಶದಲ್ಲಿ ಮೂಡಿಬಂದ ಬಣ್ಣಬಣ್ಣದ ಡ್ರೋನ್‌ಗಳ ಬೆಳಕಿನ ಚಿತ್ತಾರಗಳು ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸಿತು.
ಇದನ್ನೂ ಮುನ್ನ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಮಣಿಕಾಂತ್ ಖದ್ರಿ, ಅನುರಾಧ ಭಟ್, ಬಾಲಿವುಡ್ ಗಾಯಕಿ ಹಂಸಿಕಾ ಅಯ್ಯರ್ ಅವರುಗಳ ತಮ್ಮ ಮನಮೋಹಕ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ಈ ಸಮಾರಂಭದಲ್ಲಿ ಶಾಸಕ ಡಿ. ರವಿಶಂಕರ್, ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಸೇರಿದಂತೆ ಸೆಸ್ಕ್ ಹಾಗೂ ಮುಡಾ ಅಧಿಕಾರಿಗಳು ಹಾಜರಿದ್ದರು.