
ಮೈಸೂರು; ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್ ಸಂಸ್ಥೆಗಳ ಕೊಡುಗೆಅನನ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ಹೇಳಿದರು.
ಮೈಸೂರಿನ ಹೂಟಗಳ್ಳಿಯಲ್ಲಿ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜು ಹಾಗೂ ಸಭಾಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸರ್ಕಾರವೇ ಎಲ್ಲರಿಗೂ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ವ್ಮಠ ಮಾನ್ಯಗಳು ಮಾಡುತ್ತಾ ಬರುತ್ತಿವೆ.ಜೆಎಸ್‌ಎಸ್ ಸಂಸ್ಥೆ ಕರ್ನಾಟಕವಲ್ಲದೇ, ತಮಿಳುನಾಡು, ನೋಯಿಡಾ, ದೆಹಲಿ, ಜಮ್ಮು ರಾಜ್ಯಗಳಲ್ಲಿ,ಅಲ್ಲದೆ ಮಾರಿಷಸ್, ಅಮೆರಿಕ, ದುಬೈಗಳಲ್ಲೂ ಸಂಸ್ಥೆಗಳನ್ನು ಸ್ಥಾಪಿಸಿ, ವಿಶ್ವದಾದ್ಯಂತ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆಯನ್ನುಸಲ್ಲಿಸುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸುತ್ತೂರು ವ್ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಇದೊಂದು ಜ್ಞಾನ ದೇಗುಲ.ಮನಸ್ಸನ್ನು ವಿಕಾಸ ಮಾಡಿಕೊಳ್ಳುವ ಮಂದಿರ.ಸAಪಾದಿಸುವ ಜ್ಞಾನವನ್ನು ಯಾರಿಂದಲೂ ಅಪಹರಿಸಲಾಗದು.ಅದಕ್ಕೆ ಯಾವ ಪರಿಧಿಯೂ ಇರುವುದಿಲ್ಲ. ರಾಜೇಂದ್ರ ಶ್ರೀಗಳ ಕೃಪೆಯಿಂದ ಇಂದು ಜೆಎಸ್‌ಎಸ್ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು
ಕAಪ್ಯೂಟರ್ ಲ್ಯಾಬನ್ನು ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ಸುತ್ತೂರು ಮಠವು ಬಡವರು, ನಿರಾಶ್ರಿತರು ಹಾಗೂ ದೀನದಲಿತರ ಮಕ್ಕಳಿಗೆ ಆಶ್ರಯವನ್ನು ನೀಡಿ, ವಿದ್ಯಾವಂತರನ್ನಾಗಿ ಮಾಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿ, ಬದುಕನ್ನು ರೂಪಿಸಿಕೊಂಡಿದ್ದಾರೆ.ಸೂರ್ಯ ಚಂದ್ರ ಇರುವವರೆಗೂ ಸುತ್ತೂರು ಶ್ರೀಮಠ ಹಾಗೂ ಜೆಎಸ್‌ಎಸ್‌ಸಂಸ್ಥೆ ಇರಲೆಂದು ನುಡಿದರು.
ಗ್ರಂಥಾಲಯ ಉದ್ಘಾಟಿಸಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಎಂಬುದೇ ಒಂದು ಬ್ರಾö್ಯಂಡ್ ಆಗಿದೆ. ಈ ಸಂಸ್ಥೆಯಲ್ಲಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯುತ್ತಾರೆ ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಶಿಕ್ಷಣವು ಕಟ್ಟಕಡೆಯ ವ್ಯಕ್ತಿಗೂತಲುಪಬೇಕು ಎಂಬುದು ಜೆಎಸ್‌ಎಸ್ ಸಂಸ್ಥೆಯ ಧ್ಯೇಯವಾಗಿದೆ.ಮೈಸೂರಿನಲ್ಲಿ ಅನೇಕ ಶಾಲೆಗಳ ಕಟ್ಟಡಗಳು ಶಿಥಿಲವಾಗಿವೆ. ಮೂಲಸೌಲಭ್ಯಗಳ ಕೊರತೆಯಿದೆ.ಅವುಗಳ ಜೀರ್ಣೊದ್ಧಾರ ಅಥವಾ ಪುನರ್ ನಿರ್ಮಾಣ ಕಾರ್ಯವನ್ನು ಸರ್ಕಾರದಿಂದ ಕೂಡಲೇ ಪ್ರಾರಂಭಿಸಬೇಕೆAದು ಸಚಿವರಿಗೆ ಕೋರಿಕೆ ಸಲ್ಲಿಸಿದರು.
ಶ್ರೀ ಸಾಲೂರು ಬೃಹನ್ಮಠದಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ದಶಕಗಳ ಹಿಂದೆ ಸಾಕ್ಷರತೆಯ ಪ್ರಮಾಣ ಕಡಿಮೆ ಇತ್ತು.ಆದರೆ ಇಂದು ಶೇ.75 ಸಾಕ್ಷರತೆ ಇದೆ.ಇದರ ಹಿಂದೆ ಮಠಮಾನ್ಯಗಳು ನಡೆಸುವ ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು. ಸುತ್ತೂರು ಮಠದ ರಾಜೇಂದ್ರ ಶ್ರೀಗಳ ದೂರದರ್ಶಿತ್ವದಿಂದ ಸುತ್ತೂರು ಮಠವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ.ವಿದ್ಯಾರ್ಥಿಗಳು ನಿರಂತರ ಶ್ರದ್ದೆ, ಪರಿಶ್ರಮ ಮತ್ತು ಕಲಿಕೆಯಿಂದ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.ಶಿಕ್ಷಣವು ಇಂದಿನ ಜೀವನಕ್ಕೆ ಬಹಳ ಮುಖ್ಯವಾಗಿದೆ ಎಂದು ನುಡಿದರು.
ಚಂದ್ರವನಆಶ್ರಮದಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ ಮಾತನಾಡಿ, ನಾಡಿಗೆ ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿವೆ. ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನೂ ಬೆಳೆಸುತ್ತಿವೆ. ಮಠಗಳು ಪಂಚ ದಾಸೋಹಗಳಾದ ಅನ್ನ, ಶಿಕ್ಷಣ, ಆಶ್ರಯ, ಆರೋಗ್ಯ ಹಾಗೂ ಅರಿವು ಇವುಗಳಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ, ಪ್ರಜ್ಞಾವಂತರನ್ನಾಗಿಸುತ್ತಿವೆ. ಮಠಮಾನ್ಯಗಳು ಸೋಹಂ ಎಂದೆನಿಸದೇದಾಸೋಹA ಎಂಬ ತತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸುತ್ತೂರು ಮಠವು ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹೂಟಗಳ್ಳಿ ನಗರಸಭೆಯ ಅಧಿಕಾರಿಗಳು,ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿ ವರ್ಗದವರು, ಪೋಷಕರು, ಬಡಾವಣೆಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೈಸೂರಿನಹೂಟಗಳ್ಳಿಯಲ್ಲಿ ಜೆಎಸ್‌ಎಸ್ ಪದವಿಪೂರ್ವಕಾಲೇಜುಕಟ್ಟಡ ಹಾಗೂ ಶ್ರೀ ಘನಲಿಂಗ ಶಿವಯೋಗಿ ಸಭಾಭವನಉದ್ಘಾಟನೆಯುಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನೇರವೇರಿತು.ಶ್ರೀ ಕೆ.ವಿವೇಕಾನಂದ,ಶ್ರೀ ಜಿ.ಟಿ. ದೇವೇಗೌಡ, ಸಚಿವರಾದ ಶ್ರೀ ಎಸ್. ಮಧುಬಂಗಾರಪ್ಪ, ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಹಾಗೂ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳಿದ್ದಾರೆ.
ಮೈಸೂರಿನ ಹೂಟಗಳ್ಳಿಯಲ್ಲಿ ಜೆಎಸ್‌ಎಸ್ ಪದವಿಪೂರ್ವಕಾಲೇಜುಕಟ್ಟಡ ಹಾಗೂ ಶ್ರೀ ಘನಲಿಂಗ ಶಿವಯೋಗಿ ಸಭಾಭವನಉದ್ಘಾಟನೆಯುಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನೇರವೇರಿತು.ಶ್ರೀ ಎಸ್.ಪಿ.ಮಂಜುನಾಥ್, ಸಾಲೂರು ಮಠದ ಶ್ರೀಗಳು, ಶ್ರೀ ಕೆ.ವಿವೇಕಾನಂದ,ಸಚಿವರಾದ ಶ್ರೀ ಎಸ್. ಮಧುಬಂಗಾರಪ್ಪ,ಶ್ರೀ ಜಿ.ಟಿ. ದೇವೇಗೌಡಹಾಗೂ ಡಾ. ಸಿ.ಜಿ. ಬೆಟಸೂರಮಠರವರಿದ್ದಾರೆ.