
ಮೈಸೂರು: ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠಕ್ಕೆ ತೆರಳಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾನುವಾರ ಮೈಸೂರು ದಸರಾ ಮಹೋತ್ಸವ ಸಮಿತಿ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡುವ ಮೂಲಕ ದಸರಾ ಉದ್ಘಾಟನೆಗೆ ಆಹ್ವಾನಿಸಿದೆ.
ದಸರಾ ಮಹೋತ್ಸವದ ವಿಶೇಷಾಧಿಕಾರಿಯಾದ ಮೈಸೂರು ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಜಿ ಅವರು ದಸರಾ ಸ್ವಾಗತ ಸಮಿತಿಯೊಂದಿಗೆ ಕೊಪ್ಪಳದ ಗವಿಮಠಕ್ಕೆ ತೆರಳಿ, ಅಭಿನವ ಗವಿಸಿದ್ದೇಶ್ವರ ಸ್ವಾಮ್ಭಿಜಿಯವರನ್ನು ಭೇಟಿ ಮಾಡಿ, ಮೈಸೂರು ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಯಶಸ್ವಿಗೊಳಿಸುವಂತೆ ಗೌರವ ಪೂರ್ವಕವಾಗಿ ಆಹ್ವಾನ ಪತ್ರಿಕೆಯನ್ನು ನೀಡಿದರು.
ಮೈಸೂರಿನಿಂದ ಆಗಮಿಸಿದ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ವರ್ಣಿತ್ ನೇಗಿ ಅವರೊಂದಿಗೆ ಗವಿಮಠಕ್ಕೆ ಆಗಮಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ಕಾರ್ಯಕ್ರಮದ ಉದ್ಘಾಟನೆ ಅಕ್ಟೋಬರ್ ೧೧ ರಂದು ನಡೆಯಲಿದೆ. ತಾವು ಕಾರ್ಯಕ್ರಮಕ್ಕೆ ಆಗಮಿಸಿ ದಸರಾ ಉತ್ಸವವನ್ನು ಉದ್ಘಾಟಿಸಬೇಕು ಎಂದು ದಸರಾ ಮಹೋತ್ಸವದ ಸ್ವಾಗತ ಸಮಿತಿಯಿಂದ ಆಹ್ವಾನ ಪತ್ರಿಕೆಯನ್ನು ನೀಡುತ್ತಿದ್ದೇವೆ ಎಂದು ಇದೆ ವೇಳೆ ಮೈಸೂರು ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಜಿ ಅವರು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಸದಸ್ಯರಾದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಯುಕೇಶ ಕುಮಾರ, ಶ್ರೀ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಉಪ ಕಾರ್ಯದರ್ಶಿ ಎಂ ಬಸವರಾಜ ಅವರು ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಪ್ರಸಾದ ವ್ಯವಸ್ಥೆ: ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಶ್ರೀ ಗವಿಸಿದ್ದೇಶ್ವರ ಶ್ರೀಗಳು ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಸದಸ್ಯರಿಗೆ ಆಹ್ವಾನ ನೀಡಿದರು. ಜಿಲ್ಲಾಧಿಕಾರಿಗಳಾದ ಲಕ್ಷಿ÷್ಮಕಾಂತ ರೆಡ್ಡಿ ಜಿ, ಮೈಸೂರು ಜಿಪಂ ಸಿಇಓ ಯುಕೇಶ ಕುಮಾರ ಅವರು ಗವಿಮಠದ ಪ್ರಸಾದ ನಿಲಯಕ್ಕೆ ತೆರಳಿ ಕೊಪ್ಪಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಅವರೊಂದಿಗೆ ಗವಿಮಠದಲ್ಲಿ ಪ್ರಸಾದ ಸ್ವೀಕರಿಸಿದರು. ಪ್ರಸಾದ ಸೇವನೆ ಬಳಿಕ ಲಕ್ಷಿ÷್ಮಕಾಂತ ರೆಡ್ಡಿ ಜಿ ಹಾಗೂ ಸಿಇಓ ಯುಕೇಶ ಕುಮಾರ ಅವರು ಗವಿಮಠದ ಬೆಟ್ಟ ಏರಿ ಕರ್ತÈ ಗದ್ದುಗೆಯ ದರ್ಶನ ಪಡೆದುಕೊಂಡರು.
ಜಿಲ್ಲಾಧಿಕಾರಿಗಳಿAದ ಹರ್ಷ: ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಲಕ್ಷಿ÷್ಮಕಾಂತ ರೆಡ್ಡಿ ಜಿ ಹಾಗೂ ಸ್ವಾಗತ ಸಮಿತಿಯ ಸದಸ್ಯರು ಗವಿಮಠದ ಹಸಿರು ಆವರಣ ಹಾಗೂ ಸ್ವಚ್ಛಂದ ಪರಿಸರವನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಜನಸಾಗರ ಮತ್ತು ಧಾರ್ಮಿಕ ಮಹತ್ವದಿಂದಾಗಿ ದಕ್ಷಿಣ ಭಾರತದ ಕುಂಬ ಮೇಳ ಎಂದೇ ಕರೆಯುವ ಗವಿಮಠದ ಜಾತ್ರೋತ್ಸವದ ಚಿತ್ರಾವಳಿಗಳನ್ನು ವೀಕ್ಷಿಸಿ ಸಂತಷ ವ್ಯಕ್ತಪಡಿಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ದವಸ-ಧಾನ್ಯಗಳೊಂದಿಗೆ ಜಾತ್ರೆಗೆ ಆಗಮಿಸಿ ವಿಶೇಷವಾಗಿ ನಡೆಯುವ ಗವಿಮಠದ ಜಾತ್ರೆಯ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.