Year: 2026
ನಂಜನಗೂಡಿನಲ್ಲಿ ವಿಜೃಂಭಣೆಯಿ0ದ ನಡೆದ ಹನುಮನ ಮೆರವಣಿಗೆ
ನಂಜನಗೂಡು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡು ಪಟ್ಟಣದಲ್ಲಿ ವಿಜೃಂಭಣೆಯಿAದ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು.ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮವನ್ನು ಸಿದ್ದಲಿಂಗಸ್ವಾಮೀಜಿ, ಇಮ್ಮಡಿ ಮುರುಗಿ ಸ್ವಾಮೀಜಿ, ಪಟ್ಟದ ನಾಗರಾಜ ಸ್ವಾಮೀಜಿ, ಜ್ಞಾನಾನಂದ ಚೆನ್ನ ರಾಜ ಅರಸ್ ಸ್ವಾಮೀಜಿ, ಮಾಜಿ ಶಾಸಕ ಹರ್ಷವರ್ಧನ್ ಅವರು ಹನುಮ ಮತ್ತು ಶ್ರೀ ರಾಮ ಮೆರವಣಿಗೆಯ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, “ಪ್ರತಿ ವರ್ಷ ಹನುಮ…
ಬಸವಣ್ಣನವರ ವಚನಗಳು ಸರಳವಾಗಿದ್ದು, ಇಂದಿಗೂ ಪ್ರಸ್ತುತವಾಗಿವೆ; ಸಂಸದ ಯದುವೀರ್
ಮೈಸೂರು: ಬಸವಣ್ಣನವರ ವಚನಗಳು ಸರಳವಾಗಿದ್ದು, ಇವತ್ತಿನ ದಿನಮಾನಗಳಿಗೂ ಪ್ರಸ್ತುತವಾಗಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಮೈಸೂರಿನ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಸಭಾಭವನದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ 6ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಬಸವ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ, ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರು ಸೇರಿದಂತೆ ಎಲ್ಲಾ…
ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವ ಸಂಪನ್ನ
ಮೈಸೂರು; ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಮೈಸೂರಿನ ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದ ಶಾರದಾ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಹಾಗೂ ಆರೋಗ್ಯ ಅರಿವು ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನದ ಪೂರ್ವಭಾವಿಯಾಗಿ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.ಸುಮಾರು 45 ನಿಮಿಷಗಳ ಕಾಲ ಪ್ರಾರ್ಥನೆ, ಚಾಲನಾ ಕ್ರಿಯೆ, ತಾಡಾಸನ, ವೃಕ್ಷಾಸನ, ಪಾದ-ಹಸ್ತಾಸನ, ಅರ್ಧ ಚಕ್ರಾಂತಾಸನ ಮತ್ತು ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾçಸನ, ಉಷ್ಟಾçಸನ, ಶಶಕಾಸನ, ಉತ್ತಾನ ಮಂಡೂಕಾಸನ ಮತ್ತು ವಕ್ರಾಸನ,…
ಕನ್ನಡ ಚಿತ್ರರಂಗದ ನಿರ್ದೇಶಕ ಸ್ಥಾನಕ್ಕೆ ವಿಶ್ವಖ್ಯಾತಿ ತಂದು ಕೊಟ್ಟವರು ಪುಟ್ಟಣ್ಣ ಕಣಗಾಲ್; ಸುರೇಶ್ ಎನ್ ಋಗ್ವೇದಿ
ಕನ್ನಡ ಚಿತ್ರರಂಗದ ನಿರ್ದೇಶಕ ಸ್ಥಾನಕ್ಕೆ ವಿಶ್ವಖ್ಯಾತಿ ತಂದು ಕೊಟ್ಟವರು ಪುಟ್ಟಣ್ಣ ಕಣಗಾಲ್; ಸುರೇಶ್ ಎನ್ ಋಗ್ವೇದಿಚಾಮರಾಜನಗರ: ಕನ್ನಡ ಚಿತ್ರರಂಗದ ನಿರ್ದೇಶಕ ಸ್ಥಾನಕ್ಕೆ ವಿಶ್ವಖ್ಯಾತಿ ತಂದು ಕೊಟ್ಟವರು ಪುಟ್ಟಣ್ಣ ಕಣಗಾಲ್.ಇವರ ಚಿಂತನೆ, ದೂರದೃಷ್ಟಿ, ಸೃಜನಶೀಲತೆ,ಹೊಸ ರೂಪದ ಯೋಚನೆ, ವಿಶ್ವ ಶ್ರೇಷ್ಠ ನಿರ್ದೇಶಕರನ್ನಾಗಿ ಮಾಡಿ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತು ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿತ್ರ ನಿರ್ದೇಶಕ ದಿವಂಗತ…
ಮನುಷ್ಯ ಮೃದುವಾದರೆ…..
ಕಬ್ಬಿಣ ಮೃದುವಾಗಿ ಆಯುಧವಾಗುತ್ತದೆ. ಚಿನ್ನ ಮೃದುವಾಗಿ ಒಡವೆಯಾಗುತ್ತದೆ. ಮಣ್ಣು ಮೃದುವಾಗಿ ಬಿತ್ತಲು ಯೋಗ್ಯವಾಗುತ್ತದೆ. ಹಿಟ್ಟು ಮೃದುವಾಗಿ ರೊಟ್ಟಿಯಾಗುತ್ತದೆ. ಇದೇ ರೀತಿ ಮನುಷ್ಯ ಮೃದುವಾದರೆ ಸರ್ವರ ಹೃದಯದಲ್ಲಿ ಸ್ಥಾನ ಪಡೆಯುತ್ತಾನೆ.
ಸಸಿಗಳನ್ನು ವಿತರಿಸುವ ಮೂಲಕ ವಿ.ವಿ ಕ್ರಿಯೇಷನ್ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆ
ಮೈಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿ.ವಿ ಕ್ರಿಯೇಷನ್ ಸಂಸ್ಥೆ ವತಿಯಿಂದ ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರಿನಲ್ಲಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸಂಸ್ಥೆಯ ಸಂಸ್ಥಾಪಕಿ ವಿಮಲ ವೀರೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಕೃತಿಯಿಂದ ಮನುಷ್ಯ, ಸಕಲ ಜೀವಿಗಳು ಬದುಕುತ್ತಿವೆ. ಪ್ರಕೃತಿ ಚೆನ್ನಾಗಿದ್ದರೆ, ಆರೋಗ್ಯವಿದ್ದರೆ ಜೀವ ಸಂಕುಲವೇ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಎಲ್ಲವೂ ನಾಶವಾಗುತ್ತದೆ. ಹಾಗಾಗಿ ಪ್ರಕೃತಿಯನ್ನು ರಕ್ಷಿಸುವುದು ಎಲ್ಲರ ಕರ್ತವ್ಯದೊಂದಿಗೆ ಜವಾಬ್ದಾರಿ ಕೂಡ ಆಗಿದೆ. ಪರಿಸರ ನಾಶವನ್ನು ತಡೆಯಲು ಹಾಗೂ ಪರಿಸರವನ್ನು…
ಪರಿಸರ ನಾಶದಿಂದ ಮನುಷ್ಯ ಮಾತ್ರವಲ್ಲದೆ, ಇಡೀ ಜೀವ ವ್ಯವಸ್ಥೆಯೇ ವಿನಾಶದ ಹಾದಿಯಲ್ಲಿದೆ; ಸಾಹಿತಿ ಟಿ. ಸತೀಶ್ ಜವರೇಗೌಡ
ಮೈಸೂರು : ಪರಿಸರ ನಾಶದಿಂದ ಮನುಷ್ಯ ಮಾತ್ರವಲ್ಲದೆ, ಇಡೀ ಜೀವ ವ್ಯವಸ್ಥೆಯೇ ವಿನಾಶದ ಹಾದಿಯಲ್ಲಿದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಹೇಳಿದರು.ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯನ ಸ್ವಾರ್ಥದಿಂದ ಪರಿಸರದ ಮೇಲೆ ದೌರ್ಜನ್ಯ ನಡೆದಿದೆ. ಸಮತೋಲನ ವ್ಯವಸ್ಥೆ ಹದಗೆಟ್ಟಿದೆ. ತತ್ಪರಿಣಾಮವಾಗಿ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿವೆ. ಇದರಿಂದಾಗಿ ಒಂದೇ ದಿನದಲ್ಲಿ ಎಲ್ಲ ಋತುಗಳು ಘಟಿಸುತ್ತಿವೆ. ಇದು ಜೀವ…
ನಿಧನರಾದ ಬಿಜೆಪಿ ಮುಖಂಡ ಜಗದೀಶ್‌ರಿಗೆ ನುಡಿ ನಮನ
ಮೈಸೂರು: ಇತ್ತೀಚೆಗೆ ನಿಧನರಾದ ರಾಷ್ಟಿçÃಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಸದಸ್ಯರಾದ ಬಿಜೆಪಿ ಮುಖಂಡ ಜಗದೀಶ್ ಹಿರೇಮನಿ ಅವರಿಗೆ ನಗರದ ನಜರ್‌ಬಾದ್‌ನಲ್ಲಿರುವ ವಿ. ಕೆ.ಫಂಕ್ಷನ್ ಹಾಲ್‌ನಲ್ಲಿ ನುಡಿ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಮತ್ತು ಮುಖಂಡರು, ಜಗದೀಶ್ ಹಿರೇಮನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಷ್ಟದ ಸಮುದಾಯದಿಂದ ಬೆಳೆದು ಬಂದ ಜಗದೀಶ್ ಹಿರೇಮನಿ ಅವರು, ತಮ್ಮ ಜೀವನವನ್ನು ಸಮಾಜ ಸೇವೆ ಮತ್ತು ಸಂಘಟನಾ ಕಾರ್ಯಗಳಿಗೆ ಸಮರ್ಪಿಸಿಕೊಂಡಿದ್ದರು….