
ಮೈಸೂರು; ಪ್ರಸ್ತುತ ದಿನಗಳಲ್ಲಿ ನ್ಯಾಯಪಡೆಯುವ ಮಾರ್ಗಗಳು ಅತ್ಯಂತ ದುಬಾರಿ ಅನ್ನಿಸಿಕೊಳ್ಳುತ್ತಿರುವ ದಿನಗಳಲ್ಲಿ ಪರ್ಯಾಯ ಕಾನೂನು ವೇದಿಕೆಗಳು, ಲೋಕಅದಾಲತ್, ಮಧ್ಯಸ್ಥಿಕೆ ಮೊದಲಾದವುಗಳು ಈಗ ಪರ್ಯಾಯ ವ್ಯವಸ್ಥೆಯ ಮೂಲಕ ನ್ಯಾಯಪಡೆಯುವ ದಾರಿಗಳನ್ನು ಸುಲಭಮಾಡುತ್ತಿವೆ” ಎಂದು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರು ಮತ್ತು ಜಿಲ್ಲಾ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಹೇಳಿದರು.
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಪಿ.ಎಮ್.ಚಿಕ್ಕಬೋರಯ್ಯ ನೆನಪಿನ ಒಂದು ದಿನದ ರಾಷ್ಟಿçÃಯ ವಿಚಾರಸಂಕಿರಣಪರ್ಯಾಯ ವ್ಯಾಜ್ಯ ಪರಿಹಾರ: ನ್ಯಾಯವನ್ನು ಪಡೆಯುವ ಮಾರ್ಗ''-ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಹಾಗೂ ಅಷ್ಟೇ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ ಗ್ರಾಮಾಂತರ ಭಾಗಗಳಲ್ಲಿ ತಲೆದೋರಿದ ಬಿಕ್ಕಟ್ಟು, ವ್ಯಾಜ್ಯಗಳನ್ನು ಸ್ಥಳೀಯ ಮಟ್ಟದಲ್ಲಿ ಮತ್ತು ತುರ್ತಾಗಿ ಪರಿಹರಿಸಿಕೊಳ್ಳಲು ಪಂಚಾಯಿತಿ ವ್ಯವಸ್ಥೆಯನ್ನು ಹೊಂದಿತ್ತು ಎಂಬುದು ಚಾರಿತ್ರಿಕವಾಗಿ ಮಹತ್ವವಾದುದು ಎಂದರು. ಭಾರತ ಸಂವಿಧಾನದ ಆರ್ಟಿಕಲ್ 39ಎ ಅನ್ನು ನಾವೆಲ್ಲ ಗಂಭೀರವಾಗಿ ನೋಡಬೇಕಿದೆ. ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ತತ್ವದ ಮೇಲೆ ಆರ್ಟಿಕಲ್ 39ಎ ನಿಂತಿದೆ. ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವು ಸಿಗುವಂತೆ ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಮಾಡತಕ್ಕದ್ದು ಮತ್ತು ವಿಶೇಷವಾಗಿ ಆರ್ಥಿಕ ಅಥವಾ ಇತರ ಅಸಮರ್ಥತೆಗಳ ಕಾರಣದಿಂದಾಗಿ ಶೋಷಿತ ಸಮುದಾಯಗಳ ಜೊತೆಗೆ, ಈ ದೇಶದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸುವಂತಿಲ್ಲ. ಸೂಕ್ತ ಕಾನೂನು ರಚನೆಯ ಮೂಲಕ ಅಥವಾ ಯೋಜನೆಗಳ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಈ ದೇಶದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದಳಿದ ಪ್ರತಿಯೊಬ್ಬ ಪ್ರಜೆಗೂ ಉಚಿತ ಕಾನೂನು ನೆರವನ್ನು ಒದಗಿಸತಕ್ಕದ್ದು. ಆ ಮೂಲಕ ಬಡವರು ನ್ಯಾಯಪಡೆಯುವ ದಾರಿಗಳನ್ನು ಮುಕ್ತವಾಗಿ ತೆರೆದು ಅವರನ್ನು ಕಾನೂನಿನ ಚೌಕಟ್ಟಿನಲ್ಲಿ ವಂಚಿತರಾಗದAತೆ ನೋಡಿಕೊಳ್ಳುವುದು ರಾಜ್ಯದ ಕರ್ತವ್ಯವಾಗಿದೆ” ಎಂದು ತಿಳಿಸಿದರು.
`ಭಾರತವನ್ನು ಇತಿಹಾಸದ ಪುಟಗಳಲ್ಲಿ ನೋಡುವುದಾದರೆ, ನಮ್ಮ ಹಳ್ಳಿಗಳು ನ್ಯಾಯ ನೀಡುವ ಮತ್ತು ನ್ಯಾಯ ಪಡೆಯುವ ಮಾರ್ಗಗಳನ್ನು ಎಂದಿಗೂ ಕಠಿಣಗೊಳಿಸಿರಲಿಲ್ಲ. ಪಂಚಾಯಿತಿಯ ಮುಖಂಡರು ಕೊಡುವ ತೀರ್ಪಿಗೆ ಎಲ್ಲರೂ ಬದ್ಧವಾಗಿರುತ್ತಿದ್ದುದ್ದನ್ನು ಕಾಣಬಹುದಾಗಿತ್ತು. ಹಳ್ಳಿಗಳ ನೈತಿಕ ಎಲ್ಲೆಗಳನ್ನು ಈ ಬಗೆಯ ಪಂಚಾಯಿತಿಗಳನ್ನು ನಿಯಂತ್ರಿಸುತ್ತಾ ಹದ್ದು ಮೀರಿ ವರ್ತಿಸುವವರನ್ನು ದಂಡಿಸುತ್ತಿತ್ತು. ದೇಶದ ಸಾಮಾಜಿಕ ಸಾಮರಸ್ಯ ಎಂಬುದು ಗ್ರಾಮಪಂಚಾಯಿತಿಗಳಲ್ಲಿ ಇರುತ್ತಿದ್ದುದ್ದನ್ನು ನಾವು ಅಷ್ಟಿಷ್ಟಾದರೂ ಗಮನಿಸಬಹುದಾಗಿದೆ. ನ್ಯಾಯ ನೀಡಿಕೆಯ ಕ್ರಮಗಳನ್ನು ಹೆಚ್ಚು ಸಂಕೀರ್ಣ ಮತ್ತು ಕಠಣಗೊಳಿಸದೆ ಪರ್ಯಾಯ ಕಾನೂನು ವೇದಿಕೆಗಳ ಮೂಲಕ ಎಲ್ಲರಿಗೂ ಕಾನೂನು ನೆರವು ನೀಡಿ, ನಮ್ಮ ಸಂವಿಧಾನದ ಆಶಯಗಳನ್ನು ಈಗ ನಾವು ಎತ್ತಿ ಹಿಡಿಯಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಕೆ.ಎಮ್.ರಾಜಶೇಖರ್, ಪ್ರಾಂಶುಪಾಲ ಡಾ. ಪಿ. ದೀಪು, ಕಾರ್ಯಕ್ರಮದ ಸಂಯೋಜಕರಾದ ಎಮ್.ಜೆ.ಇಂದುಮತಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀದೇವಿ ಕೃಷ್ಣಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ “ಪರ್ಯಾಯ ವ್ಯಾಜ್ಯ ಪರಿಹಾರ: ನ್ಯಾಯವನ್ನು ಪಡೆಯುವ ಮಾರ್ಗ” ಕುರಿತು ಎರಡು ತಾಂತ್ರಿಕ ಗೋಷ್ಠಿಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಎಮ್. ವಿಶ್ವವಿದ್ಯಾಲಯದ ಡೀನ್ ಪ್ರೊ.ಬಿ.ಎಸ್.ರೆಡ್ಡಿ, ಕೇರಳದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಅನೀಶ್ ವಿ. ಪಿಳ್ಳೆöÊ, ಬೆಂಗಳೂರಿನ ವಿ.ವಿ.ಪುರಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ.ಎಸ್.ಸಂಜೀವೇಗೌಡ ಹಾಗೂ ಭದ್ರಾವತಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಚ್.ಹನುಮಂತ ಅವರು ಭಾಗವಹಿಸಿದ್ದರು.