
ಮೈಸೂರು; ಚಿತ್ರ ನಟ ಡಾ. ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಅರುಣರಾಗ ಕ್ರಿಯೇಷನ್ಸ್ ವತಿಯಿಂದ “ವಿಷ್ಣು ವೈಭವ ಸಂಗೀತೋತ್ಸವ” ಎಂಬ ಸಂಗೀತ ಕಾರ್ಯಕ್ರಮವನ್ನು ಮೈಸೂರಿನ ಉದ್ದೂರ್ ಗೇಟ್ನಲ್ಲಿರುವ ಡಾ. ವಿಷ್ಣುವರ್ಧನ್ ಸ್ಮಾರಕದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ರಿಯೇಷನ್ಸ್ ನ ಗುರುರಾಜ್ ತಿಳಿಸಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ರವರ ಚಲನಚಿತ್ರ ಗೀತೆಗಳನ್ನು ಹಾಡಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಡಾ. ಭಾರತಿ ವಿಷ್ಣುವರ್ಧನ್ ಆಗಮಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಜೂನಿಯರ್ ವಿಷ್ಣುವರ್ಧನ್, ಜಯಶ್ರೀ ರಾಜ್ ಹಾಗು ಅರುಣಾ ರಾಗ ಕ್ರಿಯೇಷನ್ಸ್ನ ಡಾ. ರೇಖಾ ಅರುಣ್, ಗುರುರಾಜ್, ಮಮ್ಮೋಹನ್ ರಾಜ್, ಉಮಾ, ಮಧು ಹಾಗೂ ತಂಡದ ಗಾಯಕ ಗಾಯಕಿಯರು ಹಾಡಿ ಕಲಾಪ್ರೇಮಿಗಳನ್ನ ರಂಜಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಷ್ಣುರಾಗ ಹೊಸ ಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.