ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪನೆಯಾಗಬೇಕು: ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್
ಚಾಮರಾಜನಗರ: ರಾಜ್ಯದ ವಿವಿಧ ಕಡೆ ರಂಗಾಯಣ ಇರುವಂತೆಯೇ ಜಾನಪದ ಕಲೆಗಳ ತವರೂರು ಎನಿಸಿದ ಚಾ.ನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಒತ್ತಾಯಿಸಿದರು.ನಗರದ ಡಾ. ರಾಜಕುಮಾರ್ ರಂಗಮಂದಿರದಲ್ಲಿ, ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗವಾಹಿನಿ, ರಾಜ್ಯ ರೈತ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೊಳುವಾರು ಮಹಮ್ಮದ್ ಕುಂಇ್ಞು ಅವರ ಕಾದಂಬರಿ ಆಧಾರಿತ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗಡಿ ಜಿಲ್ಲೆ ಚಾಮರಾಜನಗರ…