
ಕೆ.ಆರ್.ನಗರ; ದೇಶದ ಅಭಿವೃದ್ದಿ ಮತ್ತು ಮುಂದಿನ ತಲೆಮಾರಿನ ಭವಿಷ್ಯದ ದೃಷ್ಠಿಯಿಂದ ನರೇಂದ್ರಮೋದಿಯವರ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರ್ಜುನ್ಪಾರ್ಥ ಹೇಳಿದರು.
ಪಟ್ಟಣದ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶ, ಸೇವಾ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ೨೦೨೯ರಲ್ಲೂ ಮೋದಿಯವರೆ ಪ್ರಧಾನಿಯಾಗುವಂತೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು, ಅಭಿಮಾನಿಗಳು, ಹಿತೈಷಿಗಳು ಸಂಘಟನೆಗೆ ಒತ್ತುನೀಡುವಂತೆ ತಿಳಿಸಿದರು.
ಮೋದಿಯವರು ಪ್ರಧಾನಿಯಾದ ನಂತರ ಅವರ ವಿರುದ್ದ ಹಲವಾರು ರೀತಿಯ ರಾಜಕೀಯ ವಿರೋಧ ಹಾಗೂ ಪ್ರತಿಭಟನೆಗಳು ನಡೆದಿವೆ. ನೋಟುಅಮಾನ್ಯೀಕರಣ, ವಿದೇಶಪ್ರವಾಸ, ಅವರು ತೊಡುವಬಟ್ಟೆ, ಸಿಎಎ, ಕೋವಿಡ್ಲಸಿಕೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಕೇಂದ್ರ ಸರಕಾರದ ವಿರುದ್ದ, ಮೋದಿ ವಿರುದ್ದ ಆರೋಪಗಳನ್ನು ಮಾಡಲಾಗಿದೆ. ಇದೀಗ ಎಸ್ಐಆರ್ ವಿಚಾರದಲ್ಲಿಯೂ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.
ನರೇAದ್ರಮೋದಿಯವರು ಅಧಿಕಾರವನ್ನು ವೈಯುಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳದೆ ದೇಶದ ಭವಿಷ್ಯಕ್ಕಾಗಿ ದುಡಿಯುತ್ತಿದ್ಧಾರೆ. ಸಾಮಾನ್ಯವಾಗಿ ರಾಜಕಾರಿಣಿಗಳು ತಮ್ಮ ಹಾಘೂ ಕುಟುಂಬದ ಭವಿಷ್ಯಕ್ಕಾಗಿ ಆಸ್ತಿ,ಹಣ ಸಂಪಾದನೆಗೆ ಮುಂದಾಗುತ್ತಾರೆ, ಆದರೆ ಮೋದಿಯವರು ದೇಶದ ಮುಂದಿನ ತಲೆಮಾರಿಗಾಗಿ ಉತ್ತಮ ಭಾರತವನ್ನು ನಿರ್ಮಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಶ್ರಿಧರ್ಮ, ನಗರಾಧ್ಯಕ್ಷ ಬ್ಯಾಂಕ್ರಾಘು, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಪ್ರವೀಣ್ಶಿವಾಜಿ, ಉಪಾಧ್ಯಕ್ಷ ತಗಡೂರುಬಸವರಾಜು, ತಾಲೂಕು ಮಹಿಳಾಮೋರ್ಚಾ ಕಾರ್ಯದರ್ಶಿ ನಾಗಶ್ರೀ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಆರ್.ಮಂಜು ವಕ್ತಾರ ಗೋಪಾಲ್ರಾಜ್ ಮತ್ತಿತರರು ಮಾತನಾಡಿದರು.
ಮುಖಂಡರಾದ ಜಗದೀಶ್, ಧರ್ಮೇಶ್ನಾಯಕ್, ಕಿರಣ್, ಶ್ರೀಪಾರ್ಥ, ಗಾಯಿತ್ರಿ, ಸುನಿತಬಾಯಿ, ದಾಕ್ಷಾಯಿಣಿ, ಪುರುಷೋತ್ತಮ, ಶಶಿಧರಮೂರ್ತಿ, ವೃಷಭೇಂದ್ರಪ್ಪ ಮತ್ತಿತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಜಾಥಾದೊಂದಿಗೆ ತೆರಳಿ ಪಟ್ಟಣದ ಶ್ರೀಕೃಷ್ಣರಾಜೇಂದ್ರ ವೃತ್ತದಲ್ಲಿರುವ ಶ್ರೀಕೃಷ್ಣರಾಜೇಂದ್ರ ಪ್ರತಿಮೆ ಆವರಣವನ್ನು ಸ್ವಚ್ಚಗೊಳಿಸಿ ಗೌರವ ಸಲ್ಲಿಸಲಾಯಿತು.
ಪೋಟೋ-೧-ಕೆ.ಆರ್.ನಗರ ಪಟ್ಟಣದ ಬಿಜೆಪಿ ವತಿಯಿಂದ ವಿಕಸಿತ ಭಾರತ ಸಂಕಲ್ಪ ಸಮಾವೇಶ, ಸೇವಾ ಜ್ಯೋತಿ ಮೆರವಣಿಗೆ ನಡೆಸಲಾಯಿತು.