Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಕ್ರಮ ವಲಸಿಗರ ಕುರಿತು ಹಲವು ತಿಂಗಳ ಹಿಂದೆಯೇ ಮಾಹಿತಿ ಲಭ್ಯವಾಗಿದ್ದರೂ, ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ; ಮಾಜಿ ಸಂಸದ ಪ್ರತಾಪ್ ಸಿಂಹ

ಮೈಸೂರು: ರಾಜ್ಯದ ಆಂತರಿಕ ಸುರಕ್ಷತೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಕ್ರಮ ವಲಸಿಗರ ಕುರಿತು ಹಲವು ತಿಂಗಳ ಹಿಂದೆಯೇ ಮಾಹಿತಿ ಲಭ್ಯವಾಗಿದ್ದರೂ, ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ಆಗಮನ ಹೆಚ್ಚಾಗುತ್ತಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಗಳೇ ಕಾರಣ. ಗೃಹ ಸಚಿವರು ಹಾಗೂ ಬ್ರದರ್ ಎನ್ನುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇರುವವರೆಗೂ, ಈ ರೀತಿ ಅಕ್ರಮ ಬಾಂಗ್ಲಾ ವಲಸಿಗರು…

Read More

ಅಕ್ರಮ ಬಾಂಗ್ಲಾದೇಶಿ ವಲಸಿಗರ ಮಾಹಿತಿ ನೀಡಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧವೇ ಕೇಸ್ ದಾಖಲಿಸಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು: ನಗರದ ರೈಲು ನಿಲ್ದಾಣದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಮಾಹಿತಿ ನೀಡಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧವೇ ಕೇಸ್ ದಾಖಲಿಸಿರುವುದನ್ನು ಖಂಡಿಸಿ ಮಂಗಳವಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಾಕಾರರು, ರೈಲ್ವೆ ಪೊಲೀಸರು, ಪೊಲೀಸ್ ಇಲಾಖೆ ಹಾಗೂ ಗೃಹ ಇಲಾಖೆಯ ವಿರುದ್ಧ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ವಲಸಿಗರ ವಿರುದ್ಧ ಸಮಗ್ರ ತನಿಖೆ ನಡೆಸದೆ, ಅವರನ್ನು ಹಿಡಿದುಕೊಟ್ಟ ಕಾರ್ಯಕರ್ತರ ಮೇಲೆಯೇ…

Read More

ಪೊಲೀಸರು ಗೃಹ ಸಚಿವರನ್ನು ಓಲೈಸುವ ಸಲುವಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ; ಸಂಸದ ಯದುವೀರ್

ಮೈಸೂರು: ಮೈಸೂರಿನ ರೈಲು ನಿಲ್ದಾಣದಲ್ಲಿ ರೈಲಿನಿಂದ ಬಂದ ಕೆಲವರನ್ನು ಬಾಂಗ್ಲಾ ದೇಶದ ಪ್ರಜೆಗಳೆಂದು ಶಂಕಿಸಿ ತಡೆದು, ಪರಿಶೀಲನೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಗೃಹ ಸಚಿವರನ್ನು ಓಲೈಸುವ ಸಲುವಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಮೈಸೂರು ರೈಲ್ವೆ ಪೆÇಲೀಸರು ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿ ಮಂಗಳವಾರ ಮಾತನಾಡಿದ ಅವರು, ಅಕ್ರಮ ಬಾಂಗ್ಲಾ ವಲಸಿಗರು ಮೈಸೂರಿಗೆ…

Read More

ಸಂಗೀತ ಕ್ಷೇತ್ರದ ಸಾಧಕರಿಗೆ “ಕಲಾ ಸಾರಥಿ ಪ್ರಶಸ್ತಿ” ಪ್ರಧಾನ

ಮೈಸೂರು; ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಸಂಗೀತ ಕ್ಷೇತ್ರದ ಸಾಧಕರಿಗೆ “ಕಲಾ ಸಾರಥಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರಾದ ದೇವಾನಂದ ವರಪ್ರಸಾದ್, ಕಿರಗಸೂರು ಪುರುಷೋತ್ತಮ್,ವಿದುಷಿ ಆರ್ ಸಿ ರಾಜಲಕ್ಷ್ಮಿ, ಕೆ.ಎಸ್.ಭವತಾರಣಿ, ಶಿವು ಕುಮಾರ್( ಬಿಳಿಕೆರೆ), ಅವರಿಗೆ ಕಲಾ ಸಾರಥಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ, ಸಂಗೀತ ಕ್ಷೇತ್ರದ ಕಲಾವಿದರ…

Read More

ಜೂ.25ರಂದು ವಿಶೇಷ ‘ಸ್ವಾತಿ’ ಪೂಜೆ

ಮೈಸೂರು; ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜೂ.25ರಂದು ಗುರುವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕ್ಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8.30ಕ್ಕೆ ಸಂಕಲ್ಪ, 9.30ಕ್ಕೆ ಅಭಿಷೇಕ, 11ಕ್ಕೆ ಅಲಂಕಾರ, 12ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1ಕ್ಕೆ ಶಾತ್ತುಮೊರೈ, 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. ಸಂಜೆ 8ಕ್ಕೆ ಪ್ರಾಕಾರೋತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ….

Read More

ವಿದ್ಯಾರ್ಥಿಗಳು ದುಷ್ಟ ಚಟದಿಂದ ದೂರ ಇರಿ ಎಸ್ ಪಿ ಮುತ್ತುರಾಜ್

ವರದಿ ಜಿ ಬಂಗಾರುಚಾಮರಾಜನಗರ ಜೂನ್ 23; ವಿದ್ಯಾರ್ಥಿಗಳು ಮಾದಕ ವ್ಯಸನ ಅಭ್ಯಾಸದಿಂದ ದೂರ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಮುತ್ತುರಾಜ್ ಸಲಹೆ ನೀಡಿದರುನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ವತಿಯಿಂದಮಂಗಳವಾರ ಮಧ್ಯಾನ ಏರ್ಪಡಿಸಿದ ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಮದ್ಯಪಾನ ಧೂಮಪಾನ ಬಗ್ಗೆ ನಿಮ್ಮ ಪೋಷಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕರ್ತವ್ಯ ನಿಮ್ಮದು…

Read More

ಟಾಟಾ ಎಲೆಕ್ಟ್ರಿಕ್ ಸಫ್ಟ್ ಕಂಪೆನಿಗೆ ವಿತರಣಾ ಪರವಾನಗಿ ನೀಡಿಕೆಗೆ ಆಕ್ಷೇಪಣೆ, ಸಲಹೆಗಳ ನೀಡಿಕೆ:ಲಿಂಗರಾಜು

ಮೈಸೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧಿಸೂಚನೆಗೆ ಸಂಬಂಧಿಸಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳ ಕಾರ್ಯವ್ಯಾಪ್ತಿಯ ಪ್ರದೇಶಗಳಲ್ಲಿ ಟಾಟಾ ಎಲೆಕ್ಟ್ರಿಕ್ ಸಫ್ಟ್ ಕಂಪೆನಿಗೆ ವಿತರಣಾ ಪರವಾನಗಿ ನೀಡುವ ಕುರಿತು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ವಿದ್ಯುತ್ ಹೆಚ್ಚುವರಿ ವಿತರಣಾ ಪರವಾನಗಿದಾರರ ಪ್ರವೇಶದಿಂದ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿ ಕಾರ್ಯಕ್ಷಮತೆ, ಸೇವಾ ಗುಣಮಟ್ಟ ಹಾಗೂ ಗ್ರಾಹಕ ಸ್ನೇಹಿ ಆಡಳಿತದಲ್ಲಿ ಸುಧಾರಣೆ…

Read More

ವಿದ್ಯುತ್ ಖಾಸಗೀಕರಣವನ್ನು ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಮೈಸೂರು : ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದು ರೈತರ ಮರಣ ಶಾಸನ ಬರೆದಂತೆ. ಹಾಗಾಗಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತರ ಹೆಸರೇಳಿ ಅಧಿಕಾರಕ್ಕೆ ಬಂದವರು ಈಗ ಖಾಸಗಿ ಕಂಪನಿ ಜತೆ ಕೈ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ…

Read More

ಪ್ರತಿಭೆ ಎಂಬುದು ವಿದ್ಯಾರ್ಥಿಯೊಳಗಿನ ಸಾಮಥ್ರ್ಯ, ಪರಿಶ್ರಮ, ಶಿಸ್ತು ಮತ್ತು ಸತತ ಪ್ರಯತ್ನದ ಪ್ರತೀಕ; ಸ್ವಾಮಿ ಯುಕ್ತೇಶಾನಂದಜೀ

ಮೈಸೂರು; ಪ್ರತಿಭೆ ಎಂಬುದು ವಿದ್ಯಾರ್ಥಿಯೊಳಗಿನ ಸಾಮಥ್ರ್ಯ, ಪರಿಶ್ರಮ, ಶಿಸ್ತು ಮತ್ತು ಸತತ ಪ್ರಯತ್ನದ ಪ್ರತೀಕ ಎಂದು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಚಿದಜೀ ಹೇಳಿದರು.ನಗರದ ವಿಜಯ ವಿಠ್ಠಲ ವಿದ್ಯಾಸಂಸ್ಥೆಯಲ್ಲಿ ಮಾರ್ಚ್-ಏಪ್ರಿಲ್ 2026 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ ಎಂಬುದು ಕೇವಲ ಪರೀಕ್ಷೆಯ ಅಂಕಗಳಿಂದ ಅಳೆಯುವ ವಿಷಯವಲ್ಲ. ಪ್ರತಿಭೆ ಎಂಬುದು ವಿದ್ಯಾರ್ಥಿಯೊಳಗಿನ ಸಾಮಥ್ರ್ಯ,…

Read More

ಎಚ್.ವಿ. ರಾಜೀವ್‍ರಿಂದ ವಿದ್ಯಾರ್ಥಿನಿಗೆ ಉಚಿತವಾಗಿ ಸೈಕಲ್ ವಿತರಣೆ

ಮೈಸೂರು; ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಮೈಸೂರಿನ ನಾಚನಹಳ್ಳಿ ಪಾಳ್ಯದ ನಿವಾಸಿಯಾದ ಅಬ್ದುಲ್ ಗಫರ್ ರವರ ಸಾಕು ಮಗಳಾದ ಜೋಹರ್ ಕೌಶರ್‍ರಿಗೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸೈಕಲ್‍ನ್ನು ಕೊಡುಗೆಯಾಗಿ ನೀಡಿದರು.ಜೋಹರ್ ಕೌಶರ್‍ರಿಗೆ ಸೆಂಟ್ ಥಾಮಸ್ ಶಾಲೆಯಲ್ಲಿ 8ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿಉಚಿತವಾಗಿ ಸೈಕಲ್ ವಿತರಣೆಯನ್ನು ಮಾಡಿದರು.ಬಳಿಕ ಮಾತನಾಡಿದ ಅವರು,ಅಬ್ದುಲ್ ಗಫರ್ ಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ಸಹ, ಈ ಮಗುವನ್ನು ತಮ್ಮ ಮಗುವಿನಂತೆ ಸಾಕಿ-ಬೆಳೆಸುತ್ತಿರುವುದು ಅವರ…

Read More