
ಕೆ.ಆರ್.ನಗರ; ಜಿ.ಪಂ.,ತಾ.ಪA.ಚುನಾವಣೆಯ ಟಿಕೆಟ್ನ್ನು ನೀಡುವ ವಿಚಾರದಲ್ಲಿ ಯಾರಿಗೂ ಭರವಸೆ ನೀಡಿಲ್ಲ. ಹಾಗಾಗಿ ಯಾರೂ ಕೂಡ ಗೊಂದಲಕ್ಕೀಡಾಗದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಎಂಸಿಡಿಸಿಸಿ ಬ್ಯಾಂಕ್ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂತಿಮವಾಗಿ ಚುನಾವಣೆ ಘೋಷಣೆಯಾದ ನಂತರ ಆಕಾಂಕ್ಷಿಗಳು ಅಭ್ಯರ್ಥಿಗಳಾಗ ಬಯಸುವವರು ಪಕ್ಷಕ್ಕೆ ಅರ್ಜಿ ಸಲ್ಲಿಸಿದನಂತರ ಸಮಿತಿ ಸಾಧಕಬಾಧಕಗಳನ್ನು ಚರ್ಚಿಸಿ ಯಾರು ಗೆಲ್ಲತ್ತಾರೋ, ಪಕ್ಷಕ್ಕೆ ಯಾರು ದುಡಿದಿದ್ಧಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ನಿರ್ಣಯಿಸಿಲಾಗುವುದು ಎಂದರು.
ಪಕ್ಷಕ್ಕೆ ಗೆಲುವು ಪ್ರಮುಖ ಮಾನದಂಡವಾಗಿದ್ದು ಯಾರಲ್ಲೂ ಗೊಂದಲಬೇಡ ಮುಂದಿನ ದಿನಗಳಲ್ಲಿ ತಾ.ಪಂ.,ಜಿ.ಪA.ಯೊAದಿಗೆ ಪುರಸಭೆ,ಗ್ರಾ.ಪಂ.ಯ ಚುನಾವಣೆಗಳ ನಂತರ ವಿಧಾನಸಭೆ, ಲೋಕಸಭೆ ಚುನಾವಣೆಗಳು ಬರುವುದರಿಂದ ಎಲ್ಲರೂ ಪಕ್ಷಕ್ಕಾಗಿ ದುಡಿಯಿರಿ ಪಕ್ಷ ಇದ್ದರೆ ಇಂದಲ್ಲನಾಳೆ ಅಧಿಕಾರ ಸಿಕ್ಕೆಸಿಗುತ್ತದೆ ಎಂಬುದು ಎಲ್ಲರ ಮನಸ್ಸಿನಲ್ಲಿರಲಿ ಎಂದು ಹೇಳಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೇಸ್ ಅಧ್ಯಕ್ಷ ಬೀರಿಹುಂಡಿಬಸವಣ್ಣ ಮಾತನಾಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಹಾಗೂ ಜಿಲ್ಲಾಸಮಿತಿಯ ಆಯ್ಕೆಗೆ ನಿಮ್ಮೆಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದ್ದು ನೀವು ನೀಡಿದ ಅಭಿಪ್ರಾಯವನ್ನು ಗೌಪ್ಯವಾಗಿಟ್ಟು ಅದನ್ನು ಕೆಪಿಸಿಸಿ ಸಮಿತಿಗೆ ಸಲ್ಲಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಕೇAದ್ರ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ದೇಶದ ಸ್ಥಿತಿ ಅಧೋಗತಿಗೆ ಹೋಗಿದ್ದು ಜನತೆ ನೆಮ್ಮದಿಯ ಬದುಕು ಕಾಣಬೇಕೆಂದರೆ ಕಾಂಗ್ರೇಸ್ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ ಅವರು, ಇದಕ್ಕಾಗಿ ತಳಮಟ್ಟದಿಂದಲೆ ಪಕ್ಷವನ್ನು ಸಂಘಟಿಸುವ ಕೆಲಸ ಆಗಬೇಕು, ಇಂದಿನಿAದಲೆ ಎಲ್ಲರೂ ಪಕ್ಷಸಂಘಟನೆಯಲ್ಲಿ ತೊಡಗಿಸಿಕೊಂಡು ಹೋರಾಟ ಮಾಡುವಂತೆ ಕಿವಿಮಾತು ಹೇಳಿದ ಅವರು, ಮುಂದಿನ 2028ಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರ ಹಿಡಿಯಲು, 2029ಕ್ಕೆ ಕೇಂದ್ರದಲ್ಲಿ ಕಾಂಗ್ರೇಸ್ನ ರಾಹುಲ್ಗಾಂಧಿ ಪ್ರಧಾನಿಯಾಗಬೇಕೆಂದರೆ ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಮಾಡಬೇಕೆAದರು.
ಮಾಜಿಸAಸದ ಮುದ್ದುಹನಮೇಗೌಡ, ಪ್ರಧಾನಕಾರ್ಯದರ್ಶಿ ಹೆಚ್.ಸಿ.ಬಸವರಾಜು, ಬ್ಲಾಕ್ ಕಾಂಗ್ರೇಸ್ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ ಮತ್ತಿತರರು ಮಾತನಾಡಿದರು. ಕಾಂಗ್ರೇಸ್ವಕ್ತಾರ ಸೈಯ್ಯದ್ಜಾಬೀರ್, ಜಿಲ್ಲಾ ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಸಿದ್ದರಾಜು, ಯುವಘಟಕದ ಅಧ್ಯಕ್ಷ ಚಂದನ್, ಡಿಸಿಸಿ ಪ್ರಧಾನಕಾರ್ಯದರ್ಶಿ ಬಸವರಾಜನಾಯಕ, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ರಾ.ರಾಘವೇಂದ್ರಸ್ವಾಮಿ, ತ್ಯಾಗರಾಜ್, ಲತಾಕುಮಾರಿ, ತಿಮ್ಮಶೆಟ್ಟಿ ಸೇರಿದಂತೆ ತಾಲೂಕಿನ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪೋಟೋ-1-ಕೆ.ಆರ್.ನಗರ ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾಧ್ಯಕ್ಷ ಬೀರಿಹುಂಡಿಬಸವಣ್ಣ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಉಸ್ತುವಾರಿ ಮುದ್ದುಹನುಮೇಗೌಡ ಮತ್ತು ಮುಖಂಡರು ಉದ್ಘಾಟಿಸಿದರು.