
*ಸಿಎಂ,ಡಿಸಿಎ0,ಉಸ್ತುವಾರಿ ಸಚಿವರು,ರಾಜವಂಶಸ್ಥ ಯದುವೀರ್ರಿಂದ ಪುಷ್ಪಾರ್ಚನೆ
*ನೆರೆಯ ಕೇರಳ,ತೆಲಂಗಾಣ ಸಿಎಂ ಕೂಡ ಜಂಬೂಸವಾರಿಯಲ್ಲಿ ಭಾಗಿ
*ವಿವಿಧ ದೇಶಗಳ ರಾಯಭಾರಿಗಳ ಆಗಮನ
*ಜನರ ಕಣ್ಮುಂದೆ ಹಾದು ಹೋಗಲಿರುವ ಪರಂಪರೆ ಸಾರುವ ಸ್ತಬ್ದಚಿತ್ರಗಳು,ಜಾನಪದ ಕಲಾತಂಡಗಳು
ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಐತಿಹಾಸಿಕ ಪ್ರಸಿದ್ಧ ಜಂಬೂಸವಾರಿ ಮೆರವಣಿಗೆ ನಾಡಿನ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಹೊತ್ತು ವೈಭವದಿಂದ ಜರುಗಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಅ.21ರಂದು ಮಧ್ಯಾಹ್ನ 1.36ರಿಂದ 1.56 ರವರೆಗೆ ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅಂಬಾ ವಿಲಾಸ ಅರಮನೆ ಬಲರಾಮ ದ್ವಾರದಲ್ಲಿ ಸಚಿವ ಸಂಪುಟದ ಸಹದ್ಯೊಗಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನಂದಿದ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಜಯದಶಮಿ ಮೆರವಣಿಗೆಗೆ ನಾಂದಿ ಹಾಡುವರು. ಸಂಜೆ 4.10ರಿಂದ ರಿಂದ 4.35 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಕ್ಯಾಪ್ಟನ್ ಪ್ರಶಾಂತ ತನ್ನ ಬೆನ್ನ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಶ್ರೀಚಾಮುಂಡೇಶ್ವರಿಯನ್ನು ವೇದಿಕೆಯ ಬಳಿ ಹೊತ್ತುಕೊಂಡು ಬಂದು ನಿಲ್ಲುತ್ತಿದ್ದಂತೆ, ಚಿನ್ನದ ಅಂಬಾರಿಯಲ್ಲಿರುವ ದೇವಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ವೇದಿಕೆಯಲ್ಲಿ ಎಂಟು ಮಂದಿಗೆ ಅವಕಾಶ: ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಎಂಟು ಮಂದಿ ಗಣ್ಯರಿಗೆ ಮಾತ್ರ ವೇದಿಕೆಯಲ್ಲಿರುವ ಅವಕಾಶವಿದೆ. ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಹೈಕೋರ್ಟ್ ನ್ಯಾಯಮೂರ್ತಿ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ರಾಜವಂಶಸ್ಥ ಯದುವೀರ್ಕೃಷ್ಣದತ್ತ ಚಾವರಾಜಒಡೆಯರ್ ಅವರಿಗೆ ವೇದಿಕೆ ಏರಲು ಮಾತ್ರ ಅವಕಾಶ ನೀಡಲಾಗುತ್ತದೆ. ಉಳಿದಂತೆ ಬೇರೆ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಬೇರೆಯವರು ವೇದಿಕೆ ಏರದಂತೆನೋಡಿಕೊಳ್ಳಲು ಸಂಬAಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.
ಈ ಬಾರಿ ವಿದೇಶಿ ರಾಯಭಾರಿಗಳು, ಕೇರಳ,ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು, ಚಲನಚಿತ್ರನಟ-ನಟಿಯರು, ರಕ್ಷಣಾ ಪಡೆಯ ಮೂರು ತುಕಡಿಗಳ ಕಮಾಂಡರ್ಗಳು,ಸಚಿವ ಸಂಪುಟದ ಬಹುತೇಕ ಸಚಿವರು ಜಂಬೂ ಸವಾರಿ ವೀಕ್ಷಣೆಯಲ್ಲಿ ಭಾಗಿಯಾಗಲಿದ್ದಾರೆ.
ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕರೆತಂದಿರುವ ಅಭಿಮನ್ಯು ನಿಶಾನೆ ಆನೆಯಾಗಿ ಜಂಬೂಸವಾರಿಗೆ ದಾರಿ ತೋರಿಸಿಕೊಂಡು ಹೋಗಲಿದ್ದಾನೆ. ಮೆರವಣಿಗೆಯಲ್ಲಿ ವಿಭಾಗವಾರು ಆಯ್ದ 15 ಜಿಲ್ಲೆಗಳ ಜಿಪಂ,ರಾಜ್ಯಮಟ್ಟದವಿವಿಧಇಲಾಖೆಗಳು,ನಿಗಮ ಮಂಡಳಿಗಳು, ಕೇಂದ್ರಸರ್ಕಾರಿ ಸ್ವಾಮ್ಯ, ಭೂಸೇನಾ,ವಾಯುಸೇನಾ,ನೌಕಾಸೇನೆಯ ಸ್ತಬ್ಧಚಿತ್ರಉಪಸಮಿತಿ ಸೇರಿ 35ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಹೆಸರಾಂತ ಕಲಾತಂಡಗಳು ಸೇರಿಒಟ್ಟು ನೂರಕ್ಕೂ ಜಾನಪದತಂಡಗಳು ಭಾಗವಹಿಸಲಿವೆ. ಇದರೊಂದಿಗೆ ಇತರ ಗಜಪಡೆ, ಅಶ್ವರೋಹಿಪಡೆಗಳು,ಆನೆಗಾಡಿಗಳು ಪಾಲ್ಗೊಳ್ಳಲಿವೆ. ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ ಹಾಕಲಾಗಿದ್ದರೆ, ಗೋಲ್ಡ್ಕಾರ್ಡು, ವಿವಿಐಪಿ,ವಿಐಪಿ ಪಾಸ್ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶತಡೆಯಲು ವಿಶೇಷ ಪೊಲೀಸ್ತುಕಡಿ ನಿಯೋಜಿಸಲಾಗುತ್ತದೆ. ಇದಲ್ಲದೆ ಅರಮನೆಯಲ್ಲಿ ಭದ್ರತಾದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿದೆ.
ರಾತ್ರಿ 7ಕ್ಕೆ ಪಂಜಿನಕವಾಯಿತು:ಮೆರವಣಿಗೆ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಆರು ಗಂಟೆ ಬದಲಿಗೆ 7ಗಂಟೆಗೆ ಬನ್ನಿಮಂಪಟದ ಮೈದಾನದಲ್ಲಿ ಪಂಜಿನಕವಾಯಿತು(ಟಾರ್ಚ್ಲೈಟ್ ಪೆರೇಡ್) ಆರಂಭವಾಗಲಿದೆ. ರಾಜ್ಯದ ನೂತನ ರಾಜ್ಯಪಾಲರಾದ ಸುಧಾರಾವ್ ಕವಾಯಿತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಸಿಎಂ,ಉಪಮುಖ್ಯಮAತ್ರಿ ಸೇರಿದಂತೆ ಗಣ್ಯರು ಉಪಸ್ಥಿತರಿರುತ್ತಾರೆ. ಬಳಿಕ ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ನಡೆಯುವ ಪೊಲೀಸರಿಂದ ನಡೆಯುವ ಸಾಹಸಮಯ,ರೋವಾಂಚನಕಾರಿ ಬೈಕ್ ಸ್ಟಂಟ್ ಸಾಹಸ ಪ್ರದರ್ಶನ, ಅಶ್ವಾರೋಹಿ ಪಡೆಗಳ ಸಾಹಸ ಚಮತ್ಕಾರ, ಕೊನೆಯಲ್ಲಿ ಡ್ರೋಣ್ ಶೋ ನಡೆಯುವ ಮೂಲಕ 11 ದಿನಗಳ ಕಾಲದ ನಾಡಹಬ್ಬಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.
ಲಕ್ಷಾಂತರಜನರ ಆಗಮನ: ಜಂಬೂಸವಾರಿ ವೀಕ್ಷಣೆಗೆಂದು ದೇಶ –ವಿದೇಶಗಳಿಂದ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ.
ನಗರದ್ಯಾಂತ ಬಿಗಿ ಪೊಲೀಸ್ ಬಂದೋ ಬಸ್ತ್ ; ಜಂಬೂಸವಾರಿ ಹಿನ್ನಲೆಯಲ್ಲಿ ನಗರದ್ಯಾಂತ ಬಿಗಿಚಿiÀiÁದ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಬಾಂಬ್ ಪತ್ತೆ ದಳ, ನಿಷ್ಕಿçÃಯ ದಳ, ಶ್ವಾನ ದಳ, ಕ್ಷೀಪ್ರ ಕಾರ್ಯಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ಹೊರ ಜಿಲ್ಲೆ, ರಾಜ್ಯದಿಂದ ಬರುವ ಕುಖ್ಯಾತ ಕಳ್ಳರು, ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. 34 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ.