Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಕ್ಷದಲ್ಲಿ ಅಶಿಸ್ತು ಕಾರಣ ಕೇಳಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನರಿಗೆ ನೋಟಿಸ್ 

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ : ಮಾಜಿ ಶಾಸಕ ಕೆ. ಮಹದೇವ್

ಪಿರಿಯಾಪಟ್ಟಣ : ಪಕ್ಷದ ಯಾವುದೇ ಪೂರ್ವನುಮತಿ ಪಡೆಯದೇ ಜೆಡಿಎಸ್ ಪಕ್ಷದ ಹೆಸರು ಹಾಗೂ ಕಾರ್ಯಕರ್ತರನ್ನು ಬಳಸಿಕೊಂಡು ರಾಜಕೀಯ ಪಾದಯಾತ್ರೆ ಆಯೋಜಿಸಿದ ಮೈಮುಲ್ ಮಾಜಿ ಅಧ್ಯಕ್ಷ ಪಿಎಂ ಪ್ರಸನ್ನ ರವರಿಗೆ ಜೆಡಿಎಸ್ ಪಕ್ಷದ ಶಿಸ್ತುಪಾಲನ ಸಮಿತಿಯ ವತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಮಾಜಿ ಶಾಸಕ ಕೆ. ಮಹದೇವ್ ತಿಳಿಸಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಟ್ಟದಪುರದಿಂದ ಪಿರಿಯಾಪಟ್ಟಣದವರಿಗೆ ಪಾದಯಾತ್ರೆಯ ಕುರಿತು ಸ್ಥಳೀಯ ಸಂಘಟನಾ ನಾಯಕತ್ವದಿಂದ ಮುಂಚಿತವಾಗಿ ಸೂಚನೆಗಳನ್ನು ಮತ್ತು ಎಚ್ಚರಿಕೆ ನೀಡಲಾಗಿತ್ತು ಆದರೂ ಇವುಗಳಿಗೆ ಮನ್ನಣೆ ನೀಡದೆ ಪಿ.ಎಮ್ ಪ್ರಸನ್ನ ಮತ್ತು ಅವರ ಸಂಗಡಿಗರು ಜೆಡಿಎಸ್ ಪಕ್ಷದ ಹೆಸರು ಮತ್ತು ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡಿರುವುದು ಪಕ್ಷದ ಗಮನಕ್ಕೆ ಬಂದಿದೆ. ಪಕ್ಷದ ರಾಜಕೀಯ ಕಾರ್ಯಕ್ರಮವನ್ನು ಆಯೋಜಿಸುವ ಅಧಿಕಾರವೂ ವೈಯಕ್ತಿಕವಾಗಿ ಯಾರಿಗೂ ಇರುವುದಿಲ್ಲ ಅಂತಹ ಕಾರ್ಯಕ್ರಮಗಳನ್ನ ಆಯೋಜಿಸುವ ಮುನ್ನ ಸಂಬಂಧ ಪಟ್ಟ ಪ್ರಾಧಿಕಾರದ ಅನುಮತಿ ಮತ್ತು ನಾಯಕರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪಿ.ಎಂ ಪ್ರಸನ್ನ ರವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಯುವ ಘಟಕದ ರಾಜ್ಯಾಧ್ಯಕ್ಷರು, ತಾಲೂಕು ಅಧ್ಯಕ್ಷರು ಸೇರಿದಂತೆ ಜಿಲ್ಲಾ ಅಧ್ಯಕ್ಷರ ಅನುಮತಿಯನ್ನು ಪಡೆಯದೆ ಜೆಡಿಎಸ್ ಪಕ್ಷದ ಹೆಸರಿನಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ಯಾರು ಅಧಿಕಾರವನ್ನು ನೀಡಿದ್ದಾರೆ ಪಕ್ಷದ ರಾಷ್ಟ್ರೀಯ, ರಾಜ್ಯ, ಯುವ ಘಟಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕೃತ ಸಂಘಟನೆ ವ್ಯವಸ್ಥೆ ಇರುವಾಗ ಆ ವ್ಯವಸ್ಥೆಯನ್ನು ಬದಿಗೊತ್ತಿ ಸ್ವತಂತ್ರವಾಗಿ ಪಕ್ಷದ ಕಾರ್ಯಕರ್ತರು ಸಂಘಟಿಸಿ ಕಾರ್ಯಕ್ರಮ ನಡೆಸಲು ನಿಮಗೆ ಯಾವ ಸಂಘಟನಾ ಅಧಿಕಾರವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಜೊತೆಗೆ ಪಕ್ಷದ ಆಂತರಿಕ ವಿಚಾರಗಳ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಆಂತರಿಕ ನಾಯಕತ್ವ ಪಕ್ಷದ ಸಂಘಟನಾ ವ್ಯವಸ್ಥೆ ಹಾಗೂ ಮಾಜಿ ಶಾಸಕ ಮತ್ತು ಪಕ್ಷದ ಶಿಸ್ತು ಸಮಿತಿಯ ಸದಸ್ಯರಾದ ಕೆ ಮಹದೇವ್ ಅವರ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರುವುದು ಪಕ್ಷಕ್ಕೆ ಗಮನಕ್ಕೆ ಬಂದಿದೆ ಹೀಗೆ ಹಲವು ಅಂಶಗಳನ್ನು ಗಮನಿಸಿ ಲಿಖಿತ ಸ್ಪಷ್ಟೀಕರಣವನ್ನು ನೋಟಿಸು ತಲುಪಿದ ಏಳು ದಿನಗಳಿಗಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಒಂದು ವೇಳೆ ನಿಗದಿತ ಅವಧಿ ಒಳಗೆ ಸಮರ್ಪಕ ವಿವರಣೆ ಸಲ್ಲಿಸಿದಲ್ಲಿ ಪಕ್ಷದ ನಿಯಮಾನುಸಾರ ನಿಮ್ಮ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಸಮರ್ಥ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಶಿಸ್ತು ಪಾಲನಾ ಸಮಿತಿಯ ತಾಲೂಕು ಅಧ್ಯಕ್ಷ ಜೆ. ಎಸ್ ನಾಗರಾಜು, ಕಾರ್ಯಧ್ಯಕ್ಷ ಗೋವಿಂದೇಗೌಡ, ಸದಸ್ಯರಾದ ಮಂಜುನಾಥ್ ಸಿಂಗ್ , ಆವರ್ತಿ ಸೋಮಶೇಖರ್, ವಕೀಲ ಸತೀಶ್, ಅಶೋಕ್, ತಿಮ್ಮ ನಾಯಕ, ಪ್ರಸನ್ನ, ರಾಜೇಶ್ ಅರಸ್, ರೇಣುಕಾಸ್ವಾಮಿ, ಅಶೋಕ್, ಪಿ.ಬಿ. ಸ್ವಾಮಿ ಉಪಸ್ಥಿತರಿದ್ದರು