ಕಾಲಾವಕಾಶ ನೀಡದೆ ವ್ಯಾಪಾರ ಸ್ಥಗಿತ ಆದೇಶ ಸರಿಯಲ್ಲ; ಸಿ.ನಾರಾಯಣಗೌಡ
ಮೈಸೂರು: ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಒಂದು ಪಬ್‍ನಲ್ಲಿ ಸಂಭವಿಸಿದ ಅಗ್ನಿ ದುರಂತದ ಘಟನೆಯ ನಂತರ ಮೈಸೂರು ಮಹಾನಗರ ಪಾಲಿಕೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಏಕಾಏಕಿ ಅನೇಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ಪರಿಶೀಲನೆ ನಡೆಸಿ, ಕೆಲವು ಸಂಸ್ಥೆಗಳನ್ನು ತಕ್ಷಣವೇ ಮುಚ್ಚಲು ಸೂಚಿಸಿರುವುದು ಉದ್ಯಮಿಗಳಿಗೆ ತೀವ್ರ ಸಂಕಷ್ಟವನ್ನು ಉಂಟುಮಾಡಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು ನಗರ ತನ್ನ ಸಾಂಸ್ಕೃತಿಕ ಪರಂಪರೆ ಮತ್ತು…