
ಎಚ್.ಡಿ.ಕೋಟೆ : ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ದ ವತಿಯಿಂದ ಅಂಕನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ಸ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಒಕ್ಕೂಟದ ತಾಲ್ಲೂಕು ನಿರ್ದೇಶಕ ಶಿವಕುಮಾರ ಅವರು ಮಾತಾನಾಡಿ, ಮಕ್ಕಳ ಭವಿಷ್ಯ ಕ್ಕೆ ಓದುವುದು ಬರೆಯುವುದರ ಮುಖಾಂತರ ನಿಮ್ಮ ಭವಿಷ್ಯ ಉಜ್ವಲವಾಗಬೇಕು ಎಂಬ ನಿಟ್ಟಿಲಿನಲ್ಲಿ ರಾಜ್ಯಕ್ಕೆ ದೇಶಕ್ಕೆ ಮಾದರಿಯಾಗಬೇಕೆಂಬುದು ಎಎಂಬುದಾಗಿ ಕಿವಿಮಾತು ಹೇಳಿದರು.
ಈ ಸಂದರ್ಭ ಶಿಕ್ಷಣ ತಜ್ಞರು ಮಾರ್ಗದರ್ಶಕರು ಆದ ಡಾ.ಅಚ್ಚುತರಾವ್, ವೆಂಕಟೇಶ್ ಬಾಬು, ರಾಧಾ ಹಾಗೂ ಶಾಲಾ ಮುಖ್ಯಪಾಧ್ಯಾಯರು ಶಿಕ್ಷಕರು ಹಾಜರಿದ್ದರು.