Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಏಷ್ಯಾ ಗ್ರ್ಯಾಂಡ್‌ ಮಾಸ್ಟರ್ ಪ್ರಾಂಜಲಿ ರಾಜ್ ಎ.

ಮೈಸೂರು: ಮೈಸೂರಿನ ಜೆಎಸ್‌ಎಸ್ ಲೇಔಟ್ 2ನೇ ಹಂತದ ಪುಟ್ಟ ಪ್ರತಿಭೆ ಪ್ರಾಂಜಲಿ ರಾಜ್ ಎ. ಅವರು ತಮ್ಮ ಅದ್ಭುತ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕೇವಲ 2 ವರ್ಷ 8 ತಿಂಗಳ ವಯಸ್ಸಿನಲ್ಲೇ, 22 ಕನ್ನಡ ಹಾಡುಗಳನ್ನು ಹಾಡಿದ ಸಾಧನೆಗಾಗಿ “ಏಷ್ಯಾ ಗ್ರ್ಯಾಂಡ್‌ ಮಾಸ್ಟರ್ 2026” ಪ್ರಶಸ್ತಿ ಪಡೆದ ಮೊದಲ ಬಾಲ ಪ್ರತಿಭೆಯಾಗಿದ್ದಾರೆ.
ಇದರ ಜೊತೆಗೆ, ಅತಿ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿದ ಪುಟ್ಟ ಮಗುವೆಂಬ ದಾಖಲೆಯೊಂದಿಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್್ಸ 2024″ರಲ್ಲಿ ಸ್ಥಾನ ಪಡೆದು ಮತ್ತೊಂದು ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಕನ್ನಡ ಭಾಷೆ ಹಾಗೂ ಕನ್ನಡ ಹಾಡುಗಳ ಮೇಲಿನ ಪ್ರೀತಿ ಮತ್ತು ಚಿಕ್ಕ ವಯಸ್ಸಿನಲ್ಲೇ ತೋರಿದ ಅದ್ಭುತ ಪ್ರತಿಭೆ ಪ್ರಾಂಜಲಿಯನ್ನು ವಿಶೇಷವಾಗಿಸಿದೆ. ಅವರ ಸಾಧನೆ ಕೇವಲ ಅವರ ಕುಟುಂಬದ ಹೆಮ್ಮೆ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಹೆಮ್ಮೆಯಾಗಿದೆ ಮತ್ತು ಇತರ ಮಕ್ಕಳಿಗೂ ಪ್ರೇರಣೆಯಾಗಿದೆ.
ಪ್ರಾಂಜಲಿ ರಾಜ್ ಎ. ಅವರು ರಂಜಿತಾ ಎಂ.ಎಲ್. ಹಾಗೂ ಅನಿಲ್ ರಾಜ್ ಎಂ.ಬಿ. ಅವರ ಪುತ್ರಿ. ಅನಿಲ್ ರಾಜ್ ಅವರು ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಾಧನೆಯ ಹಿಂದೆ ಕುಟುಂಬದ ಅಪಾರ ಪ್ರೋತ್ಸಾಹವಿದೆ.

ಮಾಸ್ಟರ್ ಪ್ರಾಂಜಲಿ ರಾಜ್ ಎ.
ಮೈಸೂರು: ಮೈಸೂರಿನ ಜೆಎಸ್‌ಎಸ್ ಲೇಔಟ್ 2ನೇ ಹಂತದ ಪುಟ್ಟ ಪ್ರತಿಭೆ ಪ್ರಾಂಜಲಿ ರಾಜ್ ಎ. ಅವರು ತಮ್ಮ ಅದ್ಭುತ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕೇವಲ 2 ವರ್ಷ 8 ತಿಂಗಳ ವಯಸ್ಸಿನಲ್ಲೇ, 22 ಕನ್ನಡ ಹಾಡುಗಳನ್ನು ಹಾಡಿದ ಸಾಧನೆಗಾಗಿ “ಏಷ್ಯಾ ಗ್ರಾ÷್ಯಂಡ್‌ಮಾಸ್ಟರ್ 2026” ಪ್ರಶಸ್ತಿ ಪಡೆದ ಮೊದಲ ಬಾಲ ಪ್ರತಿಭೆಯಾಗಿದ್ದಾರೆ.