
ಮೈಸೂರು; ನನ್ನ ವಿರುದ್ದ ಪಿತೂರಿ ನಡೆಸಲಾಗಿದೆ. ಅದರ ಭಾಗವೇ ಸ್ಟಿಂಗ್ ಅಪರೇಷನ್ ಪ್ರಕರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ವ್ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಯವರೊAದಿಗೆ ಕೆಲಕಾಲ ಕುಶಲೋಪರಿ ಮಾತುಕತೆ ನಡೆಸಿ, ಉಪಹಾರವನ್ನು ಸೇವಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸೆ. 26ರಂದು ಪ್ರಕರಣ ನನ್ನ ಗಮನಕ್ಕೆ ಬಂದಿತು. ಆ ವೇಳೆಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿತ್ತು.ಅದು ಸುಳ್ಳು ಕೇಸ್, ಬ್ಲಾಕ್ಮೇಲ್ಗೆ ಮಾಡಿರುವಂಥದು. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲೆಂದು. ಇದು ಸುಳ್ಳು ಕೇಸ್ ಎಂಬುದು ತಿಳಿಯಬೇಕು, ಸತ್ಯ ಹೊರಬರಬೇಕೆಂದು ನಾನೇ ಪೊಲೀಸರಿಗೆ ದೂರು ನೀಡಿದ್ದೇನೆ. ಸುಳ್ಳು ಪ್ರಕರಣದ ಬಗ್ಗೆ ಹೆಚ್ಚು ಪ್ರಚಾರ ಆಗದಿರಲೆಂದು ಸಿವಿಲ್ ಕೋರ್ಟ್ಗೆ ಹೋಗಿ ನಿರ್ಬಂಧಕಾಜ್ಞೆ ತಂದಿದ್ದೇನೆ’ ಎಂದು ತಿಳಿಸಿದರು.
‘ನಾನು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದೆ, ಆಗ ಇಂಥದ್ಯಾವುದೂ ನಡೆದಿಲ್ಲ. ಈಗ ಮಾಡುತ್ತಿದ್ದಾರೆ. ಇದೆಲ್ಲವೂ ಜನರಿಗೆ ಗೊತ್ತಾಗಲೆಂದೇ ಪೊಲೀಸರಿಗೆ ನಾನು ದೂರು ಕೊಟ್ಟೆ’. ‘ಕೃಪಾ ಆಳ್ವಾ ಅಂತ ಮಂಗಳೂರಿನವರು, ರಾಕೇಶ್ ಶೆಟ್ಟಿ ಎಂಬಾತ ಪವರ್ ಟಿವಿಯವನು. ಇವರಿಬ್ಬರೂ ಸೇರಿ ಸ್ಟಿಂಗ್ ಮಾಡಿದ್ದಾರೆ. ಆದರೆ, ಅದರಲ್ಲಿ ಸತ್ಯಾಂಶ ಇಲ್ಲ. ಸ್ಟಿಂಗ್ ನಾನೇ ಮಾಡಿದ್ದೆಂದು ರಾಕೇಶ್ ಶೆಟ್ಟಿಯೇ ಒಪ್ಪಿಕೊಂಡಿದ್ದಾರಲ್ಲಾ. ಆ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನನ್ನ ಪರ ಇರುವುದು ಯಾರಿಗೆ ಬೇಕು? ಯಾರೂ ನನ್ನ ಪರ ಇರಬೇಕಾದ ಅಗತ್ಯವಿಲ್ಲ. ಜನರು ಹಾಗೂ ಇಡೀ ರಾಜ್ಯಕ್ಕೆ ಇದು ಸುಳ್ಳು ಕೇಸ್ ಎಂಬ ಸತ್ಯ ಗೊತ್ತಾಗಬೇಕಷ್ಟೆ. ನನ್ನ ಮೇಲೆ ಕಪುö್ಪಚುಕ್ಕೆ ತರಲು ಪ್ರಯತ್ನಿಸಿದರೂ ಜನರು ನಂಬುವುದಿಲ್ಲ. ತನಿಖೆ ನಡೆಯುತ್ತಿರುವ ಬಗ್ಗೆ ವಿಶ್ವಾಸವಿದೆ. ನ್ಯಾಯಸಮ್ಮತವಾಗಿ ತನಿಖೆ ನಡೆಯಲೆಂದು ಒತ್ತಾಯಿಸುತ್ತೇನಷ್ಟೆ. ಇದಕ್ಕಾಗಿ ಎಸ್ಐಟಿ ರಚಿಸುವುದು ಬೇಕಾಗಿಲ್ಲ’ ಎಂದರು.
ಏನೂ ನಡೆದೇ ಇಲ್ಲದಿರುವಾಗ ಯಾಕೇ ಬೇಸರವಾಗುತ್ತದೆ? ಸತ್ಯ ನನಗೆ ಗೊತ್ತಿದೆಯಲ್ಲ? ಸಂಪೂರ್ಣವಾದ ಸುಳ್ಳು ಕೇಸ್ ಇದು. ಅಧಿಕಾರ ಹೋದ ಮೇಲೆ ನನ್ನ ವಿರುದ್ಧ ಪಿತೂರಿಗೆ ಯತ್ನಿಸಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ’ ಎಂದು ನುಡಿದರು.
ಈ ಬಾರಿ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಉಸ್ತುವಾರಿಗೆ ಒಂದೇ ದಿನ ಮೂವರು ಮೇಲುಸ್ತುವಾರಿ ನೇಮಿಸುವ ಅಗತ್ಯ ಇರಲಿಲ್ಲ. ಮೇಲುಸ್ತುವಾರಿ ವಹಿಸಿದ ಯಾರೂ ಕೂಡ ಮೈಸೂರು ದಸಾರಗೆ ಬರಲಿಲ್ಲ. ಆದರೂ ಸರ್ಕಾರದ ಮೇಲುಸ್ತುವಾರಿಯನ್ನು ನೇಮಿಸಿತು. ಯಾಕೆ ನೇಮಿಸದರು ಅನ್ನೋದು ಗೊತ್ತಿಲ್ಲ. ಇದು ನನ್ನ ಸರ್ಕಾರ ಅಲ್ಲ, ಬೇರೆ ಸರ್ಕಾರ. ಇವೆಲ್ಲಾ ಮುಖ್ಯಮಂತ್ರಿಗಳ ನಿರ್ಧಾರ ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.