
ಮೈಸೂರು: ಆರ್‌ಎಸ್‌ಎಸ್ ಶತಮಾನದ ಸೇವೆ-ಏಕತೆ- ತ್ಯಾಗದ ವಿಶ್ವರೂಪ ದರ್ಶನ ನಗರದ ಶ್ರೀ ಮಾಧವ ಕೃಪಾ ಗಣೇಶೋತ್ಸವದ ಈ ಬಾರಿಯ ವೈಶಿಷ್ಟ÷್ಯತೆ. ಈ “ಪ್ರದರ್ಶಿನಿ”ಯಲ್ಲಿ ಒಂದು ಸುತ್ತು ಸಾಗಿ ಬಂದರೆ, ಸಂಘ ಪರಿವಾರದ ಸಾಧನಾ ಪಥದ ಬ್ರಹ್ಮಾಂಡ ದರ್ಶನವಾಗುತ್ತದೆ. ಕೊನೆಯಲ್ಲಿ ನೋಡುಗರನ್ನು ಕಾದಿರುವ ಕನ್ನಡಿ, ಈ ದೇಶದ ಭವಿಷ್ಯ ಯಾರು ಅನ್ನುವ ಪ್ರಶ್ನೆಗೆ ಉತ್ತರವಾಗುತ್ತದೆ.
ಒಳಗೆ ಬನ್ನಿ-ತಿಳಿಯಿರಿ- ಅನುಭವಿಸಿ” ಎನ್ನುತ್ತಲೇ ನೋಡುಗರನ್ನು ಆಹ್ವಾನಿಸುವ ಈ “ಪ್ರದರ್ಶಿನಿ” ಸಂಘ ಹುಟ್ಟಿದ್ದು ಯಾಕೆ? ಅದು ಕೆಲಸ ಮಾಡುವುದು ಹೇಗೆ? ನೂರು ವರ್ಷಗಳಲ್ಲಿ ಏನು ಮಾಡಿದೆ, ಹಾಗು ಇಂದಿಗೂ ಅದರ ಬಗ್ಗೆ ಇರುವ ಪ್ರಶ್ನೆಗಳೇನು ಎನ್ನುತ್ತಲೇ, ನಿಮ್ಮ ತೀರ್ಮಾನವನ್ನು ನೀವೇ ಮಾಡಿ ಎಂದು ಸಾರಿ ಹೇಳುತ್ತದೆ. ಶಾಖೆ ಎಂದರೇನು? ಅಲ್ಲಿ ದಿನ ನಿತ್ಯ ಸೇರಲು ಕಾರಣ ಏನು? ಶಾಖೆಯಲ್ಲಿ ಏನು ಇರುತ್ತದೆ, ಹೀಗೆ ಸಂಘದ ಬಗ್ಗೆಗಿರುವ ಪ್ರತಿ ಪ್ರಶ್ನೆಗೂ ಉತ್ತರ ಇಲ್ಲಿದೆ. ನೂರು ವರ್ಷಗಳ ಹಿಂದೆ, ಕೇಶವ್ ಬಲಿರಾಮ್ ಹೆಗಡೇವಾರ್ ಜಿ ಸಂಘವನ್ನು ಹೇಗೆ ಸ್ಥಾಪಿಸಿದರು? ಸ್ವಾತಂತ್ರ÷್ಯ ಹೋರಾಟದಲ್ಲಿ ಸಂಘದ ಪಾತ್ರ ಏನು? ಹೀಗೆ ಪ್ರತಿ ಪ್ರಶ್ನೆಗಳಿಗೂ ಇಲ್ಲಿದೆ ನಿಖರ ಉತ್ತರ.
ಸ್ವಾತಂತ್ರ÷್ಯ ಹೋರಾಟದಲ್ಲಿ ಸಂಘ ಪಾಲ್ಗೊಂಡಿಲ್ಲ ಅನ್ನುವ ಆರೋಪಕ್ಕೆ ಇಲ್ಲಿ ಸಮರ್ಪಕ ಉತ್ತರವಿದೆ. ಸಂಘ ಪರಿವಾರದ ಹಲವಾರು ಮಂದಿ ದೇಶದ ಸ್ವಾತಂತ್ರ÷್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಆದರೆ ಸಂಘ, ಒಂದು ಸಂಘಟನೆಯಾಗಿ ಯಾವ ನಿಲುವು ತೆಗೆದುಕೊಂಡಿತ್ತು ಅನ್ನುವ ಪ್ರಶ್ನೆಗೆ ಉತ್ತರ ಬೇಕಾದರೆ ಈ ಪ್ರದರ್ಶಿನಿಯತ್ತ ಹೆಜ್ಜೆ ಹಾಕಬಹುದು.
ಸಾಮಾಜಿಕ ಸಮರಸತೆ,ಕುಟುಂಬ ಪ್ರಭೋದನ, ಪರಿಸರ ಸ್ನೇಹಿ ಬದುಕು, “ಸ್ವ”ದ ಅರಿವು, ಹಾಗು ನಾಗರೀಕ ಕರ್ತ್ಯವ್ಯ ಹೀಗೆ ಪ್ರತಿಯೊಂದು ವಿಷಯದ ಬಗ್ಗೆಗೂ ಇಲ್ಲಿ ಮಾಹಿತಿ ಇದೆ. ಮುಸ್ಲಿಮರು-ಕ್ರಿಶ್ಚಿಯನ್ನರು ಸಂಘವನ್ನು ಸೇರ್ಪಡೆ ಆಗ ಬಹುದೇ ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಆಡಳಿತಗಾರರು ಬದಲಾಗುವುದಷ್ಟೇ ಸಾಕಾಗುವುದಿಲ್ಲ; ಬದಲಿಗೆ ಸಮಾಜವೂ ಒಳಗಿನಿಂದ ಬಲವಾಗಬೇಕು ಅದಕ್ಕೆ ಬೇಕಾಗಿರುವುದು ಆತ್ಮವಿಶ್ವಾಸ, ಚಾರಿತ್ರ÷್ಯ, ಒಗ್ಗಟ್ಟು ಮತ್ತು ಸಂಘಟನೆ ಎನ್ನುವ ಈ ಪ್ರದರ್ಶಿನಿ, ಸಂಘದಲ್ಲಿ ಭಗವಾದ್ವಜದ ಪ್ರಾಮುಖ್ಯತೆಯನ್ನೂ ವಿವರಿಸುತ್ತದೆ.
ಝೆನ್ ಜಿ ಬಗ್ಗೆ ನಮ್ಮ ಸಮಾಜದಲ್ಲಿ ಇಂದು ಬಹುವಾಗಿ ಚರ್ಚಿತವಾಗುತ್ತಿದೆ. ಸಂಘ ಪರಿವಾರದಲ್ಲಿ ಝೆನ್ ಜಿ ಪಾಲ್ಗೊಳ್ಳುವಿಕೆಯ ಬಗ್ಗೆಗಿನ ನಿಖರ ಅಂಕಿ ಅಂಶ ಇಲ್ಲಿದೆ. ಈ ಮೂಲಕ ದೇಶ ಕಟ್ಟುವಲ್ಲಿ ಝೆನ್ ಜಿ ಹೇಗೆ ತಮ್ಮ ಬದುಕನ್ನು ಸಮರ್ಪಿಸಿಕೊಳ್ಳುತ್ತಿದ್ದರೆ ಅನ್ನುವ ಮಾಹಿತಿ ಈ ಪ್ರದರ್ಶಿನಿಯ ಇನ್ನೊಂದು ಹೈಲೈಟ್ಸ್.
ಸಂಘ ಪರಿವಾರ, ಸಂಘ ಪರಿವಾರದಲ್ಲಿ ಮಹಿಳೆಯರ ಪಾತ್ರ, ಸಂಘ ಪರಿವಾರದ ಸಂಘಟನೆಗಳು, ಸಂಘ ಪರಿವಾರದ ಸಮಾಜ ಸೇವಾ ಹಾದಿ ಹೀಗೆ ಎಲ್ಲವೂ ನೋಡುಗರ ಮನ ಸೆಳೆಯುತ್ತದೆ.