Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನ ಸಾಹಿತ್ಯ ಓದುಗರು ತಂಡದ ಮೂರನೇ ವರ್ಷದ ವಾರ್ಷಿಕೋತ್ಸವ

ಮೈಸೂರು; ಸಾಹಿತ್ಯ ಪ್ರೇಮಿಗಳು ತಿಂಗಳಿಗೊಮ್ಮೆ ಮೈಸೂರಿನ ಚೆಲುವಾಂಬ ಪಾರ್ಕಿನಲ್ಲಿ ಒಂದೆಡೆ ಸೇರುತ್ತಾರೆ. ಅಂತಹ ಸಾಹಿತ್ಯ ಪ್ರೇಮಿಗಳ ತಂಡದ ಮೂರನೇ ವಾರ್ಷಿಕೋತ್ಸವ ಇದು ನಗರದ ರೋಟರಿ ಭವನದಲ್ಲಿ ನಡೆಯಿತು. ವಿಜ್ಞಾನಿಗಳಾದ ಪ್ರಸನ್ನ ಸಂತೇಕಡೂರು, ಹಿರಿಯ ಕಥೆಗಾರ್ತಿ ಉಷಾ ನರಸಿಂಹನ್, ಕಥೆಗಾರರಾದ ಮಂಜುನಾಥ್ ಕುಣಿಗಲ್ ಹಾಗೂ ಸಂತೋಷ್ ತಾಮ್ರಪರ್ಣಿ ಅನುವಾದಕರಾದ ರವಿ ಬಳೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಚಾಲಕರಾದ ಕಿರಣ್ ಮಾತನಾಡಿದರು. ದೀಪು , ಗಿರೀಶ್, ಮೈಸೂರಿನ ಸಾಹಿತ್ಯ ಓದುಗರು ತಂಡದ ಎಲ್ಲಾ ಓದುಗರು ಉಪಸ್ಥಿತರಿದ್ದರು.

Read More

ಮಹಿಳೆಯರ ಸ್ವಾವಲಂಬಿ ಬದುಕಿಗೆ ಏಕಲ್ ಗ್ರಾಮಥೋನ್ ದಾರಿದೀಪ

ಎಚ್. ಡಿ. ಕೋಟೆ :  ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ  ಏಕಲ್ ಗ್ರಾಮಥೋನ್ ಫೌಂಡೇಶನ್ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು  ಏಕಲ್ ಗ್ರಾಮಥೋನ್ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಕುಂಟೇಗೌಡ ಹೇಳಿದರು. ತಾಲೂಕಿನ ಹಂಪಾಪುರದಲ್ಲಿ 3 ತಿಂಗಳ ಕಾಲ ಹೊಲಿಗೆ  ಮತ್ತು ಕಂಪ್ಯೂಟರ್ ತರಬೇತಿ ಕಲಿಕಾ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  ನಮ್ಮ ಸಂಸ್ಥೆಯು ಉದ್ಯೋಗ ತರಬೇತಿ ನೀಡುವುದರ ಜೊತೆಗೆ ಶಿಸ್ತು,…

Read More

ಐಟಿಸಿ ಕಂಪನಿಯಿಂದ ಹೆಮ್ಮಿಗೆ ಸರ್ಕಾರಿ ಶಾಲೆಗೆ ಡೆಸ್ಕ್‌ ವಿತರಣೆ

​ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ಕಲಿಕಾ ವಾತಾವರಣವನ್ನು ಉತ್ತಮಗೊಳಿಸುವ ಉದ್ದೇಶದಿಂದ ಐಟಿಸಿ ಕಂಪನಿಯಿಂದ ತಾಲೂಕಿನ ಹೆಮ್ಮಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡೆಸ್ಕ್‌ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಹೆಮ್ಮಿಗೆ ಮಹೇಶ್  ಮಾತನಾಡಿ ಮಕ್ಕಳ ಸಬಲೀಕರಣಕ್ಕಾಗಿ ಐಟಿಸಿ ಕಂಪನಿ ತನ್ನ ಶಿಕ್ಷಣ ನಿಧಿಯನ್ನು ಬಳಸಿ ಪ್ರತಿಯೊಂದು ಮಗುವೂ ಕಲಿಯಬೇಕು, ಬೆಳೆಯಬೇಕು ಮತ್ತು ಅವರು ಅಭಿವೃದ್ಧಿ ಹೊಂದಲ ಹೆಚ್ಚಿನ ಸಹಕಾರ ನೀಡುತ್ತಿದೆ ಐಟಿಸಿ ಕಂಪನಿಯು ಶಿಕ್ಷಣ ಸೌಲಭ್ಯ ವಂಚಿತ ಮಕ್ಕಳು ತಮ್ಮ ಶಾಲಾ…

Read More

ವ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

ಮೈಸೂರು: ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠಕ್ಕೆ ತೆರಳಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾನುವಾರ ಮೈಸೂರು ದಸರಾ ಮಹೋತ್ಸವ ಸಮಿತಿ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡುವ ಮೂಲಕ ದಸರಾ ಉದ್ಘಾಟನೆಗೆ ಆಹ್ವಾನಿಸಿದೆ.ದಸರಾ ಮಹೋತ್ಸವದ ವಿಶೇಷಾಧಿಕಾರಿಯಾದ ಮೈಸೂರು ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಜಿ ಅವರು ದಸರಾ ಸ್ವಾಗತ ಸಮಿತಿಯೊಂದಿಗೆ ಕೊಪ್ಪಳದ ಗವಿಮಠಕ್ಕೆ ತೆರಳಿ, ಅಭಿನವ ಗವಿಸಿದ್ದೇಶ್ವರ ಸ್ವಾಮ್ಭಿಜಿಯವರನ್ನು ಭೇಟಿ ಮಾಡಿ, ಮೈಸೂರು ದಸರಾ…

Read More

ಮಂಗಳೂರು ಗಣೇಶ್ ಬೀಡಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಮಾಜಿ ನೌಕರನ ಬಂಧನಮೈಸೂರು: ಮೈಸೂರಿನ ಹುಣಸೂರು ರಸ್ತೆಯ ದೇವರಾಜ ಮೊಹಲ್ಲಾದಲ್ಲಿರುವ ಮಂಗಳೂರು ಗಣೇಶ್ ಬೀಡಿ ವರ್ಕ್್ಸ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಮಾಜಿ ನೌಕರನೊಬ್ಬನನ್ನು ನಗರದ ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಚಾಮರಾಜನಗರದ ಭ್ರಮರಾಂಬ ಬಡಾವಣೆಯಲ್ಲಿರುವ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಪೈ (೫೦) ಬಂಧಿತ ಆರೋಪಿ.ಈತ ಸೆ.೧೭ರಂದು ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ, ಹಿಂಭಾಗದಲ್ಲಿ ಬಾಂಬ್ ಇರಿಸಿರುವುದಾಗಿ ಮೂರು ಬಾರಿ ಬೆದರಿಕೆ ಹಾಕಿದ್ದ….

Read More

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ೧೦ ಮಂದಿಗೆ ಗಾಯ

ಹನೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ೧೦ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು ಮುಂಭಾಗ ಭಾನುವಾರ ನಡೆದಿದೆ.ಬೆಂಗಳೂರಿನಿ0ದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿದ್ದ ಕಾರು ಹಾಗೂ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದು, ಪ್ರಯಾಣಿಕರಾದ ಸುವರ್ಣ (೩೭), ಲೋಕೇಶ್ (೨೦), ಶ್ರೇಯ (೧೬), ರುಕ್ಮಿಣಿ (೪೨), ಮಂಜೇಶ್ (೪೩), ಭಾಗ್ಯಮ್ಮ (೫೫), ಮಹಾದೇವ (೫೦), ಮನ್ಸೂರ್ (೩೮), ಮೊಹಮ್ಮದ್ ತೌಫಿಕ್…

Read More

ರಂಗಭೂಮಿ ಅಭಿನಯ ಕಲಿಯುವುದಕ್ಕಿಂತ ಬದುಕನ್ನು ಕಲಿಯುವ ಶಾಲೆ ; ಶ್ರೀನಿವಾಸ ಪಾಲಹಳ್ಳಿ

ಮೈಸೂರು: ರಂಗಭೂಮಿ ಕೇವಲ ಅಭಿನಯ ಕಲಿಸುವ ವೇದಿಕೆಯಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ವಿಸ್ತರಿಸುವ ಪಾಠಶಾಲೆ ಎಂದು ನಿರಂತರ ಫೌಂಡೇಶನ್‌ನ ನಿರ್ದೇಶಕ ಶ್ರೀನಿವಾಸ ಪಾಲಹಳ್ಳಿ ಹೇಳಿದರು.ನಗರದ ಕಲಾಮಂದಿರದಲ್ಲಿರುವ ಕಿರು ರಂಗಮAದಿರದಲ್ಲಿ ನಿರಂತರ ಫೌಂಡೇಶನ್ ಆಯೋಜಿಸಿದ್ದ ೨೦ನೇ ವರ್ಷದ ಸಹಜರಂಗೋತ್ಸವದಲ್ಲಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಮಾಡಿಸುವುದರ ಜೊತೆಗೆ ಅವರ ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಅರಿವು ಮತ್ತು ಮಾನವೀಯ ಗುಣಗಳನ್ನು ಬೆಳೆಸುವುದು ಸಹಜರಂಗದ ಮುಖ್ಯ ಉದ್ದೇಶವಾಗಿದೆ ಎಂದರು.ಪಾತ್ರ…

Read More

ಕಾಯಕ ಪ್ರಜ್ಞೆ ಮತ್ತು ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ: ಡಾ. ಡಿ ತಿಮ್ಮಯ್ಯ

ಮೈಸೂರು: ಬಸವಾದಿ ಶರಣರ ಕಾಯಕ ತತ್ವ ಹಾಗೂ ಶಿಕ್ಷಣದಿಂದ ಮಾತ್ರ ಅಸಂಘಟಿತ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ ಹೇಳಿದರು.ಭಾನುವಾರ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮAದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ನುಲಿಯ ಚಂದಯ್ಯ ಜಯಂತೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,೧೨ ನೆಯ ಶತಮಾನದಲ್ಲಿ ಬಸವಾದಿ ಶರಣರು ಕಾಯಕವೇ ಕೈಲಾಸ ಎಂಬ ತತ್ತ÷್ವವನ್ನು ಜಗತ್ತಿಗೆ ಸಾರಿದರು….

Read More

ಬಟ್ಟೆಯ ಕೈ ಚೀಲಗಳ ಮೇಲೆ ಆಕರ್ಷಕವಾದ ಚಿತ್ರಗಳನ್ನು ಬಿಡಿಸಿದ ಚಿಣ್ಣರು

ಮೈಸೂರು; ದಸರಾ ಚಿತ್ರಸಂತೆ ಅಂಗವಾಗಿ ಭಾನುವಾರ ಬೆಳಿಗ್ಗೆ ೯.೩೦ ರಿಂದ ೧೨.೩೦ ರ ವರೆಗೆ ಬಟ್ಟೆಯ ಕೈ ಚೀಲಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ೨೫ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಕ್ಕಳು ವಿವಿಧ ಆರ್ಕಷಕ ಚಿತ್ರಗಳನ್ನು ಬಿಡಿಸಿದರು. ಅದರಲ್ಲೂ ಕೆಲವರು ಬಟ್ಟೆ ಬ್ಯಾಗ್‌ಗಳಲ್ಲಿ ಚಿತ್ರಗಳನ್ನು ಬಿಡಿಸಿದರು. ತಮ್ಮ ಚಿತ್ರಗಳ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು. ಪರಿಸರ ಸಂರಕ್ಷಿಸಬೇಕಾದ ಮಹತ್ವವನ್ನು ಚಿತ್ರಗಳ ಮೂಲಕ ತಿಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ,…

Read More

ಅರಮನೆ ನಗರಿಯಲ್ಲಿ ಎಲ್-ಎತಾಪ್ ಸೈಕ್ಲಥಾನ್ ಸ್ಪರ್ಧೆ ಗೆ ಚಾಲನೆ

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎನ್‌ಇಬಿ ಸ್ಪೋರ್ಟ್್ಸ ವತಿಯಿಂದ ಭಾನುವಾರ ಮೈಸೂರಿನಲ್ಲಿ ವಿಶ್ವದ ಅತಿದೊಡ್ಡ ಎಲ್’ಎಟ್ಯಾಪ್’ ಸೈಕ್ಲಿಂಗ್ ರೇಸ್ ಸ್ಫರ್ಧೆಯನ್ನು ನಡೆಸಲಾಯಿತು. ನಗರದ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಉದ್ಯಾನವನಗಳ ಮಧ್ಯ ರಸ್ತೆಯಲ್ಲಿ ಸ್ಪರ್ಧೆಗೆ ಚಾಲನೆಗೊಂಡು ಯಶಸ್ವಿಯಾಗಿ ನಡೆಯಿತು.ಸೈಕ್ಲಿಂಗ್ ಸ್ಪರ್ಧೆಗೆ ಸಂಸದರಾದ ಯದುವೀರ್ ಕೃಷ್ಣರಾಜ ಚಾಮರಾಜ ಒಡೆಯರ್ ಹಾಗೂ ತೆಜಸ್ವಿ ಸೂರ್ಯ ಅವರು ಚಾಲನೆ ನೀಡಿದರು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೈಸೂರಿನಲ್ಲಿ ಸೈಕ್ಲಿಂಗ್ ಸ್ಪರ್ಧೆಯನ್ನು ಮೊದಲ…

Read More