Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾದಲ್ಲಿ ಜಾನಪದ ಕಲಾವಿದರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಬಹಿಷ್ಕಾರ ಹಾಕುತ್ತೇವೆ; ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಎಚ್ಚರಿಕೆ


ಮೈಸೂರು; ನಾಡ ಹಬ್ಬ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಜಾನಪದ ಕಲಾವಿದರಿಗೆ ಹೆಚ್ಚಿನ ಸಂಭಾವನೆ ಮತ್ತು ಉತ್ತಮವಾದ ವಸತಿ, ಊಟದ ವ್ಯವಸ್ಥೆ ಮತ್ತು ಕಲಾತಂಡಗಳ ಪ್ರಯಾಣ ವೆಚ್ಚವನ್ನು ನೀಡಲು ಸಂಬAಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ದಸರಾವನ್ನು ಬಹಿಷ್ಕರಿಸಲಾಗುವುದು ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಎಚ್ಚರಿಕೆ ನೀಡಿದೆ.
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಜೋಗಿಲ ಸಿದ್ದರಾಜು,
ಮೈಸೂರು ದಸರಾವು ವಿಶ್ವವಿಖ್ಯಾತವಾಗಿರುವುದು ಪ್ರಮುಖವಾಗಿ ಜಂಬೂ ಸವಾರಿಯ ಆಕರ್ಷಣೆಯಿಂದ. ಈ ಜಂಬೂ ಸವಾರಿಯಲ್ಲಿ ಭಾಗವಹಿಸುವ ಜಾನಪದ ಕಲಾವಿದರನ್ನು ಪ್ರತಿವರ್ಷ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಬಹಳ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸುವುದು ಒಂದು ಹೆಗ್ಗಳಿಕೆ ಎಂಬ ಹಿರಿಮೆಯಿಂದ ರಾಜ್ಯದ ಮೂಲೆಮೂಲೆಗಳಿಂದ ಬಾಡಿಗೆ ವಾಹನಗಳನ್ನು ಮಾಡಿಕೊಂಡು ತಮ್ಮ ವೇಷಭೂಷಣಗಳನ್ನು, ವಾದ್ಯ ಪರಿಕರಗಳನ್ನು ತುಂಬಿಕೊAಡು ಒಂದು ತಂಡದಲ್ಲಿ 10 ರಿಂದ 15 ಜನ ಕಲಾವಿದರು ಮೈಸೂರಿಗೆ ಬರುತ್ತಾರೆ. ಅಲ್ಲಿಗೆ ಬಂದು ಇಳಿದ ಮೇಲೆ ಅವರಿಗೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಊಟದ ವ್ಯವಸ್ಥೆಯಾಗಲಿ ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ ಇರಬೇಕಾಗಿದೆ.
ನಮ್ಮ ಒಕ್ಕೂಟವು ಪ್ರತಿ ವರ್ಷ ಮನವಿ ಮಾಡಿದಾಗಲೂ ಮುಂದಿನ ವರ್ಷ ಸರಿಪಡಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಯಾವುದೇ ರೀತಿ ಕ್ರಮಕೈಗೊಳ್ಳದೇ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರನ್ನು ಪ್ರತಿವರ್ಷ ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ. ಸಾಂಸ್ಕöÈತಿಕವಾಗಿ ದೇಶ ಬದುಕುವುದಾದರೆ ಅದು ಕಲಾವಿದರಿಂದ ಮಾತ್ರ ಸಾಧ್ಯ ಜಾನಪದ ಕಲೆಯಲ್ಲಿ ಮತ್ತು ಕಲಾವಿದರಲ್ಲಿ ಹೆಚ್ಚು ಜನ ದಲಿತ, ಹಿಂದುಳಿತ ಹಾಗೂ ಅಲ್ಪಸಂಖ್ಯಾತರುಗಳು ಇದ್ದಾರೆ ಎಂದು ಹೇಳಿದರು.
ವೀಣಾ, ಮೃದಂಗ, ಸಿತಾರ್ ನಂತಹ ಶಾಸ್ತಿçÃಯ ಕಲೆಗಳನ್ನು ಮೊದಲ ದರ್ಜೆಯಲ್ಲಿ ಜನಪದ ಗಾಯನ, ನೃತ್ಯ, ತಮಟೆ ವಾದನದಂತಹ ಮೂಲ ಜಾನಪದ ಕಲಾವಿದರನ್ನು ಎರಡನೇ ದರ್ಜೆಯಲ್ಲಿ ನೋಡಲಾಗುತ್ತಿದೆ. ದೇಶದ ಮೂಲ ಸತ್ವ ಮತ್ತು ಬಣ್ಣ ಇರುವ ಜಾನಪದ ಕಲೆಗೂ ಮೊದಲನೇ ದರ್ಜೆ ಸ್ಥಾನ ಸಿಗಬೇಕೆಂಬುದು ನಮ್ಮ ಒತ್ತಾಯ.ಶಾಸ್ತಿçÃಯ ಕಲೆ ಮತ್ತು ಜಾನಪದ ಕಲೆ ಎರಡು ಕಣ್ಣುಗಳಿದ್ದಂತೆ. ಆದರೆ ಒಂದು ಕಣ್ಣಿಗೆ ಬೆಣ್ಣೆ – ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದಾರೆ. ಈ ತಾರತಮ್ಯವನ್ನು ಹೊಗಲಾಡಿಸಿ ಎರಡಕ್ಕೂ ಸಮಾನ ಗೌರವ, ಸ್ಥಾನಮಾನ ಮತ್ತು ಅವಕಾಶ ಸಿಗಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.
ಈ ಬಾರಿ ಅಕ್ಟೋಬರ್ 11 ರಿಂದ 21 ರವರೆಗೆ ನಡೆಯುವ ದಸರಾ ಉತ್ಸವದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಉಗ್ರವಾದ ಹೋರಾಟವನ್ನು ಹಮ್ಮಿಕೊಂಡು ದಸರಾವನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.