
ಈಗ ನೇರಳೆ ಹಣ್ಣಿನ ಕಾಲ. ಹಲವು ರೋಗಿಗಳಿಗೆ ರಾಮಬಾಣ ವಾಗಿ ಕೆಲಸ ಮಾಡುವ ನೆರಳೆ ಹಣ್ಣು, ಮಳೆಗಾಲದಲ್ಲಿ ವೆರಿ ಡೇಂಜರ್ ! ಮಳೆಗಾಲದಲ್ಲಿ ಈ ಹಣ್ಣನ್ನು ತಿಂದರೆ ಅನಾರೋಗ್ಯಕ್ಕೀಡಾಗುವುದು ಗ್ಯಾರಂಟಿ. ಎಲ್ಲದಕ್ಕಿಂತ ಮುಖ್ಯವಾಗಿ ಯಾರಿಗೆ ಈಗಾಗಲೇ ಶ್ವಾಸಕೋಶದ ತೊಂದರೆ ಇರುತ್ತದೆಯೋ, ಅಂತವರು ಮಳೆಗಾಲದ ನೇರಳೆ ಹಣ್ಣಿನ ತಂಟೆಗೆ ಹೋಗಲೇಬಾರದು. ನೇರಳೆ ಹಣ್ಣು ಸ್ವಾಭಾವಿಕವಾಗಿ ದೇಹದಲ್ಲಿ ತಂಪು ಮೂಡಿಸುವ ಗುಣವನ್ನು ಹೊಂದಿದೆ. ಮಳೆಗಾಲದ ತಣ್ಣನೆಯ ಹವಾಮಾನದ ಜೊತೆಗೆ ಈ ಹಣ್ಣನ್ನು ತಿಂದರೆ ಶ್ವಾಸಕೋಶದ ನರಗಳು ಕುಗ್ಗುವ ಸಾಧ್ಯತೆ ಇರುತ್ತದೆ.ನಮ್ಮ ತಾತ-ಮುತ್ತಾತಂದಿರು ಯಾವುದೇ ವಿಷಯವನ್ನು ಸುಮ್ಮನೆ ಹೇಳಲ್ಲ. ಮಳೆಗಾಲದಲ್ಲಿ ಒಂದು ಮಳೆ ಬಿದ್ದ ತಕ್ಷಣ ನೇರಳೆ ಹಣ್ಣು ತಿನ್ನಬಾರದು ಅನ್ನೋದರ ಹಿಂದೆ ಪ್ರಕೃತಿಯ ನಿಯಮವಿದೆ. ಮಳೆ ಬಿದ್ದಾಗ ವಾತಾವರಣದಲ್ಲಿ ಆರ್ದ್ರತೆ ಅಂದ್ರೆ ತೇವಾಂಶ ಭೀಕರವಾಗಿ ಹೆಚ್ಚಾಗಿಬಿಡುತ್ತದೆ. ಇಂತಹ ಸಮಯದಲ್ಲಿ ನೇರಳೆ ಹಣ್ಣುಗಳು ಮಳೆ ನೀರನ್ನು ಹೀರಿಕೊಂಡು ತಮ್ಮ ನೈಸರ್ಗಿಕ ಗುಣವನ್ನು ಬದಲಾಯಿಸಿಕೊಳ್ಳುತ್ತವೆಮಳೆ ಬಿದ್ದಾಗ ನೇರಳೆ ಹಣ್ಣಿನ ಮೇಲ್ಭಾಗದ ತೆಳುವಾದ ಚರ್ಮದ ಮೇಲೆ ಕಣ್ಣಿಗೆ ಕಾಣದ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳು ಮತ್ತು ಫಂಗಸ್ ಕುಳಿತುಕೊಳ್ಳುವ ಸಾಧ್ಯತೆ ತುಂಬಾನೇ ಜಾಸ್ತಿ ಇರುತ್ತೆ. ನಾವು ಎಷ್ಟೇ ಚೆನ್ನಾಗಿ ನೀರಿನಲ್ಲಿ ತೊಳೆದರೂ ಹಣ್ಣಿನ ಸೂಕ್ಷ÷್ಮ ರಂಧ್ರಗಳಲ್ಲಿ ಈ ಜೀವಿಗಳು ಅಡಗಿ ಕುಳಿತಿರುತ್ತವೆ. ಮಳೆ ಬಿದ್ದ ತಕ್ಷಣ ಈ ಹಣ್ಣನ್ನು ತಿಂದರೆ ಆ ಕೊಳಕು ನೇರವಾಗಿ ನಮ್ಮ ಹೊಟ್ಟೆ ಸೇರಿ ಇನ್ಫೆಕ್ಷನ್ ಉಂಟುಮಾಡುತ್ತದೆ.ಯಾರಿಗೆ ಈಗಾಗಲೇ ಶ್ವಾಸಕೋಶದ ತೊಂದರೆ ಇರುತ್ತದೆಯೋ, ಅಂತವರು ಮಳೆಗಾಲದ ನೇರಳೆ ಹಣ್ಣಿನ ತಂಟೆಗೆ ಹೋಗಲೇಬಾರದು. ನೇರಳೆ ಹಣ್ಣು ಸ್ವಾಭಾವಿಕವಾಗಿ ದೇಹದಲ್ಲಿ ತಂಪು ಮೂಡಿಸುವ ಗುಣವನ್ನು ಹೊಂದಿದೆ. ಮಳೆಗಾಲದ ತಣ್ಣನೆಯ ಹವಾಮಾನದ ಜೊತೆಗೆ ಈ ಹಣ್ಣನ್ನು ತಿಂದರೆ ಶ್ವಾಸಕೋಶದ ನರಗಳು ಕುಗ್ಗುವ ಸಾಧ್ಯತೆ ಇರುತ್ತದೆ.ಯಾರಿಗೆ ಸಣ್ಣದಾಗಿ ನೆಗಡಿ ಅಥವಾ ಕೆಮ್ಮು ಇರುತ್ತದೆಯೋ, ಅವರು ಮಳೆ ಬಿದ್ದ ನಂತರ ನೇರಳೆ ಹಣ್ಣು ತಿಂದರೆ ಅವರ ಕೆಮ್ಮು ನೆಕ್ಸ್÷್ಟ ಲೆವೆಲ್ಗೆ ಜಾಸ್ತಿ ಆಗಿಬಿಡುತ್ತದೆ. ಇದು ಗಂಟಲಿನಲ್ಲಿ ಕಫವನ್ನು ಹೆಚ್ಚು ಮಾಡುವುದಲ್ಲದೆ, ಉಸಿರಾಟದ ಸಮಸ್ಯೆಯನ್ನು ಕ್ರಿಯೇಟ್ ಮಾಡುತ್ತದೆ. ಈ ಹಣ್ಣಿನಲ್ಲಿರೋ ಆಮ್ಲೀಯತೆ ಮತ್ತು ತಂಪು ಗುಣವು ಗಂಟಲಿನಲ್ಲಿ ಕಿರಿಕಿರಿಯನ್ನು ಉಂಟುಮಾಡಿ ಕೆಮ್ಮಿನ ತೀವ್ರತೆಯನ್ನು ಡಬಲ್ ಮಾಡುತ್ತದೆ.ನಿಮಗೆ ಅಸ್ತಮಾ ಅಥವಾ ಅಲರ್ಜಿಯಂತಹ ಉಸಿರಾಟದ ಕಾಯಿಲೆಗಳು ಇದ್ದರೆ ಮಳೆಗಾಲದಲ್ಲಿ ನೇರಳೆ ಹಣ್ಣಿನಿಂದ ದೂರ ಇರುವುದೇ ಬುದ್ಧಿವಂತಿಕೆ. ಮಳೆ ಬಿದ್ದ ನಂತರ ಈ ಹಣ್ಣನ್ನು ತಿಂದರೆ ಎದೆಯಲ್ಲಿ ಗಂಟುಕಟ್ಟಿದ ಹಾಗೆ ಆಗಿ, ಸಡನ್ ಆಗಿ ಅಸ್ತಮಾ ಅಟ್ಯಾಕ್ ಆಗೋ ಚಾನ್ಸಸ್ ಇರುತ್ತೆ. ಹಾಗಾಗಿ ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಈ ಸಮಯದಲ್ಲಿ ಎಚ್ಚರಿಕೆ ಅಗತ್ಯ.ಮಳೆಗಾಲದಲ್ಲಿ ನಮ್ಮ ದೇಹದ ಜೀರ್ಣಕ್ರಿಯೆ ಸಹಜವಾಗಿಯೇ ಸ್ವಲ್ಪ ಸ್ಲೋ ಆಗಿ ಇರುತ್ತೆ. ಅದರ ನಡುವೆ ಮಳೆ ಬಿದ್ದ ತಕ್ಷಣ ಹಣ್ಣಾದ ನೇರಳೆ ಹಣ್ಣುಗಳನ್ನು ತಿಂದರೆ ಹೊಟ್ಟೆನೋವು, ಗ್ಯಾಸ್ಟಿçಕ್ ಅಥವಾ ಭೇದಿಯಂತಹ ಜೀರ್ಣಕ್ರಿಯೆಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಮಳೆ ನೀರು ತಗುಲಿದ ಹಣ್ಣುಗಳು ಹೊಟ್ಟೆಯ ಒಳಗೆ ಹೋದಾಗ ಜಠರಾಗ್ನಿಯನ್ನು ಮಂದಗತಿ ಮಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ನೇರಳೆ ಹಣ್ಣು ತಿನ್ನಬಾರದು ಎಂದು ಈಗ ಗೊತ್ತಾಯಿತಲ್ಲ.