
ಮೈಸೂರು; ಅಭ್ಯುದಯ ಮಹಿಳಾ ಸಮಾಜದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಪಿಗೆ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಮತ್ತು ಮಾಜಿ ಮೇಯರ್ ಬಿ .ಎಲ್. ಭೈರಪ್ಪನವರಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಅಭ್ಯುದಯ ಮಹಿಳಾ ಸಮಾಜದ ಅಧ್ಯಕ್ಷೆ ಅಂಬಿಕ, ಉಪಾಧ್ಯಕ್ಷೆ ಸುಜಾತ, ಕಾರ್ಯದರ್ಶಿ ಮಧುರ ಮೈತ್ರಿ , ಉಪ ಕಾರ್ಯದರ್ಶಿ ಗಾಯತ್ರಿ ಜಯರಾಮ್, ಗೌರವಾಧ್ಯಕ್ಷೆ ಉಷಾ ಸಿಂಗ್ , ಸಂಸ್ಥಾಪಕ ಸದಸ್ಯರಾದ ಡಾ. ಸುಶೀಲಾ ನಾಗರಾಜು, ಸಮಾರಂಭದ ಸಂಚಾಲಕರಾದ ಶೈಲಜಾ ಮಹದೇವಸ್ವಾಮಿ ಹಾಗೂ ತಂಡದವರು, ಸಮಾಜದ ಸದಸ್ಯರು ಮತ್ತು ಜೆಪಿ ನಗರದ ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರೆಲ್ಲಾ ಹಸಿರು ಸೀರೆಯನ್ನುಟ್ಟು ಗಮನ ಸೆಳೆದರು.