Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಡಿನ ಪ್ರತಿಯೊಬ್ಬ ಅರ್ಹ ಮತದಾರರೂ ನಿಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಿ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರು ಚಾಲನೆ ನೀಡಿದರು.ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರ ಎಣಿಕೆ ನಮೂನೆ ಹಾಗೂ ಅವರ ಕುಟುಂಬದವರ ಎಣಿಕೆ ನಮೂನೆ ಯನ್ನು ವಲಯ ಕಚೇರಿ 01 ರಿಂದ ಮನೆ ಮನೆ ಭೇಟಿಯ ಮೂಲಕ ವಿತರಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ ಅವರು ಎಣಿಕೆ ನಮೂನೆಗೆ ಈಗಾಗಲೇ 2002 ರಲ್ಲಿನ ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಿಂದ ಪಡೆದುಕೊಂಡು ಎಣಿಕೆ ನಮೂನೆಯಲ್ಲಿ ಸದರಿ ಮಾಹಿತಿಯನ್ನು ಸ್ವತಃ ತುಂಬಿ ಸಹಿ…

Read More

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ವಿಧಾನಪರಿಷತ್‌ ಸದಸ್ಯ ರಘು ಕೌಟಿಲ್ಯ

ಪಿರಿಯಾಪಟ್ಟಣ: ಅಲ್ಪಸಂಖ್ಯಾತ ಹಿಂದೂಗಳ ಹಾಗೂ ದಲಿತ ಸಮುದಾಯದ ಹೆಸರು ಹೇಳಿಕೊಂಡು ಅಧಿಕಾರದ ರುಚಿ ಸವಿಯುತ್ತಿರುವ ಕಾಂಗ್ರೆಸ್ ಪಕ್ಷವು ಆ ವರ್ಗದವರಿಗೆ ಅನ್ಯಾಯವೆಸಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಆರ್. ರಘು ಕೌಟಿಲ್ಯ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಹಿಂದ ಹೆಸರು ಹೇಳಿಕೊಂಡು ಅವರ ಮತ ಗಳಿಸಿಕೊಳ್ಳುತ್ತಿದೆಯೇ ಹೊರತು ಆ ಸಮುದಾಯಗಳಿಗೆ ನಿಜವಾಗಿಯೂ ಏನು ಮಾಡಲಿಲ್ಲ ಕಡೇ ಪಕ್ಷ ಹಿಂದುಳಿದ ವರ್ಗಗಳ…

Read More

‘ನಟನ’ದಲ್ಲಿ ‘ಸುಬ್ಬಣ್ಣ ಸ್ಮರಣೆ’ಯ ಸಡಗರ

ಮೈಸೂರು; ಮೈಸೂರಿನ ನಟನ ರಂಗ ಸಂಸ್ಥೆಯು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ, ನೀನಾಸಂ ನ ನಿರ್ಮಾತೃ ಶ್ರೀ ಕೆ.ವಿ ಸುಬ್ಬಣ್ಣಅವರ ನೆನಪಿನಲ್ಲಿ ನಟನವು ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹೀಗೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.ಜುಲೈ 12ರಂದು ನಟನರೆಪರ್ಟರಿಯ ಹೊಚ್ಚ ಹೊಸನಾಟಕ ‘ಚೆಕ್‌ಪೋಸ್ಟ್ ನಂ.840 ಪ್ರದರ್ಶನ, ಹಾಗೂ ನಟನದ 2026-27ನೇ ಸಾಲಿನ ರಂಗಭೂಮಿಡಿಪ್ಲೋಮಾ ಹಾಗೂ ವಾರಾಂತ್ಯರAಗಶಾಲೆಯ ಮಕ್ಕಳ ಸ್ವಾಗತ ಸಡಗರ. ಜುಲೈ 13 ರಂದು ವಿಚಾರ ಸಂಕಿರಣ ಮತ್ತುಜುಲೈ 14 ನಟನರಂಗಮAದಿರ ಲೋಕಾರ್ಪಣೆಯಾಗಿ 11…

Read More

ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ  

ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ:  ಸೋಮಶೇಖರ್  ಪಿರಿಯಾಪಟ್ಟಣ : ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ ಎಂದು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ತಿಳಿಸಿದರು  ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನಡೆದ ವನ ಮಹೋತ್ಸವ, ಶಾರದ ಪೂಜೆ, ಪೋಷಕರ ಸಭೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ನೀಡುವುದರ ಜೊತೆಗೆ ಬೆಂಗಳೂರು ಮೈಸೂರು ಕಡೆಗಳಲ್ಲಿ…

Read More

ಭವ ಎನಗೆ ಹಿಂಗಿತು” ಮುಖವಾಡದ ಹಿಂದಿನ ಮನುಷ್ಯನ ಅನಾವರಣ

ಮೈಸೂರು; ಸಂಚಲನ ಮೈಸೂರು ತಂಡ ಅಭಿನಯಿಸಿದ, ಕರಣಂ ಪವನ್ ಪ್ರಸಾದ್ ಅವರ ರಚನೆಯ “ಭವ ಎನಗೆ ಹಿಂಗಿತು” ನಾಟಕವು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.ಒಬ್ಬ ಪ್ರಸಿದ್ಧ ಸಾಹಿತಿ ಮತ್ತು ಅವನ ಮಗನ ನಡುವಿನ ಮನೋವೈಜ್ಞಾನಿಕ ಸಂಘರ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸಮಕಾಲೀನ ನಾಟಕವಾಗಿದೆ. ಸಮಾಜದ ಮುಂದೆ ಆದರ್ಶವಾದಿ, ಪ್ರಗತಿಪರ ಚಿಂತಕ, ಬುದ್ಧಿಜೀವಿ ಮತ್ತು ಖ್ಯಾತ ಕಾದಂಬರಿಕಾರನಾಗಿ ಗುರುತಿಸಿಕೊಂಡಿರುವ ವ್ಯಕ್ತಿಯ ಖಾಸಗಿ ಬದುಕಿನ ಮುಖವಾಡವನ್ನು ಬಿಚ್ಚಿಡುವ ಪ್ರಯತ್ನವನ್ನು ಈ ನಾಟಕ ಯಶಸ್ವಿಯಾಗಿ ಮಾಡುತ್ತದೆ.ರಂಗಸಜ್ಜಿಕೆಯನ್ನು ಕಾವಾ ರಮೇಶ್ ಅವರು ನಾಟಕದ ಕಥಾವಸ್ತುವಿಗೆ ಪೂರಕವಾಗುವಂತೆ…

Read More

ನಗರದಲ್ಲಿ ಪೊಲೀಸರಿಂದ ರೌಡಿಗಳ ಪರೇಡ್

ಮೈಸೂರು; ನಗರದಲ್ಲಿ ಪೊಲೀಸರು ರೌಡಿಗಳ ಪರೇಡ್ ನಡೆಸಿದರು.ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ಸೂಚನೆಯಂತೆ, ಡಿಸಿಪಿಗಳಾದ ಡಾ:ಹರ್ಷ ಪ್ರಿಯಂವದ ಮತ್ತು ಶಿ ಸುಂದರ್ ರಾಜ್ ಕೆ.ಎಸ್ ಅವರ ನೇತೃತ್ವದಲ್ಲಿ ವಿಜಯನಗರ ಉಪವಿಭಾಗದ ರೌಡಿಗಳ ಪರೇಡ್ ನಡೆಸಲಾಯಿತು. ರೌಡಿ ನಿಗ್ರಹ ದಳದ ಈ ಕಾರ್ಯಾಚರಣೆಯಲ್ಲಿ, ಯಾವುದೇ ಕಾನೂನು ಬಾಹಿರ ಚಟುವಟಿಕೆ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಯಿತು. ಅಲ್ಲದೆ, ತಪುö್ಪ ಹಾದಿ ಬಿಟ್ಟು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕುವಂತೆ ಬುದ್ಧಿವಾದ ಹೇಳಲಾಯಿತು.

Read More

ಡಿ.ಬನುಮಯ್ಯ ಯುವ ಬ್ರಿಗೇಡ್ ವತಿಯಿಂದ ಬನುಮಯ್ಯ ಜಯಂತಿ ಆಚರಣೆ

ಮೈಸೂರು; ಧರ್ಮ ಪ್ರಕಾಶ್ ರಾವ್ ಬಹದ್ದೂರ್ ಡಿ ಬನುಮಯ್ಯನವರ 166 ನೇ ಜಯಂತಿಯನ್ನು ಇಂದು ಬನುಮಯ್ಯ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು. ಬನುಮಯ್ಯ ಅವರ ಪುತ್ಥಳಿಗೆ ಶಾಸಕ ಟಿ.ಎಸ್ ಶ್ರೀವತ್ಸ ಅವರು ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಮತ್ತು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ವಿಶೇಷವಾಗಿ ಈ ಬಾರಿಯ ಎಸ್…

Read More

ಹಿಂದೂ ಎನ್ನುವುದು ಒಂದು ರಿಲಿಜಿಯನ್ ಅಲ್ಲ, ಅದೊಂದು ಶ್ರೇಷ್ಠ ಜೀವನ ಶೈಲಿ; ಜಯರಾಮ್ ಬೊಳ್ಳಾಜೆ

ಮೈಸೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಸಮಾಜದ ಮೌಲ್ಯಗಳ ನೆಲಗಟ್ಟಿನ ಮೇಲೆ, ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾಣ ಎಂಬ ಮೂಲ ಮಂತ್ರವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ವಕ್ತಾರ ಜಯರಾಮ್ ಬೊಳ್ಳಾಜೆ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯ ಸಭಾಂಗಣದಲ್ಲಿ ನಡೆದ ಮೈಸೂರು ಮಹಾನಗರದ ವತಿಯಿಂದ ಪ್ರಮುಖ ನಾಗರೀಕ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ ಸ್ಥಾಪನೆಯ ಉದ್ದೇಶ, ಕಾರ್ಯಶೈಲಿ ಹಾಗೂ ಕಾರ್ಯವ್ಯಾಪ್ತಿಯನ್ನು ಸವಿವರವಾಗಿ ಪ್ರಸ್ತುತಪಡಿಸಿದರು.ಸಂಘವು ಹಿಂದೂ ಸಮಾಜದ ಮೌಲ್ಯಗಳ ನೆಲಗಟ್ಟಿನ ಮೇಲೆ, ವ್ಯಕ್ತಿ ನಿರ್ಮಾಣದಿಂದ…

Read More

ಎಸ್‌ಐಆರ್ ವಿಚಾರವಾಗಿ ಬಿಜೆಪಿ ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುವ ಮೂಲಕ ನಗೆಪಾಟಲಿಗೀಡಾಗಿದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಮೈಸೂರು: ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲ ದಿನಗಳಿಂದ ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುವ ಮೂಲಕ ನಗೆಪಾಟಲಿಗೀಡಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದರು.ಭಾನುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದ 13 ರಾಜ್ಯಗಳಲ್ಲಿ ಎಸ್‌ಐಆರ್ ಮಾಡಿ 6.5 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ 1…

Read More

ಪುಸ್ತಕಗಳು ಜ್ಞಾನ, ಸಂಸ್ಕಾರ, ಸೃಜನಶೀಲತೆ ಮತ್ತು ಚಿಂತನೆಯನ್ನು ಬೆಳೆಸುವ ಅತ್ಯುತ್ತಮ ಸಾಧನಗಳಾಗಿವೆ; ಸಂಸದ ಡಾ. ಸಿ.ಎನ್. ಮಂಜುನಾಥ್

ಮೈಸೂರು: ಪುಸ್ತಕಗಳು ಜ್ಞಾನ, ಸಂಸ್ಕಾರ, ಸೃಜನಶೀಲತೆ ಮತ್ತು ಚಿಂತನೆಯನ್ನು ಬೆಳೆಸುವ ಅತ್ಯುತ್ತಮ ಸಾಧನಗಳಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಒರೇಟರ್ಸ್ ಫೋರಂ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 10ನೇ `ಮೈಸೂರು ಸಾಹಿತ್ಯ ಸಂಭ್ರಮ 2026′ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ ಪುಸ್ತಕಗಳ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ. ಪುಸ್ತಕಗಳು ಜ್ಞಾನ, ಸಂಸ್ಕಾರ,…

Read More