Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅರಮನೆ ಸರ್ಕಾರದ್ದು ಎಂಬ ಸಚಿವ ಡಾ. ಯತೀಂದ್ರ ರವರ ಹೇಳಿಕೆ ಅವೈಜ್ಞಾನಿಕ : ಎಲ್.ಆರ್. ಮಹದೆವಸ್ವಾಮಿ


ಮೈಸೂರು; ಮೈಸೂರಿನ ವಿಶ್ವಪ್ರಸಿದ್ಧ ಅಂಬಾವಿಲಾಸ ಅರಮನೆ ಸರ್ಕಾರದ್ದು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಅವ್ಶೆಜ್ಞಾನಿಕವಾಗಿದೆ ಎಂದು ಬಿಜೆಪಿಯ ಮೈಸೂರು ಗ್ರಾಮಾಂತರ ಮಾಜಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಟೀಕಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮೈಸೂರು ಸಂಸ್ಥಾನವನ್ನು 1399 ರಿಂದ 1947 ರವರೆಗೆ ಆಳಿದ ಯದುವಂಶದ ಒಡೆಯರ್ ರಾಜರುಗಳು ಮೈಸೂರು ಅರಮನೆಯ ನಿರ್ಮಾಣ,ಪುನರುತ್ಥಾನ ಮತ್ತು ಸಾಂಸ್ಕöÈತಿಕ ಭವ್ಯತೆಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಈಗಿನ ಕೃಷ್ಣರಾಜಸಾಗರ (ಕೆ.ಆರ್.ಎಸ್ ) ಅಣೆಕಟ್ಟು ಮೈಸೂರು ರಾಜರ ಅತ್ಯಂತ ಶ್ರೇಷ್ಠ ಮತ್ತು ದೂರದೃಷ್ಟಿಯ ಕೊಡುಗೆಯಾಗಿದೆ. ಈ ಅಣೆಕಟ್ಟಿನ ನಿರ್ಮಾಣವು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವಾಗಿದ್ದು, ಇಂದಿಗೂ ಕೋಟ್ಯಾಂತರ ಜನರ ಜೀವನಾಡಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮೈಸೂರು ಪ್ರಾಂತ್ಯದ ಜನತೆಯ ಹಿತದೃಷ್ಟಿ ಬಯಸುತ್ತಿತ್ತು. 1911 ರ ಸುಮಾರಿಗೆ ಮೈಸೂರು ಪ್ರಾಂತ್ಯದಲ್ಲಿ ಬೀಕರ ಬರಗಾಲ ತಲೆದೂಗಿತ್ತು. ರೈತರ ಕಷ್ಟಗಳನ್ನು ಕಣ್ಣಾರೆ ಕಂಡ ಮೈಸೂರಿನ ಮಹಾರಾಜರಾದ ನಾಲ್ವಡಿಕೃಷ್ಣರಾಜ ಒಡೆಯರ್ ಅವರು, ಕಾವೇರಿ ನದಿಯ ಮಧ್ಯೆ ಬೃಹತ್ ಅಣೆಕಟ್ಟು ಕಟ್ಟಲು ನಿರ್ಧರಿಸಿದರು. ಕೃಷಿಗೆ ನೀರಾವರಿ ಒದಗಿಸುವುದು ಮತ್ತು ಶಿವನಸಮುದ್ರ ಜಲವಿದ್ಯುತ್ ಕೇಂದ್ರಕ್ಕೆ ನಿರಂತರವಾಗಿ ನೀರು ಪೂರೈಸಿ, ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ವಿದ್ಯುತ್ ಒದಗಿಸಿ ಪುಣ್ಯದ ಕೆಲಸ ಮಾಡಿರುವುದು ಇದೇ ರಾಜಮನೆತನದವರೆಂಬುದು ಲೋಕರೂಢಿ ಎಂದು ಹೇಳಿದರು.
ಅಣೆಕಟ್ಟನ್ನು ಕಟ್ಟಿ ರೈತರಿಗೆ ಹಾಗೂ ಜನತೆಯ ಕಷ್ಟಗಳಿಗೆ ನೆರವಾಗಲು ಒಡವೆಗಳನ್ನು ಇಟ್ಟ ಮಹಾರಾಜರು :
ಅಣೆಕಟ್ಟಿನ ನಿರ್ಮಾಣಕ್ಕೆ ಅಂದಿನ ಕಾಲದಲ್ಲೇ ಕೋಟ್ಯಂತರ ರೂಪಾಯಿಗಳ ಅವಶ್ಯಕತೆಯಿತ್ತು,ಬ್ರಿಟಿಷ್ ಸರ್ಕಾರದಿಂದ ಧನಸಹಾಯ ಸಿಗದಿದ್ದಾಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧೃತಿಗೆಡಲಿಲ್ಲ. ಅವರು ತಮ್ಮ ಅರಮನೆಯ ಚಿನ್ನಾಭರಣಗಳು, ಬೆಳ್ಳಿ ಪಾತ್ರೆಗಳು ಮತ್ತು ಒಡವೆಗಳನ್ನು ಮುಂಬೈನಲ್ಲಿ ಅಡವಿಟ್ಟು ಹಣವನ್ನು ತಂದು, ಅಣೆಕಟ್ಟಿನ ಕೆಲಸ ನಿಲ್ಲದಂತೆ ನೋಡಿಕೊಂಡರು,ಪ್ರಜೆಗಳ ಮೇಲಿನ ಅವರ ಪ್ರೀತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಸಚಿವ ಡಾ.ಯತೀಂದ್ರ ರವರಿಗೆ ಮತ್ತೊಂದು ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಸಂಸದರು ಹಾಗೂ ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಹಿಂದಿನ ರಾಜಪರಂಪರೆಯAತೆಯೇ ಅಭಿವೃದ್ಧಿಗೆ ಮೊದಲ ಆದ್ಯತೆ ಎಂಬAತೆ, ನಮ್ಮ ಮೈಸೂರು ಭಾಗದಲ್ಲಿ ಸಾರ್ವಜನಿಕರಿಗೆ ನೆರವಾಗುವು ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಒದಗಿಸುತ್ತಾ ಬಂದಿದ್ದಾರೆ.
ಡಾ.ಯತೀಂದ್ರ ರವರಿಗೆ ಮೈಸೂರಿನಲ್ಲಿರುವ ಮಾರುಕಟ್ಟೆಯ ಬಗ್ಗೆ ತಿಳಿಸುವುದಾದರೆ,ಅಲ್ಲಿನ ಪ್ರಸಿದ್ಧ ದೇವ ರಾಜ ಮಾರುಕಟ್ಟೆ ಮತ್ತು ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಮೈಸೂರು ಒಡೆಯರ್ ರಾಜರ ಕೊಡುಗೆಯಾಗಿರುತ್ತದೆ.
ಮೈಸೂರು ರಾಜವಂಶಸ್ಥರು ತಮ್ಮ ಆಳ್ವಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಎರಡೂ ನಗರಗಳಲ್ಲಿ ಅತ್ಯಂತ ವ್ಯವಸ್ಥಿತವಾದ ಮಾರುಕಟ್ಟೆಗಳನ್ನು ರೈತರಿಗೆ ನೆರರವಾಗುವ ನಿಟ್ಟಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಅನ್ನು 1921 ರಲ್ಲಿ ನಿರ್ಮಿಸಿದರು,
ಹೀಗೆ ನಾಡಿನ ಜನತೆ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ತಮ್ಮಿಂದಾಗುವ ಅನೇಕ ಅನುಕೂಲಗಳನ್ನು ಮಾಡಿಕೊಟ್ಟ ನಮ್ಮ ಮೈಸೂರಿನ ರಾಜವಂಶಸ್ಥರ ಕೊಡುಗೆ ಅಪಾರ,ಅವರ ಕೊಡುಗೆಗಳನ್ನು ನಮ್ಮ ಮುಂದಿನ ತಲೆಮಾರು ಸಹ ನೆನೆಯಬೇಕು,ರಾಜಮನೆತನಕ್ಕೆ ಪ್ರಜೆಗಳ ಮೇಲಿದ್ದ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ,ಈ ಹಿನ್ನೆಲೆ ಯತೀಂದ್ರ ರವರ ಹೇಳಿಕೆ ಖಂಡನೀಯವಾದದ್ದು ಯಾವ ಸರ್ಕಾರಗಳೂ ಸಹ ರಾಜಮನೆತನಕ್ಕೆ ಜಾಗ ಕೊಡುವಷ್ಟು ದೊಡ್ಡದಲ್ಲ. ಬದಲಾಗಿ ಪ್ರಜೆಗಳನ್ನು ಈ ಕಾಲಕ್ಕೂ ರಕ್ಷಿಸುವಷ್ಟು ದೊಡ್ಡ ಹೃದಯ ಶ್ರೀಮಂತಿಕೆ ಇರುವ ಶ್ರೀಮಂತಿಕೆಯ ದೊಡ್ಡ ಆಗರ ನಮ್ಮ ರಾಜಮನೆತನವೆಂಬ ಹೆಮ್ಮೆ ನಮಗೆ ಇಂದಿಗು ಮುಂದಿಗೂ ಎಂದೆAದಿಗೂ ಇದೆ ಎಂಬುದಾಗಿ ಯತೀಂದ್ರ ರವರಿಗೆ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು.