
ಮೈಸೂರು: ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರು ದಿನನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ದೈಹಿಕ ಶ್ರಮವನ್ನು ಕೆಲಕಾಲ ಮರೆತು, ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಮೈಸೂರು ನಗರ ಪಾಲಿಕೆಯ ವತಿಯಿಂದ ನಗರದ ಒವಲ್ ಮೈದಾನದಲ್ಲಿ ಪೌರ ಕಾರ್ಮಿಕ ಸಿಬ್ಬಂದಿಗಾಗಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಮಹಿಳಾ ಪೌರ ಕಾರ್ಮಿಕರಿಗಾಗಿ ಹಗ್ಗ ಜಗ್ಗಾಟ, ಲೆಮನ್ ಸ್ಪೂನ್, ಥ್ರೋಬಾಲ್ ಹಾಗೂ ಬ್ಯಾಸ್ಕೆಟ್ಬಾಲ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಮಹಿಳಾ ಪೌರ ಕಾರ್ಮಿಕರು, ಇಂದು ಮೈದಾನದಲ್ಲಿ ಕ್ರೀಡಾಪಟುಗಳಾಗಿ ಕಾಣಿಸಿಕೊಂಡರು.
ಹಗ್ಗ ಜಗ್ಗಾಟದ ವೇಳೆ ತಂಡಗಳ ನಡುವೆ ಕಂಡುಬAದ ಪೈಪೋಟಿ, ಲೆಮನ್ ಸ್ಪೂನ್ ಸ್ಪರ್ಧೆಯಲ್ಲಿನ ಉತ್ಸಾಹ, ಥ್ರೋಬಾಲ್ ಮತ್ತು ಬ್ಯಾಸ್ಕೆಟ್ಬಾಲ್ನಲ್ಲಿನ ಚುರುಕುತನ ನೋಡುಗರ ಗಮನ ಸೆಳೆಯಿತು. ಗೆಲುವಿಗಾಗಿ ಪೈಪೋಟಿ ನಡೆಸಿದರೂ, ಸ್ಪರ್ಧೆಗಿಂತ ಹೆಚ್ಚಾಗಿ ಪರಸ್ಪರರೊಂದಿಗೆ ಸಂತಸ ಹಂಚಿಕೊAಡ ಕ್ಷಣಗಳು ವಿಶೇಷವಾಗಿದ್ದವು.
ಇನ್ನು ಪುರುಷ ಪೌರ ಕಾರ್ಮಿಕ ಸಿಬ್ಬಂದಿಗಾಗಿ ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಪೌರ ಕಾರ್ಮಿಕರ ಮುಖದಲ್ಲಿ ಗೆಲುವಿನ ಉತ್ಸಾಹದ ಜೊತೆಗೆ ಬಹುದಿನಗಳ ಬಳಿಕ ಸಿಕ್ಕ ವಿಶ್ರಾಂತಿಯ ಸಂತಸವೂ ಕಾಣಿಸಿಕೊಂಡಿತು.
ಈ ಕ್ರೀಡಾಕೂಟದಲ್ಲಿ ಮೈಸೂರು ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ಖುದ್ದಾಗಿ ಭಾಗವಹಿಸಿ ಪೌರ ಕಾರ್ಮಿಕರನ್ನು ಪ್ರೋತ್ಸಾಹಿಸಿದ್ದು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಿಬ್ಬಂದಿಯೊAದಿಗೆ ಬೆರೆತು, ಅವರ ಉತ್ಸಾಹವನ್ನು ಹೆಚ್ಚಿಸುವ ಮೂಲಕ ಆಯುಕ್ತರು ಮಾನವೀಯ ಸ್ಪಂದನೆ ಮೆರೆದರು.


