
ಮೈಸೂರು; ರಾಷ್ಟಿçÃಯ ಗೀತೆ ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿ ಇದೇ ಸೆಪ್ಟೆಂಬರ್ 15 ರಿಂದ 5 ದಿನಗಳ ಕಾಲ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಿAದ 2 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಬಿಜೆಪಿಯ ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅದರಂತೆ ಮೈಸೂರು ವಿಭಾಗದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸೆಪ್ಟಂಬರ್ 15 ರಿಂದ 19 ರವರೆಗೆ ಪಾದಯಾತ್ರೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ವಂದೇ ಮಾತರಂನ 150 ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಈ ತೀರ್ಮಾನವನ್ನು ಭಾರತೀಯ ಜನತಾ ಪಕ್ಷವು ತೀವ್ರವಾಗಿ ಖಂಡಿಸಿದೆ. ಸರ್ಕಾರದ ನಿರ್ಧಾರ ದುರದೃಷ್ಟಕರವಾಗಿದ್ದು, ಇದು ವಂದೇ ಮಾತರಂ ಗೀತೆಗೆ ಮಾತ್ರವದಲ್ಲದೆ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ÷್ಯ ಹೋರಾಟಗಾರರಿಗೆ ಮಾಡಿರುವ ಘೋರ ಅವಮಾನವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ “ರಾಷ್ಟಿçÃಯ ಗೌರವಕ್ಕೆ ಅವಮಾನ ತಿದ್ದುಪಡಿ ತಡೆಗಟ್ಟುವಿಕೆ (ತಿದ್ದುಪಡಿ) ಕಾಯ್ದೆ 2026 ಅನ್ನು ಅನುಮೋದಿಸಿ, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಸಂವಿಧಾನತ್ಮಕವಾಗಿ ಕಡ್ಡಾಯಗೊಳಿಸಿದೆ. ಈ ಕಾನೂನಿನ ಮೂಲಕ ರಾಷ್ಟçಗೀತೆಗೆ ಇರುವ ಸಮಾನ ಗೌರವ ಮತ್ತು ಸ್ಥಾನಮಾನವನ್ನು ವಂದೇ ಮಾತರಂಗೆ ನೀಡಲಾಗಿದೆ.
ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ; ಅದು ಭಾರತದ ಸ್ವಾತಂತ್ರ÷್ಯ ಹೋರಾಟದ ಚೈತನ್ಯ, ತ್ಯಾಗ ಮತ್ತು ರಾಷ್ಟçಭಕ್ತಿಯ ಪ್ರತೀಕ. ಅಂತಹ ಐತಿಹಾಸಿಕ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವುದು, ಅದರ ಪರಂಪರೆ ಮತ್ತು ಸ್ವಾತಂತ್ರ÷್ಯ ಹೋರಾಟದ ಇತಿಹಾಸವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು ಮುಸ್ಲಿಂ ಲೀಗ್‌ನ ಒತ್ತಡಕ್ಕೆ ಮಣಿದು ವಂದೇ ಮಾತರಂನ ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಂಡಿತ್ತು. ಮತಾಂಧರ ಒತ್ತಡಕ್ಕೆ ಮಂಡಿಯೂರಿ ದೇಶದ ಸ್ವಾತಂತ್ರ÷್ಯ ಹೋರಾಟದೊಂದಿಗೆ ಅವಿನಾಭಾವ ಸಂಬAಧ ಹೊಂದಿರುವ ವಂದೇ ಮಾತರಂಗೆ ಅಂದೇ ಕಾಂಗ್ರೆಸ್ ಅಪಮಾನ ಮಾಡಿತ್ತು.
ಇದು ಸಂವಿಧಾನದ ಯಾವುದೇ ತೀರ್ಮಾನವಾಗಿರಲಿಲ್ಲ. ಸಂವಿಧಾನದಲ್ಲಿ ವಂದೇ ಮಾತರಂನನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸುವ ಯಾವುದೇ ತಿದ್ದುಪಡಿಯೂ ಆಗಿಲ್ಲ. ಅದು ಕಾಂಗ್ರೆಸ್ ಪಕ್ಷದ ರಾಜಕೀಯ ನಿರ್ಧಾರವಾಗಿತ್ತು.
24 ಜನವರಿ 1950ರಂದು ಭಾರತದ ಮೊದಲ ರಾಷ್ಟçಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ಮತ್ತು ಸ್ಥಾನಮಾನ ನೀಡಬೇಕೆಂಬ ನಿಲುವನ್ನು ಅಧಿಕೃತವಾಗಿ ವ್ಯಕ್ತಪಡಿಸಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಸ್ವಂತ ನಿರ್ಧಾರ ಕೈಗೊಳ್ಳುವ ರಾಜಕೀಯ ನೈತಿಕತೆಯನ್ನೇ ಕಳೆದುಕೊಂಡಿದೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆಯಬೇಕಾದ ದಯನೀಯ ಸ್ಥಿತಿಗೆ ತಲುಪಿದೆ. ಹೀಗಾಗಿ ತುಷ್ಟೀಕರಣ ರಾಜಕಾರಣಕ್ಕಾಗಿ ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿದೆ ಎಂದು ಟೀಕಿಸಿದ್ದಾರೆ.
ತಮ್ಮನ್ನು ತಾವು ಸಂವಿಧಾನದ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ನಾಯಕರು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವಂದೇ ಮಾತರಂನ ಆರು ಚರಣಗಳ ಬದಲಿಗೆ ಕೇವಲ ಎರಡು ಚರಣಗಳನ್ನು ಹಾಡಲು ಸೂಚಿಸಿರುವುದು ಅತ್ಯಂತ ಖಂಡನೀಯ.
ಅಲ್ಪಸAಖ್ಯಾತರ ಮತಗಳ ಪ್ರಶ್ನೆ ಬಂದಾಗ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮ ಅವಿವೇಕಿತನದ ನಿರ್ಧಾರವಾಗಿದೆ ಎಂದಿದ್ದಾರೆ.
ಎಂತಹ ದುರವಸ್ಥೆಗೆ ಕಾಂಗ್ರೆಸ್ ಕುಸಿದಿದೆಯಂದರೆ, ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ನೇಣುಗಂಬವೇರಿಸಿದರೂ ವಂದೇ ಮಾತರಂ ಹಾಡೇ ಹಾಡುತ್ತೇವೆ ಎನ್ನುತ್ತಿದ್ದರು.ಈಗ, ನೇಣುಗಂಬಕ್ಕೆ ಏರಿಸಿದರೂ ವಂದೇ ಮಾತರಂ ಹಾಡುವುದಿಲ್ಲ. ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯು ಅತ್ಯಂತ ಶೋಚನಿಯ ಹಾಗೂ ಖಂಡನೀಯವಾಗಿದೆ.
ಸ್ವಾತಂತ್ರ÷್ಯ ಹೋರಾಟಗಾರರ ತ್ಯಾಗದ ಸಂಕೇತವಾದ ವಂದೇ ಮಾತರಂಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಮಾನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಭಂಗ ಉಂಟಾದರೆ, ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಂದೇ ಮಾತರಂಗೆ ಕತ್ತರಿ ಹಾಕುವ ಓಲೈಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಒಪುö್ಪವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ತುಷ್ಟೀಕರಣ ರಾಜಕಾರಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.